Monday, December 11, 2023
Homeಇತರೆನಾನು ಪ್ರಧಾನಿ ನರೇಂದ್ರ ಮೋದಿ ವಿರೋಧಿಯಲ್ಲ, ಅವರು ಅನುಸರಿಸುತ್ತಿರುವ ನೀತಿಯ ವಿರೋಧಿ : ಡಾ.ಸುಬ್ರಮಣಿಯನ್...

ನಾನು ಪ್ರಧಾನಿ ನರೇಂದ್ರ ಮೋದಿ ವಿರೋಧಿಯಲ್ಲ, ಅವರು ಅನುಸರಿಸುತ್ತಿರುವ ನೀತಿಯ ವಿರೋಧಿ : ಡಾ.ಸುಬ್ರಮಣಿಯನ್ ಸ್ವಾಮಿ

ಮಂಗಳೂರು: ನಾನು ಪ್ರಧಾನಿ ನರೇಂದ್ರ ಮೋದಿ ವಿರೋಧಿಯಲ್ಲ, ನೀತಿಯ ವಿರೋಧಿ ಎಂದು ಬಿಜೆಪಿ ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ ಸುಬ್ರಮಣಿಯನ್ ಸ್ವಾಮಿ ಹೇಳಿದರು.



ಉಡುಪಿ ಮತ್ತು ಶೃಂಗೇರಿ ದೇವಾಲಯಗಳ ಭೇಟಿ ನೀಡುವ ಹಿನ್ನೆಲೆಯಲ್ಲಿ ಮಂಗಳವಾರ ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ನಾನು ಪ್ರಧಾನಿ ಮೋದಿಯ ವಿರೋಧಿಯಲ್ಲ ಆದರೆ ಅವರು ಅನುಸರಿಸುತ್ತಿರುವಂತಹ ನೀತಿಯ ಬಗ್ಗೆ ಅಸಮಾಧಾನವಿದೆ ಅದನ್ನು ವಿರೋಧಿಸುತ್ತೇನೆ ಆದರೆ ಬೆಜೆಪಿಯನ್ನು ತೊರೆಯುವುದಿಲ್ಲ ಎಂದು ಹೇಳಿದರು.

ವಿದೇಶಾಂಗ, ಹಿಂದುತ್ವ, ಆರ್ಥಿಕ ನೀತಿಗಳು ಸೇರಿದ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ತನ್ನ ಮೂಲ ಸಿದ್ಧಾಂತದಿಂದ ಹಿಂದೆ ಸರಿಯುವುದನ್ನು ನಿಲ್ಲಿಸಿ ಸರಿಪಡಿಸಿಕೊಳ್ಳಬೇಕು ಅಲ್ಲದೇ ಚೀನಾ ಆಕ್ರಮಣಕಾರಿ ನೀತಿಯ ವಿರುದ್ಧ ಮೋದಿ ಸರ್ಕಾರದ ದುರ್ಬಲ ನಿಲುವಿನ ಬಗ್ಗೆ ಅಸಮಾಧಾನ ಹೊಂದಿದ್ದೇನೆ ಅನೇಕ ವಿಷಯಗಳ ಕುರಿತು ಅಸಮಾಧಾನವನ್ನು ಪತ್ರಗಳ ಮೂಲಕ ಹಲವುಬಾರಿ ಅವರ ಗಮನಕ್ಕೆ ತಂದಿದ್ದೇನೆ ಎಂದರು.

Most Popular

Recent Comments