Monday, December 11, 2023
Homeಮಲೆನಾಡುಚಿಕ್ಕಮಗಳೂರು‘ಹೇಳಲು ಮಲೆನಾಡು, ನೋಡೋಕೆ ಎರಡು ಮರ ಕಾಣಿಸ್ತಿಲ್ಲ.. ಏನ್ ಕರ್ಮ ನಮ್ದು’

‘ಹೇಳಲು ಮಲೆನಾಡು, ನೋಡೋಕೆ ಎರಡು ಮರ ಕಾಣಿಸ್ತಿಲ್ಲ.. ಏನ್ ಕರ್ಮ ನಮ್ದು’

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಹೇಳಿಕೊಳ್ಳೋದಕ್ಕೆ ಮಲೆನಾಡು, ಆದರೆ ರಸ್ತೆಯ ಎರಡೂ ಬದಿಯಲ್ಲಿ ನೋಡಿದರೂ ಒಂದೆರಡು ಮರಗಳು ಕೂಡ ಕಾಣಿಸುತ್ತಿಲ್ಲ ಏನ್ ಕರ್ಮನೋ ನಮ್ಮು ಎಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಡಿ ತಮ್ಮಯ್ಯ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಇದನ್ನೂ ಓದಿ;  ಚಾರ್ಮಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಓರ್ವ ಸಾವು, ಹಿಂಬದಿ ಸವಾರನ ಸ್ಥಿತಿ ಗಂಭೀರ

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸರಿಯಾದ ಸಮಯಕ್ಕೆ ಬಾರದ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮುಂದಿನ ದಿನಗಳಲ್ಲಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ತಡವಾಗಿ ಹಾಜರಾಗಿದ್ದೇ ಆದಲ್ಲಿ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ;  ಸಿಟ್ಟಿನಲ್ಲಿ ತಮ್ಮನ ಜೀವವನ್ನೇ ತೆಗೆದ ಅಣ್ಣ

ಚಿಕ್ಕಮಗಳೂರು ನಗರದ ಎಐಟಿ ವೃತ್ತದಲ್ಲಿ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು -ಗೈರು ಹಾಜರಿ ಬಗ್ಗೆ ಶಾಸಕರು ನಗರಸಭೆಯ ಎಇಇ ಅವರನ್ನು ತರಾಟೆಗೆ ತೆಗೆದುಕೊಂಡು, “ಒಮ್ಮೆ ತಪ್ಪನ್ನು ಕ್ಷಮಿಸಬಹುದು. ಪದೇ ಪದೇ ಜರುಗಿಸಿದರೆ ಶಿಷ್ಟಾಚಾರ ಉಲ್ಲಂಘನೆಯಾದಂತೆ”. ಆ ನಿಟ್ಟಿನಲ್ಲಿ ಸೂಕ್ತ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದರು.

ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ತಮ್ಮಯ್ಯ, ಪರಿಸರಕ್ಕೆ ಪೂರಕವಾಗಿರುವ ಅರಳಿ, ಹೊಂಗೆ ಹಾಗೂ ನೇರಳೆ ತಳಿಗಳನ್ನೊಳಗೊಂಡ ಸಸಿಗಳನ್ನು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಅತಿ ಹೆಚ್ಚು ನೆಡುವುದರಿಂದ ಜೀವ ಸಂಕುಲಕ್ಕೆ ಸ್ವಚ್ಚಂದ ಗಾಳಿ ಲಭಿಸುವ ಮೂಲಕ ಆರೋಗ್ಯದಿಂದ ಜೀವಿಸಲು ಸಾಧ್ಯ ಎಂದರು.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಮಲೆನಾಡು ಹಾಗೂ ಹಚ್ಚ ಹಸಿರಿನಿಂದ ಕೂಡಿರುವ ತಾಣವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪರಿಸರ ನಾಶದಿಂದ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಂಭವವಿರುವುದರಿಂದ ಅರಣ್ಯ ಇಲಾಖೆ ಅತಿಹೆಚ್ಚು ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಈ ತಿಂಗಳಲ್ಲೇ ರೂಪಿಸಿದರೆ ಜುಲೈನಲ್ಲಿ ಆರಂಭವಾಗುವ ಮಳೆಗಾಲಕ್ಕೆ ಸಸಿಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ಮುಂದಿನ ಪೀಳಿಗೆಗಾಗಿ ಪರಿಸರ ಉಳಿವಿಗೆ ಕೈಜೋಡಿಸಬೇಕು. ಮಳೆ ನೀರು ಕೊಯ್ದು, ನಗರ ಸಮೀಪದಲ್ಲಿ ನೂತನವಾಗಿ ಮನೆ ನಿರ್ಮಿಸುವವರು ಕಡ್ಡಾಯವಾಗಿ ಗಿಡ ಬೆಳೆಸಬೇಕು. ಮಳೆನೀರು ಕೊಯ್ದು ಹಾಗೂ ಸೋಲಾರ್ ಅಳವಡಿಸಬೇಕು ಎಂದು ಕಾನೂನು ರೂಪಿಸಿದರೆ ಮುಂದಿನ ಪೀಳಿಗೆಗೆ ಪರಿಸರ ಉಳಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಇದನ್ನೂ ಓದಿ; ಸರ್ಕಾರಿ ಆಸ್ಪತ್ರೆ ವೈದ್ಯ ಬರುವಾಗಲೇ ಚಿತ್ತಾಲ್ ಪತ್ತಾಲ್!

ಬಾರ್ ಕ್ಯಾಷಿಯರ್ ನ ಬರ್ಬರ ಕೊಲೆ

ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಬಾರ್ ನ ಕ್ಯಾಷಿಯರ್ ನನ್ನು ಡ್ರ‍್ಯಾಗರ್ ನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಚಿನ್ ಕುಮಾರ್ (27) ಕೊಲೆಯಾದ ವ್ಯಕ್ತಿ.

ಇದನ್ನೂ ಓದಿ; ತರೀಕೆರೆ ಶಾಸಕರ ಅಭಿನಂದನಾ ಸಮಾರಂಭದಲ್ಲೇ ವ್ಯಕ್ತಿಯ ಬರ್ಬರ ಕೊಲೆ

ನಿನ್ನೆ ರಾತ್ರಿ 10.00 ಗಂಟೆಗೆ ಬಾರ್ ಗೆ ಕುಡಿಯಲು ಬಂದಿದ್ದ ಮೂರು ಜನ ಆರೋಪಿಗಳು ರಾತ್ರಿ 11.30 ಆದರೂ ಮದ್ಯ ಸೇವಿಸುತ್ತಿದ್ದರು. “11.30 ಆಗಿದೆ ಬಂದ್ ಮಾಡ್ತೇವೆ ಹೊರಡಿ” ಎಂದು ಕ್ಯಾಶಿಯರ್ ಹೇಳಿದ್ದಕ್ಕೆ ಮೂವರು ಖ್ಯಾತೆ ತೆಗೆದಿದ್ದಾರೆ.

“ನಮ್ದು ಇನ್ನು ಕುಡಿದು ಮುಗಿದಿಲ್ಲ, ನಾವು ಹೋಗಲ್ಲ ಏನ್ ಮಾಡ್ತೀಯಾ” ಅಂತಾ ಆರೋಪಿಗಳು ಗಲಾಟೆ ಮಾಡಿ ಯುವಕನ ಎದೆಗೆ ಡ್ರ‍್ಯಾಗರ್ ನಿಂದ ಚುಚ್ಚಿದ್ದಾರೆ. ಇದೆ ವೇಳೆ 112 ವಾಹನ ಕೂಡ ಬಂದಿದ್ದು, ಪೊಲೀಸರ ಎದುರೆ ಜಗಳ ನಡೆದು ಕೊಲೆಯಾಗಿದೆ. ನಿರಂಜನ, ಸತೀಶ, ಅಶೋಕನಾಯ್ಕ ಕೊಲೆ ಮಾಡಿದ ಆರೋಪಿಗಳು ಎಂದು ಗುರುತಿಸಲಾಗಿದೆ.

ಇದನ್ನೂ ಓದಿ; ಡ್ರೈವಿಂಗ್ ಸ್ಕೂಲ್ ಕುಮಾರಣ್ಣ ಇನ್ನಿಲ್ಲ, ಅನಾರೋಗ್ಯ ಕಾರಣದಿಂದ ನಿಧನ

ಇನ್ನು ಮೃತ ಸಚಿನ್ ಗೆ ಆಯನೂರು ಪ್ರಾಥಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡುವ ಮೊದಲೇ ಸಚಿನ್ ಸಾವನ್ನಪ್ಪಿದ್ದಾನೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ; ಪೈಪ್ ಲೈನ್ ದುರಸ್ತಿ ಕಾಮಗಾರಿಯಿಂದ ತೊಂದರೆ: ಸ್ಥಳೀಯರ ಪ್ರತಿಭಟನೆ

Most Popular

Recent Comments