ಚಿಕ್ಕಮಗಳೂರು; (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿವೆಯಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ; ಕೊಪ್ಪ ಮೂಲದ ಚಲನಚಿತ್ರ ನಟ ಸಂಪತ್ ಜಯರಾಮ್ ಸುಸೈಡ್
ಇದನ್ನೂ ಓದಿ; ಈ ಬಾರಿ ಕಾಂಗ್ರೆಸ್ 141 ಸ್ಥಾನ ಗೆಲ್ಲಲಿದೆ- ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಕಾಂಗ್ರೆಸ್ ನಿಂದ ಆರೇಳು ಜನ ಆಕಾಂಕ್ಷಿಗಳು ಇದ್ದರೂ ಸಹ ಇತ್ತೀಚೆಗೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಹೆಚ್.ಡಿ ತಮ್ಮಯ್ಯ ಟಿಕೆಟ್ ಗಿಟ್ಟಿಸಲು ಯಶಸ್ವಿಯಾಗಿದ್ದರು. ಜೆಡಿಎಸ್ ನಿಂದ ಆದಾಗಲೇ ತಿಮ್ಮ ಶೆಟ್ಟಿ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು. ಆದರೆ ಈಗ ಜೆಡಿಎಸ್ ಎಂ.ಎಲ್.ಸಿ ಭೋಜೇಗೌಡ ಕಾಂಗ್ರೆಸ್ ಪರವಾಗಿ ಮನೆಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದು ಇದು ಈಗ ಚುನಾವಣಾ ಕಣದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಳಒಪ್ಪಂದದ ಮೂಲಕ ಸಿ.ಟಿ ರವಿಯನ್ನು ಸೋಲಿಸಲು ಕೈಜೋಡಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಹಿಂದೂ ಯುವಕನ ಬರ್ಬರ ಹತ್ಯೆ; ನಾಲ್ವರು ಹಂತಕರು ಅಂದರ್
- ಕೇಂದ್ರ ಕಾರಾಗೃಹದ ವಿಚಾರಣಾಧೀನ ಕೈದಿ ಸಾವು
- ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ; ಪ್ರಾಣಾಪಾಯದಿಂದ ಪಾರು
ಸಿ.ಟಿ ರವಿಯನ್ನು ಸೋಲಿಸಿ ಎಂದರಾ ಕುಮಾರಸ್ವಾಮಿ ?
ಇತ್ತೀಚೆಗಿನ ವರೆಗೂ ಎಲ್ಲವೂ ಸರಿಯಾಗಿಯೇ ಇತ್ತು ಆದರೆ ಎಚ್.ಡಿ ಕುಮಾರಸ್ವಾಮಿ ಅವರು, ಸಿ.ಟಿ ರವಿ ದೇವೇಗೌಡರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಹಾಗಾಗಿ ಸೋಲಿಸಿ ಎಂದು ಭೋಜೇಗೌಡರಿಗೆ ನೀಡಿರುವ ಸೂಚನೆ ಮೇರೆಗೆ ಭೋಜೇಗೌಡರು ಕಾಂಗ್ರೆಸ್ ಪರ ಪ್ರಚಾರಕ್ಕೆ ಇಳಿದಿದ್ದಾರೆ ಎನ್ನಲಾಗುತ್ತಿದೆ.
ಬಲಿಪಶುವಾದ ತಿಮ್ಮಶೆಟ್ಟಿ:
ಜೆಡಿಎಸ್ ಅಭ್ಯರ್ಥಿ ತಿಮ್ಮಶೆಟ್ಟಿ ಇತರೆ ಎಲ್ಲಾ ಅಭ್ಯರ್ಥಿಗಳಿಗಿಂತ ಮೊದಲು ಫೀಲ್ಡ್ ಗೆ ಇಳಿದು ಕೆಲಸ ಮಾಡುತ್ತಿದ್ದರು, ಆದರೆ ದೊಡ್ಡವರ ಕಾಂಪ್ರಮೈಸ್ ರಾಜಕಾರಣದಿಂದ ಬಲಿಪಶುವಾಗಿದ್ದಾರೆ.