ನವದೆಹಲಿ: ದೀಪಾವಳಿ ಹಬ್ಬದಂದು ನೌಶೇರಾನಲ್ಲಿ ಸೇನಾ ಉಡುಗೆಯನ್ನು ಧರಿಸಿದ ಮೋದಿಯವರನ್ನು ವಿರೋಧ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸಿ ಮೋದಿಯವರನ್ನು ವ್ಯಂಗ್ಯ ಮಾಡಿದ್ದಾರೆ.
ದೀಪಾವಳಿ ಹಬ್ಬದ ಪ್ರಯುಕ್ತ ಯೋಧರ ಭೇಟಿಯ ನಡುವೆ ಪ್ರಧಾನಿ ಮೋದಿಯವರು ಸೇನಾ ಸಮವಸ್ತ್ರವನ್ನು ಧರಿಸಿರುವುದು ವಿರೋಧ ಪಕ್ಷದವರ ವಿವಾದಕ್ಕೆ ಮುಖ್ಯ ಕಾರಣವಾಗಿದೆ.
ಸಾಮಾನ್ಯ ನಾಗರಿಕರು ಸೇನಾ ಉಡುಗೆ ತೊಡಬಹುದೇ ಎಂದು ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಜನರಲ್ ರಾವತ್ ಅಥವಾ ರಕ್ಷಣಾ ಸಚಿವರು ಏನಾದರೂ ಸ್ಪಷ್ಟನೆ ನೀಡಬಹುದಾ? ಎಂದು ಕೇಳಿದ್ದಾರೆ ಹಾಗೂ ಈ ಹಿಂದೆ ರಕ್ಷಣಾ ಸಾಮಗ್ರಿಗಳು ದೇಶಕ್ಕೆ ಬರಲು ವರ್ಷಗಳೇ ಹಿಡಿಯುತ್ತಿತ್ತು ಆದರೆ ಈಗ ಭಾರತದಲ್ಲಿಯೇ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿಕೆಗೆ ದಿಗ್ವಿಜಯ್ ಸಿಂಗ್ ವ್ಯಂಗ್ಯ ಮಾಡಿದ್ದಾರೆ.