ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂಗಳಿಂದ ಸರಕುಗಳನ್ನು ಖರೀದಿಸದಂತೆ ಭಾಷಣ ಮಾಡುತ್ತಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಘಟನೆಯೂ ಬೆಂಗಳೂರಿನಲ್ಲಿ ನಡೆದಿರುವಂತೆ ಬಿಂಬಿಸಲಾಗಿತ್ತು. ವಿಡಿಯೋದ ಅಸಲಿಯತ್ತಿನ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿರುವ ಕರ್ನಾಟಕ ಪೊಲೀಸರು ನಿಜಾಂಶವನ್ನು ಬಯಲು ಮಾಡಿದ್ದಾರೆ.
ಇದನ್ನೂ ಓದಿ; ಚಿಕ್ಕಮಗಳೂರು: ಟ್ರೆಕ್ಕಿಂಗ್ ಗೆಂದು ತೆರಳಿದ್ದ 27ರ ಯುವಕ ಹೃದಯಾಘಾತದಿಂದ ಸಾವು
ವೈರಲ್ ವೀಡಿಯೋದಲ್ಲಿ ಏನಿತ್ತು?:
“ಹಿಂದೂಗಳಿಂದ ಏನನ್ನೂ ಖರೀದಿಸಬಾರದು, ನಮಗೆ 5 ವರ್ಷಗಳ ಅಧಿಕಾರವಿದೆ, ಹಿಂದೂಗಳ ಪೆಟ್ರೋಲ್ ಪಂಪ್‌ಗಳಲ್ಲಿ ಪೆಟ್ರೋಲ್ ಖರೀದಿಸಬೇಡಿ, ಹಿಂದೂ ಮೆಡಿಕಲ್ ಶಾಪ್‌ಗಳಲ್ಲಿ ಔಷಧಿ ತೆಗೆದುಕೊಳ್ಳಬೇಡಿ” ಎಂದು ನಿರ್ಧರಿಸಿದ್ದಾರೆ. ಅವರ ಅಂಗಡಿಗಳಲ್ಲಿ ಖರೀದಿ ಮಾಡಿ ಅವರಿಗೆ ನಾವು ಯಾಕೆ ಲಾಭ ಮಾಡಬೇಕು ಎಂದು ನಿರ್ಧರಿಸಿದ್ದಾರೆ. ಹಿಂದೂಗಳ ವ್ಯವಹಾರವನ್ನು ಬಹಿಷ್ಕರಿಸಿ ಎಂದು ಬೆಂಗಳೂರಿನ ಮುಸ್ಲಿಮರು ಕರೆ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ; ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್ ವರ್ಗಾವಣೆಗೆ ಮಹಿಳೆ ಕಣ್ಣೀರು
ವೈರಲ್ ವಿಡಿಯೋದ ಅಸಲೀಯತ್ತೇನು?;
ಪ್ರಸ್ತುತ ಹರಿದಾಡುತ್ತಿರುವ ವೈರಲ್ ವೀಡಿಯೊ 2019 ರಲ್ಲಿ ರಾಜಸ್ಥಾನದ ಬಾರ್ಮರ್‌ನಲ್ಲಿ ನಡೆದಿರುವುದಕ್ಕೆ ಸಂಬಂಧಿಸಿದ್ದು. ಈ ಘಟನೆ ಬೆಂಗಳೂರಿಗೆ ಅಥವಾ ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ. ಇದೇ ವಿಡಿಯೋ ಈ ವರ್ಷದ ಮಾರ್ಚ್ನಲ್ಲಿಯೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಆ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಬಾರ್ಮರ್ ಪೊಲೀಸರು, 28-6-2019 ರಂದು, ಭೋಜಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ, ರಾಮ್ಸಾರ್‌ನ ಗಗಾರಿಯಾ ಗ್ರಾಮದ ಪೆಟ್ರೋಲ್ ಪಂಪ್‌ನ ಬಳಿ ನಡೆದ ಖಾಸಗಿ ಬಸ್ ಅಪಘಾತದಿಂದಾಗಿ ಒಬ್ಬರು ಸಾವನ್ನಪ್ಪಿದ್ದರು ಮತ್ತು ಮೂವರು ಗಾಯಗೊಂಡಿದ್ದರು. ಮೃತರ ಸಂಬಂಧಿಕರು ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಬೇಕೆಂದು ಪ್ರತಿಭಟಿಸಿ ಬೇಡಿಕೆ ಸಲ್ಲಿಸಿದ್ದರು. ಅದೇ ಸಮಯದಲ್ಲಿ, ಅಂತಹ ಭಾಷಣವನ್ನು ಸತ್ತವರ ಸಂಬಂಧಿಕರು ಸಹ ಮಾಡಿದ್ದರು. ಆ ವೇಳೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿತ್ತು ಎಂದು ಬಾರ್ಮರ್ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಪೀರಿಯಡ್ಸ್ ಆಗಿರೋ ಡಾಕ್ಟರ್ ಹತ್ರ ಸರ್ಜರಿ ಮಾಡಿಸಿಕೊಳ್ತೀರಾ ಇಲ್ವಾ?’
- ಒಂದೇ ದಿನ ನೂರಾರು ಫುಲ್ ಹೆಲ್ಮೇಟ್ ಕಳ್ಳತನ
- ಏರುತ್ತಿದೆ ಕಾಫಿ ಬೆಲೆ, ಬೆಳೆಗಾರರಿಗೆ ಸಿಹಿ ಸುದ್ದಿ, ಗ್ರಾಹಕರಿಗೆ ಕಹಿ ಸುದ್ದಿ
ಇನ್ನು ಪ್ರಸ್ತುತ ವೈರಲ್ ಆಗಿರುವ ವಿಡಿಯೋ ಬೆಂಗಳೂರು ಅಥವಾ ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ. ಈ ರೀತಿಯ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳದಂತೆ ಸಾರ್ವಜನಿಕರಿಗೆ ಪೊಲೀಸರು ಸೂಚನೆ ನೀಡಿದ್ಧಾರೆ.