Monday, December 11, 2023
Homeಮಲೆನಾಡುಚಿಕ್ಕಮಗಳೂರುಚಿಕ್ಕಮಗಳೂರು: ಮಳೆಗಾಗಿ ಮಸೀದಿಯಲ್ಲಿ ಮುಸ್ಲಿಂ ಸಮುದಾಯದಿಂದ ಪ್ರಾರ್ಥನೆ‌

ಚಿಕ್ಕಮಗಳೂರು: ಮಳೆಗಾಗಿ ಮಸೀದಿಯಲ್ಲಿ ಮುಸ್ಲಿಂ ಸಮುದಾಯದಿಂದ ಪ್ರಾರ್ಥನೆ‌

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ರಾಜ್ಯದ ಹಲವೆಡೆ ಜಲಾಶಯಗಳು ಬರಿದಾಗುವ ಹಂತವನ್ನು ತಲುಪಿವೆ. ಹಲವು ಜಿಲ್ಲೆಗಳಲ್ಲಿ ಅನ್ನದಾತರು ದೇವವ ಮೊರೆ ಹೋಗುತ್ತಿದ್ದಾರೆ. ಅದೇ ರೀತಿ ಕಾಫಿನಾಡಿನ ಚಿಕ್ಕಮಗಳೂರು ನಗರದಲ್ಲಿ ಬಡಮಕಾನ್‌ ಮಸೀದಿಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ನೀರಿಲ್ಲದೆ ಜನ-ಜಾನುವಾರುಗಳಿಗೆ ತೀವ್ರ ಸಮಸ್ಯೆಯಾಗಿದೆ. ಮಳೆ ಬಾರದಿದ್ದರೆ ಕುಡಿಯೋ ನೀರಿಗೂ ಹಾಹಾಕಾರ ಎದುರಾಗಲಿದೆ.

ಇದನ್ನೂ ಓದಿ; ಚಿಕ್ಕಮಗಳೂರು: ಟ್ರೆಕ್ಕಿಂಗ್ ಗೆಂದು ತೆರಳಿದ್ದ 27ರ ಯುವಕ ಹೃದಯಾಘಾತದಿಂದ ಸಾವು

ಈ ನಿಟ್ಟಿನಲ್ಲಿ ರೈತ ಸಮುದಾಯ ಕೃಷಿಯತ್ತ ಮುಖ ಮಾಡುತ್ತಿಲ್ಲ. 15 ದಿನದಲ್ಲಿ ಮಳೆ ಬಾರದಿದ್ದರೆ ಮನುಕುಲವೇ ನೀರಿಗಾಗಿ ಪರದಾಡಲಿದೆ. ಕಾಲ- ಕಾಲಕ್ಕೆ ಮಳೆಯಾಗುವಂತೆ ದರ್ಗಾದಲ್ಲಿ ಮುಸ್ಲಿಂ ಸಮುದಾಯ ಮುಖಂಡರು ಪ್ರಾರ್ಥನೆ ಸಲ್ಲಿಸಿದರು.

Read Next News: ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಸರಿಯಾಗಿ ರೆಸ್ಪಾನ್ಸ್ ಮಾಡ್ತಿಲ್ವಾ? ಠಾಣೆ ಸಿಬ್ಬಂದಿ ಕುರಿತು ದೂರು ನೀಡೋದಕ್ಕೆ QR ಕೋಡ್ ವ್ಯವಸ್ಥೆ.. ಬಳಸೋಸು ಹೇಗೆ?

ಪೊಲೀಸ್ ಠಾಣೆಯಲ್ಲಿ ಸಹಾಯ ಕೋರಿ ಬಂದವರಿಗೆ ಸ್ಪಂದನೆ ದೊರಕುತ್ತಿಲ್ಲವೇ?, ಸಿಬ್ಬಂದಿ ಸೌಜನ್ಯದಿಂದ ನಡೆದುಕೊಳ್ಳುತ್ತಿಲ್ಲವೆ?, ಹಾಗಾದರೆ ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡಿ ಹಿರಿಯ ಅಧಿಕಾರಿಗಳ ಗಮನಕ್ಕೆ ತನ್ನಿ. ಹೌದು, ಇಂತಹದೊಂದು ಹೊಸ ವ್ಯವಸ್ಥೆಯನ್ನು ಜಿಲ್ಲಾ ಪೊಲೀಸ್ ಇಲಾಖೆ ಜಾರಿಗೆ ತಂದಿದ್ದು, ಇದಕ್ಕೆ “ಅವಲೋಕನ” ಎಂದು ಹೆಸರಿಸಿದೆ.

ಇದನ್ನೂ ಓದಿ; ಐಪಿಎಲ್ ಕಂಪನಿಯ ಪಾಲಿಹೈಲೆಟ್ ಲಘು ಪೋಷಕಾಂಶ ಕಳಪೆ; ಆಡಳಿತ ಮಂಡಳಿ ಕೃಷಿ ಇಲಾಖೆಗೆ ದೂರು

ಮೊಬೈಲ್ ನಲ್ಲೇ ಕ್ಯೂಆರ್‌ ಕೋಡ್‌ ಸ್ಕ್ಯಾನ್ ಮಾಡಿ ದೂರು ದಾಖಲು:
ದೂರು ದಾಖಲಿಸಲು ಠಾಣೆಗೆ ಹೋದಾಗ ಆದ ಅನುಭವಗಳನ್ನು ಹಂಚಿಕೊಳ್ಳಲು ಈ ವ್ಯವಸ್ಥೆ ತರಲಾಗಿದೆ.

ದೂರು ದಾಖಲಿಸುವುದು ಹೇಗೆ;
ತಮ್ಮ ಮೊಬೈಲ್ ದೂರವಾಣಿಯಲ್ಲಿ ಕ್ಯೂಆರ್‌ ಕೋಡ್‌ ಸ್ಕ್ಯಾನ್ ಮಾಡಿ ಠಾಣೆಯ ಹೆಸರು, ಠಾಣೆಗೆ ಹೋದ ಉದ್ದೇಶ, ದೂರವಾಣಿ ಸಂಖ್ಯೆ, ದೂರಿಗೆ ಸ್ವೀಕೃತಿ ನೀಡಲಾಗಿದೆಯೇ, ಎಂಬ ಇತ್ಯಾದಿ ಅನುಭವಗಳ್ನು ದಾಖಲಿಸಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.

ಯಾವುದರಲ್ಲಿ ಸ್ಕ್ಯಾನ್ ಮಾಡಬಹುದು;
ತಮ್ಮ ಮೊಬೈಲ್‌ನಲ್ಲಿರುವ ಕ್ಯು.ಆರ್ ಕೋಡ್ (Q.R code) ಸ್ಕ್ಯಾನರ್ ಅಥವಾ ಗೂಗಲ್ ಲೆನ್ಸ್, (Google lens)ಕ್ರೋಮ್, (Chrome) ಕ್ಯು.ಆರ್ ಕೋಡ್ ಸ್ಕ್ಯಾನರ್ ಇತ್ಯಾದಿ ಬಳಸಿ ಸ್ಕ್ಯಾನ್ ಮಾಡಿದ್ದಲ್ಲಿ ಅವಲೋಕನ ಪುಟದ ಲಿಂಕ್ ತೆರೆದುಕೊಳ್ಳುತ್ತದೆ.

ದೂರುದಾರರು ನೀಡುವ ಎಲ್ಲಾ ಪ್ರತಿಕ್ರಿಯೆಗಳು ಗೌಪ್ಯವಾಗಿ ಇಡಲಾಗುತ್ತದೆ:
ಪೊಲೀಸರ ವರ್ತನೆ ಉತ್ತಮವೇ, ಸಾಧಾರಣವೇ, ತೃಪ್ತಿಕರವಾಗಿಲ್ಲವೇ ಎಂಬುದನ್ನು ನಮೂದಿಸಲು ಅವಕಾಶ ಇದೆ. ದೂರುದಾರರು ನೀಡುವ ಎಲ್ಲಾ ಪ್ರತಿಕ್ರಿಯೆಗಳು ನೇರವಾಗಿ ನನ್ನ ಕಚೇರಿಗೆ ಬರಲಿದೆ. ಅದನ್ನು ಗೌಪ್ಯವಾಗಿ ಇಡಲಾಗುತ್ತದೆ’ ಎಂದು ವಿವರಿಸಿದ್ದಾರೆ.

ಸಾರ್ವಜನಿಕರು ನಿರ್ಭಯವಾಗಿ ವಿವರ ದಾಖಲಿಸಬಹುದು. ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಯನ್ನು ಜನಸ್ನೇಹಿ ಆಗಿಸುವುದು ಇದರ ಉದ್ದೇಶ. ಕಹಿ ಅನುಭವ ಆಗಿದ್ದಲ್ಲಿ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Most Popular

Recent Comments