Saturday, June 10, 2023
Homeಬಯಲುಸೀಮೆಡೋಂಗಿ ಮುಸ್ಲಿಂ ಬಾಬನಿಗೆ ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು

ಡೋಂಗಿ ಮುಸ್ಲಿಂ ಬಾಬನಿಗೆ ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು

ಗದಗದ ಗಂಗಿಮಡಿಯ ಆಶ್ರಯ ಕಾಲೋನಿಯಲ್ಲಿ ಒಬ್ಬ ಆಸೀಫ್ ಜಾಗಿರದಾರ್ ಎಂಬ ಡೋಂಗಿ ಬಾಬನಿಗೆ ಅಕ್ಕಪಕ್ಕದವರು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಈತನ ಸ್ವಂತ ಊರು ವಿಜಯಪುರ ಎಸ್ ಎಂ ಕೃಷ್ಣಾ ನಗರದ ಪತ್ನಿಯ ಮನೆಯಲ್ಲೇ ಬಹಳ ಸಮಯ ಠಿಕಾಣಿ ಹೂಡಿದ್ದ ಈತ. ಹಣ ಸಂಪಾದನೆಗೆ ಬೇರೆ ದಾರಿಯನ್ನು. ಹುಡುಕಿ ಕೊಂಡಿದ್ದ. ಈತನಿಗೆ ಜನರನ್ನು ಮಾಟ, ಮಂತ್ರ, ತಂತ್ರಗಳನ್ನು ಹೂಡುವುದೇ ಕೆಲಸ. ಅನ್ಯ ದಾರಿಗಳಿಂದ ಹಣ ಸಂಪಾದನೆ ಮಾಡುವುದು ಈತನಿಗೆ ತುಂಬಾ ಒಳ್ಳೆಯ ಕೆಲಸ ಅನ್ನಿಸಿದೆ,ಆದ ಕಾರಣ ಈತನು ಮಾಟ ಮಂತ್ರ ಎಂದು ಹೇಳುತ್ತಾ ಜನರಿಗೆ ಹೆದರಿಸುತ್ತಿದ್ದ.

ಮೈಮೇಲೆ ದೆವ್ವ ಬಂದಂತೆ ನಟನೆ ಮಾಡುವುದು, ಕೊತ ಕೊತ ಕುದಿಯುವ ಎಣ್ಣೆಗೆ ಕೈ ಹಾಕುವುದು ಅದರಿಂದ ಬೋಂಡ, ಬಜ್ಜಿ ತೆಗೆದಂತೆ ನಾಟಕ ಮಾಡುವುದು ಇವನ ನಾಟಕೀಯ ತನ.
ಇವೆಲ್ಲವನ್ನೂ ಪವಾಡ ಎಂಬಂತೆ ಜನರ ದೃಷ್ಟಿಯಲ್ಲಿ ಬಿಂಬಿಸುವುದು ಈತನ ಮುಖ್ಯ ಉದ್ದೇಶ. ಹಿಂದೂ ದೇವತೆಗಳನ್ನು ನಿಂದನೆ ಮಾಡುವುದು ಇವನ ಮುಖ್ಯ ಕೆಲಸವಾಗಿತ್ತು. ಇದಲ್ಲದೆ  ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದ ಹಿಂದೂ ಹುಡುಗಿಯರನ್ನು ಈತನ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುವುದು ಮುಖ್ಯ ಆರೋಪ ಎಂದು ತಿಳಿದುಬಂದಿದೆ.
ಈ ಡೋಂಗಿ ಸಾಹೇಬ ಬಾಬಾನ ಮೋಸದ ಜಾಲ ಬಯಲಾಗುತ್ತಿದ್ದಂತೆ ಆಕ್ರೋಶಗೊಂಡ ಜನರು ಡೋಂಗಿ ಮಹಾಶಯ ರಿಗೆ ಸರಿಯಾಗಿ ಗೂಸಾ ಕೊಟ್ಟಿದ್ದಾರೆ.  ನನ್ನಿಂದ ತಪ್ಪಾಗಿದೆ ನಾನು ಮೋಸ ಮಾಡಿದ್ದೇನೆ ಎಂದರು ಸಹ ಜನರು ಬಿಡದೆ ಹಿಗ್ಗಾ-ಮುಗ್ಗ ಥಳಿಸಿದ್ದಾರೆ.

Most Popular

Recent Comments