ಕಳೆದ ವರ್ಷದಂತೆ ಈ ಬಾರಿಯೂ ಸಹ ನರೇಂದ್ರ ಮೋದಿ ಯವರು ತಮ್ಮ ದೀಪಾವಳಿ ಹಬ್ಬದ ಸಡಗರವನ್ನು ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿರುವ ನೌಶೇರಾ ಸೆಕ್ಟರ್‌ನಲ್ಲಿ ಪ್ರಧಾನಿ ಮೋದಿ ಭಾರತೀಯ ಯೋಧರೊಂದಿಗೆ ಆಚರಿಸಿದರು.
2014 ರಿಂದಲೂ ಸತತ 6 ವರ್ಷಗಳಿಂದ ದೇಶದ ಯೋಧರೊಂದಿಗೆ ನರೇಂದ್ರ ಮೋದಿ ದೀಪಾವಳಿ ಹಬ್ಬದ ಸಡಗರವನ್ನು ಆಚರಿಸುತ್ತಿದ್ದು ಈ ಬಾರಿಯೂ ನೌಶೇರ್ ಸೆಕ್ಟರ್ ಗೆ ಭೇಟಿ ನೀಡಿದ ಮೋದಿ ಮೊದಲು ಅಗಲಿದ ಯೋಧರಿಗೆ ಭಾವಪೂರ್ಣ ಶ್ರದ್ದಾಂಜಲಿಯನ್ನು ಸಲ್ಲಿಸಿ ನಂತರ ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು.
ನಾನು ಪ್ರಧಾನಿಯಾಗಿ ಇಲ್ಲಿಗೆ ಬಂದಿಲ್ಲ, ನಿಮ್ಮ ಕುಟುಂಬದ ಸದಸ್ಯನಾಗಿ ಬಂದಿದ್ದೇನೆ. ಇಂದು ದೇಶದಾದ್ಯಂತ ಪ್ರತಿಯೊಬ್ಬ ನಾಗರಿಕರು ದೀಪವನ್ನು ಬೆಳಗಿಸುವಾಗ ನಿಮಗೆ ಶುಭ ಹಾರೈಸುತ್ತಾರೆ. ನಿಮ್ಮೆಲರ ಶ್ರಮ, ನಿಷ್ಠೆಯಿಂದ ಇಂದು 130 ಕೋಟಿ ಭಾರತೀಯ ಜನರು ಶಾಂತಿಯುತವಾಗಿ ಮಲಗುತ್ತಿದ್ದಾರೆ ನೀವೆಲ್ಲರೂ ಭಾರತ ಮಾತೆಯ ಸುರಕ್ಷಾ ಕವಚ ಎಂದು ಹೆಮ್ಮೆಯನ್ನು ವ್ಯಕ್ತಪಡಿಸಿದ್ದರು.
ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲಿ ನೀವು ಬ್ರಿಗೇಡ್ ನಿರ್ವಹಿಸಿದ ಪಾತ್ರದ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ಸಹ ಹೆಮ್ಮೆಯನ್ನು ಪಡುವ ಸಮಯವಾಗಿದೆ. ಸರ್ಜಿಕಲ್ ಸ್ಟ್ರೈಕ್ ನಡೆದ ನಂತರ ದೇಶದಲ್ಲಿ ಶಾಂತಿ ಕದಡಲು ಹಲವಾರು ಪ್ರಯತ್ನಗಳು ನಡೆಯಿತು ಆದರೆ ನಮ್ಮ ಯೋಧರಿಂದಾಗಿ ನಾವು ಬಲವಾಗಿ ನಿಂತಿದ್ದೇವೆ. ಈಗ ನಮ್ಮ ಮುಂದೆ ಅನೇಕ ಹೊಸ ಗುರಿಗಳು ಮತ್ತು ಸವಾಲುಗಳಿವೆ.
ನಮ್ಮ ಸೈನಿಕರ ಶಕ್ತಿ ಮತ್ತು ದೃಢತೆಯನ್ನು ನಾನು ಅನುಭವಿಸಿದ್ದೇನೆ. ರಾಷ್ಟ್ರದ ಭದ್ರತೆಯ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಹೊಸ ಏಳಿಗೆಯನ್ನು ಮುಟ್ಟಲಿದೆ. ಈಗ ಸೇನೆಯಲ್ಲಿ ಮಹಿಳೆಯರಿಗೆ ಕಾಯಂ ಕಮಿಷನ್ ನನ್ನು ನೀಡಲಾಗುತ್ತಿದೆ. ಇದೀಗ ಮಹಿಳೆಯರಿಗಾಗಿ ಪ್ರಧಾನ ಸೇನಾ ಸಂಸ್ಥೆಗಳ ಬಾಗಿಲು ತೆರೆಯಲಾಗಿದೆ ಎಂದು ಹೇಳಿದರು.
ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿರುವ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ದೀಪಾವಳಿಯನ್ನು ಆಚರಿಸಿದರು.