ಬೆಂಗಳೂರು: (ನ್ಯೂಸ್ ಮಲ್ನಾಡ್ ವರದಿ) ಜೆಡಿಎಸ್ ಪಕ್ಷ 49 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ಬೆಂಗಳೂರಿನ ಜೆಪಿ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದು, ಬಿಡುಗಡೆಗೂ ಮುನ್ನ ಹಾಸನ ಟಿಕೆಟ್ ವಿಚಾರವಾಗಿ ಹೆಚ್.ಡಿ ಕುಮಾರಸ್ವಾಮಿ ಮತ್ತು ಎಚ್.ಡಿ ರೇವಣ್ಣ ಸಭೆ ನಡೆಸಿದ್ದರು.
ಕೊನೆಗೂ ಹಾಸನ ಟಿಕೆಟ್ ಸ್ವರೂಪ್ ಪ್ರಕಾಶ್ ಪಾಲಾಗಿದೆ.
ವೈ. ಎಸ್. ವಿ ದತ್ತಾ ಗೆ ಟಿಕೆಟ್ ಫಿಕ್ಸ್;
ಇನ್ನೂ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ನಂತರ ಮರಳಿ ಜೆಡಿಎಸ್ ಸೇರ್ಪಡೆ ಯಾದ ದತ್ತಾ ಕಡೂರು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಫಿಕ್ಸ್ ಆಗಿದ್ದು 49 ಅಭ್ಯರ್ಥಿಗಳ ಪಟ್ಟಿ ಯಲ್ಲಿ ದತ್ತಾ ಅವರ ಹೆಸರು ಕೂಡ ಇದೆ.
ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಪಕ್ಷ ಸೇರ್ಪಡೆ:
ಇದೇ ಸಂದರ್ಭದಲ್ಲಿ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಹಾಗೂ ಅರಸೀಕೆರೆಯ ಬಿಜೆಪಿ ಟಿಕೆಟ್ ವಂಚಿತ ಎನ್.ಆರ್ ಸಂತೋಷ್ ಜೆಡಿಎಸ್ ಪಕ್ಷ ಸೇರಿದರು. ಈ ಕುರಿತಂತೆ ಬೆಳಗ್ಗೆ ನ್ಯೂಸ್ ಮಲ್ನಾಡ್ Exclusive ವರದಿ ಮಾಡಿತ್ತು.
ಇದನ್ನೂ ಓದಿ; ಟ್ರ‍್ಯಾಕ್ಟರ್‌ನ ಹಿಂಬದಿ ಡಾಬರ್ ರಾಡ್‌ಗೆ ತಲೆ ತಾಗಿ ಒಂದೂವರೆ ವರ್ಷದ ಮಗು ಸಾವು
MP ಕುಮಾರಸ್ವಾಮಿ ಪಕ್ಷ ಸೇರಿದ್ದಕ್ಕೆ ಬಿಬಿ ನಿಂಗಯ್ಯ ಅಸಮಾಧಾನ; ನಾಳೆ ಅಂತಿಮ ನಿರ್ಧಾರ ಘೋಷಿಸುವ ಸಾಧ್ಯತೆ
ಶಾಸಕ ಎಂ. ಪಿ ಕುಮಾರಸ್ವಾಮಿ ಪಕ್ಷಕ್ಕೆ ಬಂದಿದ್ದಕ್ಕೆ ನನ್ನ ಸಹಮತವಿಲ್ಲ; ಅಭಿಮಾನಿಗಳನ್ನು ಕೇಳಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆಂದ ಬಿಬಿ ನಿಂಗಯ್ಯ
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಕುಮಾರಸ್ವಾಮಿಜೆ.ಡಿ.ಎಸ್. ಪಕ್ಷ ಸೇರಿರುವುದಕ್ಕೆ ಮತ್ತು ಅವರಿಗೆ ಪಕ್ಷದ ಟಿಕೆಟ್ ನೀಡುವುದಕ್ಕೆ ನನ್ನ ಸಹಮತ ಇಲ್ಲವೆಂದು ಮಾಜಿ ಸಚಿವ ಹಾಗೂ ಮೂಡಿಗೆರೆ ಜೆಡಿಎಸ್ ಅಭ್ಯರ್ಥಿ ಬಿ.ಬಿ. ನಿಂಗಯ್ಯ ಅಸಮದಾನ ಹೊರಹಾಕಿದ್ದಾರೆ.
ಕುಮಾರಸ್ವಾಮಿಯವರ ಯಾವ ನೈತಿಕ ಗುಣಗಳನ್ನು ನೋಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ. ಅವರ ಸೇರ್ಪಡೆಗೆ ನನ್ನ ಸಹಮತವಿಲ್ಲ. ಈಗಾಗಲೇ ನನಗೆ ಟಿಕೆಟ್ ಘೋಷಣೆ ಮಾಡಿದ್ದು, ನನ್ನ ಬದಲಿಗೆ ಕುಮಾರಸ್ವಾಮಿಯವರಿಗೆ ಟಿಕೆಟ್ ನೀಡುವ ಬಗ್ಗೆ ಪಕ್ಷದ ವರಿಷ್ಠರು ನನ್ನ ಅಭಿಪ್ರಾಯ ಕೇಳಿಲ್ಲ ನಾನು ಪಕ್ಷಕ್ಕಾಗಿ ದುಡಿದಿದ್ದೇನೆ. ಕುಮಾರಸ್ವಾಮಿಯವರ ಬಗ್ಗೆ ಸಾಕಷ್ಟು ಆರೋಪಗಳು ಇವೆ. ನಮ್ಮ ಪಕ್ಷದ ಕೆಲವರು ವ್ಯಾವಹಾರಿಕ ದೃಷ್ಟಿಕೋನದಿಂದ ಅವರನ್ನು ಕರೆತಂದು ಪಕ್ಷಕ್ಕೆ ಸೇರಿಸಿದ್ದಾರೆ ಎಂದು ಆರೋಪಿಸಿದ್ದಾರೆ.