ಹೈದರಾಬಾದ್: ತಾಯಿಯೊಬ್ಬಳು ನಗರದ ಮೆಟ್ರೋದಲ್ಲಿ ಕೆಳಗಡೆ ತನ್ನ ಪುಟ್ಟ ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡಿದ್ದ ವಿಡಿಯೋವನ್ನು ನೋಡಿದ ಸುಧಾ ನಾರಾಯಣ ಮೂರ್ತಿಯವರು ಯುವಸಮೂಹಕ್ಕೆ ಸಂದೇಶವನ್ನು ನೀಡಿದ್ದಾರೆ.
ಮಹಿಳೆ ಮೆಟ್ರೋ ಒಳಗೆ ಕೆಳಗಡೆ ತನ್ನ ಪುಟ್ಟ ಮಗುವನ್ನು ಮಡಿಲಿನಲ್ಲಿ ಮಲಗಿಸಿಕೊಂಡು ಕುಳಿತಿದ್ದರು ಆದರೂ ಆ ಮೆಟ್ರೋ ರೈಲಿನ ಆಸನದಲ್ಲಿ ಕುಳಿತುಕೊಂಡಿದ್ದ ಕಾಲೇಜು ವಿದ್ಯಾರ್ಥಿನಿಗಳು ಸೇರಿ ಅಲ್ಲಿದ್ದಂತಹ ಮಹಿಳೆಯರಾಗಲಿ ಆ ತಾಯಿ-ಮಗುವಿಗೆ ಆಸನ ಬಿಟ್ಟುಕೊಡುವ ಗೋಜಿಗೆ ಹೋಗಲಿಲ್ಲ ಅದರ ಪರಿವೆಯೇ ಇಲ್ಲದ ಹಾಗೆ ಕುಳಿತ್ತಿದ್ದರು.
\ಈ ದೃಶ್ಯವನ್ನು ಅದೇ ಮೆಟ್ರೋದಲ್ಲಿದ್ದ ಸಹ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ವಿಡಿಯೋ ಸಖತ್ ವೈರಲ್ ಆಗಿತ್ತು. ಇದನ್ನು ಗಮನಿಸಿದ ಅನೇಕರು ಮಾನವೀಯತೆ ಮರೆತ ಜನರ ನಡೆಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
ಇದನ್ನು ಗಮನಿಸಿದ ಇನ್ಫೋಸಿಸ್ ಒಡತಿ ಸುಧಾಮೂರ್ತಿ ಯವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ನಾವು ಎಷ್ಟೇ ಮೇಧಾವಿಗಳಾಗಿರಬಹುದು, ಅತಿಯಾದ ವಿದ್ಯಾವಂತರು, ಶ್ರೀಮಂತರೂ ಆಗಿರಬಹುದು. ಆದರೆ ಇಷ್ಟೆಲ್ಲ ಇದ್ದೂ ಸಾಮಾನ್ಯಜ್ಞಾನವೇ ಇಲ್ಲವೆಂದಾದರೆ ಜೀವನದಲ್ಲಿ ವಿದ್ಯೆ, ಶ್ರೀಮಂತಿಕೆಗೆ ಯಾವುದೇ ಬೆಲೆಯೂ ಸಹ ಇರುವುದಿಲ್ಲ. ನಮ್ಮ ಮನೆಯ ಹಿರಿಯರು ಅಥವಾ ನಮ್ಮ ಮನೆಯಲ್ಲಿ ಚಿಕ್ಕಮಗು ಇರುವಂತಹವರು ಪ್ರಯಾಣಿಸುವಾಗ ನಮ್ಮೆದುರು ಬಂದರೆ ಅವರಿಗೆ ನಾವು ಕುಳಿತುಕೊಳ್ಳಲು ಆಸನವನ್ನು ಬಿಟ್ಟು ಕೊಡುತ್ತೇವೆ. ಆದರೆ ಅದೇ ಬೇರೆ ಯಾರಾದರೂ ಬಂದರೆ ಅವರು ಹಿರಿಯರಿರಲಿ, ನಿಲ್ಲಲು ಅಶಕ್ತರೇ ಆಗಿರಲಿ ಅವರಿಗೆ ಆಸನವನ್ನು ಮಾತ್ರ ನೀಡುವುದಿಲ್ಲ. ನಮ್ಮ ಆಲೋಚನೆ ಬದಲಾಗಲೇಬೇಕು. ಎಲ್ಲರೂ ನಮ್ಮವರೇ ಎಂದು ಯಾವಾಗಲು ಯೋಚಿಸಬೇಕು. ಇಂತಹ ಚಿಕ್ಕಪುಟ್ಟ ಸಹಾಯವನ್ನು ಮಾಡಲೇಬೇಕು’ ಎಂದು ಉತ್ತರಕನ್ನಡದ ಶಿರಸಿ ನಿವಾಸಿ ಪ್ರಜ್ವಲ್ ಆರ್.ನಾಯ್ಕ ಮಾಳಂಜಿ ಬರೆದಿರುವ ಲೇಖನದ ಜೊತೆ ಮಹಿಳೆಯ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಸುಧಾಮೂರ್ತಿ ಹಂಚಿಕೊಂಡಿದ್ದಾರೆ.