Tuesday, November 28, 2023
Homeಆಧ್ಯಾತ್ಮಕೇದಾರನಾಥ ದೇವಸ್ಥಾನದ ಆವರಣದಲ್ಲಿ ಶೂ ಧರಿಸಿದ ಪ್ರಧಾನಿ ಮೋದಿ: ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ

ಕೇದಾರನಾಥ ದೇವಸ್ಥಾನದ ಆವರಣದಲ್ಲಿ ಶೂ ಧರಿಸಿದ ಪ್ರಧಾನಿ ಮೋದಿ: ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ

ಹೊಸದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಕೇದಾರನಾಥಕ್ಕೆ ತೆರಳಿ ವಿಶೇಷ ಪೂಜೆಯನ್ನು ಸಲ್ಲಿಸಿದ ವೇಳೆ ಶೂ ವನ್ನು ಧರಿಸಿದ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಪರ- ವಿರೋಧ ಚರ್ಚೆ ನಡೆಯಲು ಕಾರಣವಾಗಿದೆ.

ನರೇಂದ್ರ ಮೋದಿ ಇತ್ತೀಚೆಗೆ ಕೇದಾರನಾಥಕ್ಕೆ ಭೇಟಿಯನ್ನು ನೀಡಿದ ಸಂದರ್ಭದಲ್ಲಿ ತಗೆದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

ಮೋದಿ ಈ ಸಂದರ್ಭದಲ್ಲಿ ಶೂ ಧರಿಸಿರುವುದನ್ನು ಪಟ್ಟಹಚ್ಚಿದ ವಿರೋಧ ಪಕ್ಷ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಮೋದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಇವರ ಹಾಗೆ ರಾಹುಲ್ ಗಾಂಧಿ ಈ ಕೃತ್ಯವನ್ನು ಎಸಗಿದ್ದರೆ ಅವರನ್ನು ದೇಶದ್ರೋಹಿ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಮೋದಿ ಶೂ ವನ್ನು ಧರಿಸಿ ದೇವಾಲಯದಲ್ಲಿ ನಮಸ್ಕರಿಸುತ್ತಿರುವುದು ಅವರ ಸಂಪ್ರದಾಯವಾಗಿರಬಹುದು ಎಂದು ಟ್ವಿಟ್ ಮಾಡಿದ್ದಾರೆ.

ಇದಕ್ಕೆ ಮೋದಿಯ ಅಭಿಮಾನಿಗಳು ನರೇಂದ್ರ ಮೋದಿ ಧರಿಸಿರುವುದು ಶೂ ಅಲ್ಲ ಅದು ಬಟ್ಟೆಯ ಕವಚ. ಆ ಪ್ರದೇಶದಲ್ಲಿ ಚಳಿ ಅತಿಯಾಗಿರುವುದರಿಂದ ಅವರು ಉಲ್ಲನ್ ಸಾಕ್ಸ್ ನನ್ನು ಧರಿಸಿದ್ದಾರೆ ಎಂದು ಮೋದಿಯ ಪರ ಟ್ವಿಟ್ ಮಾಡಿದ್ದಾರೆ.

Most Popular

Recent Comments