ಮಂಗಳೂರು: ಅನೈತಿಕ ಪೊಲೀಸ್ ಗಿರಿ ನಡೆಸಿದ 6 ಮಂದಿ ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸಿದ ಘಟನೆ ಸುರತ್ಕಲ್ ನಲ್ಲಿ ನಡೆದಿದೆ.
ಬಂಧಿತ ಆರೋಪಿಗಳು ಪ್ರಹ್ಲಾದ್, ಪ್ರಶಾಂತ್, ಗುರುಪ್ರಸಾದ್, ಪ್ರತೀಶ್, ಭರತ್ ಶೆಟ್ಟಿ, ಸುಕೇಶ್ ಹಾಗೂ ಹಲ್ಲೆಗೊಳಗಾದವರು ಸುರತ್ಕಲ್ ಮುಕ್ಕದ ಮುಹಮ್ಮದ್ ಯಾಸ್ಮಿನ್ ಮತ್ತು ಆನ್ಸಿ ವಿನ್ನಿ ಡಯಾಸ್ ಇವರು ಮುಕ್ಕ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
ವಿದ್ಯಾರ್ಥಿನಿ ಮಾಡಿದ ಕೋರಿಕೆಯ ಮೇರೆಗೆ ಆಕೆಯನ್ನು ಕಾಲೇಜಿನ ಬಲಿಯಿಂದ ರಾತ್ರಿ 10 ಗಂಟೆಯ ವೇಳೆಯಲ್ಲಿ ಬೈಕ್ ನಲ್ಲಿ ಕರೆದುಕೊಂಡು ಸುರತ್ಕಲ್ ಸಮೀಪದ ಇಡ್ಯಾದ ಕಲ್ಯಾಣಿ ಸಿಟಿ ಪರ್ಲ್ ಅಪಾರ್ಟ್ ಮೆಂಟ್ ಗೆ ಕರೆದುಕೊಂಡು ಬರುವ ವೇಳೆಯಲ್ಲಿ ವಿದ್ಯಾರ್ಥಿಗಳನ್ನು ಹಿಂಬಾಲಿಸಿದ ಸಂಘ ಪರಿವಾರದ ಕಾರ್ಯಕರ್ತರು ಅವರ ಗಾಡಿಯನ್ನು ನಿಲ್ಲಿಸಿ ಆ ವಿದ್ಯಾರ್ಥಿನಿ ಹಿಂದೂ ಎಂದು ತಿಳಿದು ನಿನಗೆ ಮುಸ್ಲಿಂ ಹುಡುಗನೇ ಕರೆದುಕೊಂಡು ತಿರುಗಲು ಬರಬೇಕಾ, ಹಿಂದೂಗಳು ಸಿಗುವುದಿಲ್ಲವೇ ಎಂದು ಅವಾಚ್ಯ ಪದಗಳಿಂದ ನಿಂದಿಸಿ ವಿದ್ಯಾರ್ಥಿನಿಯ ಮೈಮೇಲೆ ಕೈ ಹಾಕಿ ಅವಳಿಗೆ ಜೀವಬೆದರಿಕೆ ಹಾಕಿದ್ದಾರೆ.
ಘಟನೆಯ ನಂತರ ವಿದ್ಯಾರ್ಥಿಗಳು ಸುರತ್ಕಲ್ ಠಾಣೆಗೆ ತೆರಳಿ ದೂರನ್ನು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡ ಪೊಲೀಸರು ಪ್ರಕರಣದ ಸಂಬಂಧ ಪ್ರಮುಖ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.