Tuesday, November 28, 2023
Homeರಾಜ್ಯಅತಿಯಾದ ಮಂಗಗಳ ಕಾಟಕ್ಕೆ ರೈತರು ಕಂಗಾಲು: ಸಂಕಷ್ಟಕ್ಕೆ ಸಿಲುಕಿದವರಿಗೆ ಜಿಲ್ಲಾಡಳಿತ ಮಂಡಳಿಯಿಂದ ಪರಿಹಾರ ನೀಡಲು ಚಿಂತನೆ

ಅತಿಯಾದ ಮಂಗಗಳ ಕಾಟಕ್ಕೆ ರೈತರು ಕಂಗಾಲು: ಸಂಕಷ್ಟಕ್ಕೆ ಸಿಲುಕಿದವರಿಗೆ ಜಿಲ್ಲಾಡಳಿತ ಮಂಡಳಿಯಿಂದ ಪರಿಹಾರ ನೀಡಲು ಚಿಂತನೆ

ಹಾಸನ: ಮಂಗಗಳ ಕಾಟಕ್ಕೆ ಹಾಸನದ ರೈತರು ಕಂಗಾಲಾಗಿದ್ದು, ಮಂಗಗಳ ಕಾಟವನ್ನು ದೂರವಾಗಿಸಲು ನಾನಾ ರೀತಿಯ ಪ್ರಯತ್ನಗಳಿಗೆ ಕೈ ಹಾಕುತ್ತಿದ್ದಾರೆ. ಇದರ ಪ್ರತಿಫಲವಾಗಿ ಕೆಲ ದಿನಗಳ ಹಿಂದಷ್ಟೇ 38 ಮಂಗಳು ಸಾವನ್ನಪ್ಪಿದ್ದು, ಈ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮಂಗಗಳು ಸಾವನ್ನಪ್ಪಿದ ಪ್ರಕರಣದ ಸಂಬAಧ ಹೈಕೋರ್ಟ್ ಕೂಡ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದೆ. ಪ್ರಕರಣ ನ್ಯಾಯಾಲಯ ತಲುಪಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತಮ್ಮನ್ನು ಒಳಗೊಂಡoತೆ ಮೂರು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ. ಸಮಿತಿಯು ಪ್ರಕರಣ ಸಂಬoಧ ವರದಿಯನ್ನು ಸಿದ್ಧಪಡಿಸಲಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಸಲ್ಲಿಸಲಿದೆ.

ಈ ನಡುವೆ ಮಂಗಗಳ ಕಾಟವನ್ನು ತಪ್ಪಿಸಿಕೊಳ್ಳುವ ಯತ್ನದಲ್ಲಿ ರೈತರು ತಮಗೆ ತಿಳಿಯದಂತೆಯೇ ಮಂಗಗಳ ಮಾರಣಹೋಮದಂತಹ ದುಷ್ಕೃತ್ಯಗಳಿಗೆ ಕೈ ಹಾಕುವ ಪ್ರಕರಣಗಳು ಸಂಭವಿಸುತ್ತಿದ್ದು, ಇಂತಹ ಘಟನೆಗಳು ಮರುಕಳಿಸದೇ ಇರಲು ಜಿಲ್ಲಾಡಳಿತ ಮಂಡಳಿಯು ಕ್ರಮ ಕೈಗೊಳ್ಳಲು ಮುಂದಾಗಿದೆ. ಇದರಂತೆ ಬೆಳೆಗಳ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಪರಿಹಾರವನ್ನು ನೀಡಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಕೆಲ ದಿನಗಳ ಹಿಂದೆ ಬೇಲೂರು ತಾಲೂಕಿನ ಚೌಡನಹಳ್ಳಿಯಲ್ಲಿ38 ಮಂಗಗಳ ಮೃತದೇಹ ಪತ್ತೆಯಾಗಿದ್ದವು. ಈ ಪ್ರಕರಣವನ್ನು ಇದೀಗ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬೇಧಿಸಿದ್ದಾರೆ.

ಬೆಳೆಗಳನ್ನು ಹಾಳು ಮಾಡುತ್ತಿದ್ದ ಕಾರಣ ಹಾಸನ ತಾಲೂಕಿನ ಉಗನೆ ಗ್ರಾಮದಲ್ಲಿ ಈ ಮಂಗಗಳನ್ನು ಹಿಡಿಸಿದ್ದು, ಅವುಗಳನ್ನು ಚೀಲದಲ್ಲಿ ತುಂಬಿ ಸಾಗಿಸುವ ವೇಳೆ ಉಸಿರುಗಟ್ಟಿ ಸಾವನ್ನಪ್ಪಿರಬಹುದು. ಈ ಸಂಬoಧ ಏಳು ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್, ಎಸ್ಪಿ ಸ್ರೀನಿವಾರ್ ಗೌಡ ಹಾಗೂ ಡಿ.ಎಫ್.ಓ ಬಸವರಾಜು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಕರಣ ಸಂಬoಧ ಕೋತಿಗಳನ್ನು ಹಿಡಿಯುವಲ್ಲಿ ಪರಿಣಿತರಾದ ಬಾಣಾವರದ ರಾಮು ಮತ್ತು ಯಶೋಧ, ಉಗನೆ ಗ್ರಾಮದ ಮಂಜ, ಮಂಜೇಗೌಡ, ಐಯ್ಯಂಗಾರಿ, ಶ್ರೀಕಾಂತ್ ಹಾಗೂ ರಾಮಾನುಜ ಅಯ್ಯಂಗಾರ್ ಎಂಬುವವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಉಗನೆ ಹಾಗೂ ಅಕ್ಕಪಕ್ಕದ ಗ್ರಾಮದಲ್ಲಿ ರೈತರ ಬೆಳೆಗಳಿಗೆ ಕೋತಿಗಳ ಕಾಟ ಹೆಚ್ಚಿದ್ದರಿಂದ ಅವುಗಳನ್ನು ಹಿಡಿಸುವ ನಿರ್ಧಾರ ಮಾಡಿದ್ದರು. ಹಿಡಿದ ಮಂಗಗಳನ್ನು ಒಂದೇ ಚೀಲದಲ್ಲಿ ತುಂಬಿ ಸಾಗಿಸುವ ವೇಳೆ ಉಸಿರುಗಟ್ಟಿ ಮೃತಪಟ್ಟಿವೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ಮಂಗಗಳು ಸಾವನ್ನಪ್ಪಿರುವ ಪ್ರಕರಣ ಸಂಬAಧ ಈಗಾಗಲೇ ಪೊಲೀಸ್ ಇಲಾಖೆಯಿಂದ ಐವರನ್ನು ಬಂಧಿಸಲಾಗಿದೆ. ರಾಮು, ಯಶೋಧ, ಮಂಜ, ಮಂಜೇಗೌಡ, ಐಯ್ಯಂಗಾರಿ ಬಂಧಿತರು. ಬೆಳೆಗಳನ್ನು ನಾಶಮಾಡುತ್ತಿದ್ದರಿಂದ ಉಗನೆ ಗ್ರಾಮದ ಕೆಲವರು ಅವುಗಳನ್ನು ಹಿಡಿಸಿ ಸ್ಥಳಾಂತರಕ್ಕೆ ಪ್ಲಾನ್ ಮಾಡಿದ್ದರು.

ಮಂಗಗಳನ್ನು ಹಿಡಿಯಲಿಕ್ಕೆ ಪರಿಣಿತರಾದ ಬಾಣಾವರದ ರಾಮ ಹಾಗೂ ಯಶೋಧ ಎಂಬುವವರನ್ನು ಕರೆಸಲಾಗಿತ್ತು. ಜಮೀನು ಮಾಲೀಕ ಐಯ್ಯಂಗಾರಿ ಮಂಗಗಳನ್ನು ಹಿಡಿಯೋದಕ್ಕೆ ಕರೆಸಿದ್ದರು. ಇವುಗಳನ್ನು ಹಿಡಿದು ಸಾಗಿಸುವಾಗ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದ್ದು, ಹೆಚ್ಚಿನ ತನಿಖೆಯಿಂದ ಮತ್ತು ಮರಣೋತ್ತರ ಪರೀಕ್ಷೆಯಿಂದ ನಿಖರ ಕಾರಣ ತಿಳಿದುಬರಲಿದೆ ಎಂದು ಹಾಸನದ ಉಪ ಆಯುಕ್ತ ಆರ್.ಗಿರೀಶ್ ಅವರು ಮಾಹಿತಿ ನೀಡಿದ್ದಾರೆ.

Most Popular

Recent Comments