ಬೆಂಗಳೂರು: ಖೋಟಾನೋಟು ಪ್ರಕರಣದಲ್ಲಿ ಐದು ಲಕ್ಷ ರೂಪಾಯಿ ಲಂಚವನ್ನು ಪಡೆದ ಆರೋಪ ಎದುರಿಸುತ್ತಿರುವ ಸಬ್ ಇನ್ಸ್ಪೆಕ್ಟರ್ ಪೊಲೀಸ್ ಹುದ್ದೆಯಿಂದ ಅಮಾನತುಗೊಂಡಿದ್ದಾರೆ.
ಬೆಂಗಳೂರಿನ ಗೋವಿಂದಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಹಮ್ಮದ್ ಇಮ್ರಾನ್ ಅಲಿ ಅಮಾನತುಗೊಂಡಿರುವ ವ್ಯಕ್ತಿ, ಆರೋಪಿ ಎಸ್ಐಯನ್ನು ಬೆಂಗಳೂರಿನ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಶರಣಪ್ಪ ಅಮಾನತುಗೊಳಿಸಿದ್ದಾರೆ
ಖೋಟಾನೋಟು ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಆರೋಪಿಗಳಿಗೆ ಅನುಕೂಲ ಮಾಡಿಕೊಡಲು ಐದು ಲಕ್ಷ ರೂಪಾಯಿ ಲಂಚವನ್ನು ಕೊಡುವಂತೆ ಬೇಡಿಕೆಯನ್ನು ಇಟ್ಟಿದ್ದರು . ಇದು ಬೆಳಕಿಗೆ ಬರುತ್ತಿದ್ದಂತೆ ಎಸಿಪಿಯೊಬ್ಬರಿಂದ ತನಿಖೆ ನಡೆಸಲಾಗಿದೆ. ಆಗ ಪಿಎಸ್ಐ ಲಂಚವನ್ನು ಪಡೆದಿರುವುದು ತನಿಖೆಯಲ್ಲಿ ಸಾಬೀತುಗೊಂಡಿದೆ. ಈ ಹಿನ್ನೆಲೆಯಲ್ಲಿ ಇಮ್ರಾನ್ ಅಲಿಯನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.