ಮಂಗಳೂರು: ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಯುವಕರ ಗುಂಪು ಪೋಲೀಸರ ಎದುರಿನಲ್ಲಿಯೇ ಹಲ್ಲೆಯನ್ನು ನಡೆಸಲು ಯತ್ನಿಸಿದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಬಳಿ ನಡೆದಿದೆ.
ವೈದ್ಯಕೀಯ ಕಾಲೇಜಿನ 6 ಜನ ವಿದ್ಯಾರ್ಥಿಗಳು ಉಡುಪಿಯ ಮಲ್ಪೆ ಬೀಚ್ ಗೆ ತೆರಳಿ ಹಿಂತಿರುಗುವ ವೇಳೆ ಈ ಘಟನೆ ಸಂಭವಿಸಿದೆ. ಉಡುಪಿಯಿಂದ ಹಿಂದಿರುಗುತ್ತಿರುವ ವಿದ್ಯಾರ್ಥಿಗಳು ಅನ್ಯಕೋಮಿನವರು ಎಂಬ ಮಾಹಿತಿ ದೊರೆತಿದ್ದರಿಂದ ಹಿಂದೂ ಕಾರ್ಯಕರ್ತರು ವಿದ್ಯಾರ್ಥಿಗಳ ವಾಹನವನ್ನು ನಿಲ್ಲಿಸಿ ಅವರ ಮೇಲೆ ಹಲ್ಲೆಯನ್ನು ನಡೆಸಲು ಯತ್ನಿಸಿದ್ದಾರೆ.
ವಿಷಯ ತಿಳಿದು ಸಂಚಾರ ಉತ್ತರ ಠಾಣೆ ಪೊಲೀಸ್ ಮೊಹಮ್ಮದ್ ಶರೀಫ್ ಸ್ಥಳಕ್ಕೆ ಭೇಟಿ ನೀಡಿ ಹಲ್ಲೆ ಮಾಡದಂತೆ ತಡೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಸುರತ್ಕಲ್ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು, ವಿದ್ಯಾರ್ಥಿಗಳು ನೀಡಿದ ದೂರಿನ ಆಧಾರದ ಮೇಲೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.