ಚಿಕ್ಕಮಗಳೂರು/ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಾಸಕ ಸಿ.ಟಿ. ರವಿ ವಿರುದ್ಧ ನೇರ ವಾಗ್ದಾಳಿ ನಡೆಸಿದ ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ, ಪಕ್ಷವನ್ನು ನಿರ್ನಾಮ ಮಾಡುವುದೇ ಸಿ ಟಿ ರವಿಯ ಮುಖ್ಯ ಉದೇಶವಾಗಿದೆ. ಅಲ್ಲಿಯವರೆಗೂ ಅವರು ಸುಮ್ಮನಾಗುವುದಿಲ್ಲ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಉಪಯೋಗಿಸಿಕೊಂಡು ಶಾಸಕ ಸಿ. ಟಿ ರವಿ ಅವರು ನನಗೆ ಟಿಕೆಟ್ ತಪ್ಪಿಸಿದ್ದಾರೆ. ಒಂದುವೇಳೆ ನಾನು ಆ ಹುದ್ದೆಯಲ್ಲಿ ಇದ್ದಿದ್ದರೂ ಅವರಿಗೆ ಟಿಕೆಟ್ ತಪ್ಪಿಸುತ್ತಿದ್ದೆ ಎಂದು ಹೇಳಿದ್ದಾರೆ. ಸಿ. ಟಿ ರವಿ ಪಕ್ಷವನ್ನು ನಿರ್ಣಾಮ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ಪಕ್ಷದ ನಾಯಕರಿಗೆ ಇದು ಮನವರಿಕೆ ಆಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ; ಟ್ರ‍್ಯಾಕ್ಟರ್‌ನ ಹಿಂಬದಿ ಡಾಬರ್ ರಾಡ್‌ಗೆ ತಲೆ ತಾಗಿ ಒಂದೂವರೆ ವರ್ಷದ ಮಗು ಸಾವು
ಈ ಹಿಂದೆಯಿಂದಲು ಎಂ ಪಿ ಕುಮಾರಸ್ವಾಮಿ ಹಾಗೂ ಸಿ. ಟಿ ರವಿ ಮಧ್ಯೆ ಒಳ ಮುನಿಸು ಇತ್ತು ಎನ್ನುವುದು ಮಾಧ್ಯಮಗಳಲ್ಲೂ ವರದಿಯಾಗಿತ್ತು.
ಇದನ್ನೂ ಓದಿ; ಮೊದಲ ಹಂತದಲ್ಲಿ 189 ಜನರ ಪಟ್ಟಿ ಘೋಷಿಸಿದ ಬಿಜೆಪಿ!
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೊಬೈಲ್ ಸ್ವಿಚ್ ಆಫ್ ಮಾಡಿದರೆ ಬಿಜೆಪಿ 50 ಸ್ಥಾನಗಳನ್ನು ಗೆಲ್ಲುವುದಿಲ್ಲ. ದಯವಿಟ್ಟು ಸ್ವಿಚ್ ಆಫ್ ಮಾಡಿ ಎಂದು ಯಡಿಯೂರಪ್ಪನವರಲ್ಲಿ ಬಹಿರಂಗ ಮನವಿ ಮಾಡಿದರು.
ಇದನ್ನೂ ಓದಿ; ರಾಷ್ಟ್ರೀಯ ಹೆದ್ದಾರಿಯಲ್ಲಿ ysv ದತ್ತ ಶಕ್ತಿ ಪ್ರದರ್ಶನ
ಈ ಮಧ್ಯೆ ಕುಮಾರಸ್ವಾಮಿ ಜೆಡಿಎಸ್ ಗೆ ಸೇರುತ್ತಾರೆ ಎನ್ನುವ ದಟ್ಟ ವದಂತಿ ಇದ್ದು ಈಗಾಗಲೇ ಆ ಪಕ್ಷದ ಮುಖಂಡರು ಇವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಬಿ ಬಿ ನಿಂಗಯ್ಯ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಎಂ ಪಿ ಕುಮಾರಸ್ವಾಮಿ ಅವರು ತಮ್ಮ ಬೆಂಬಲಿಗರ ಸಭೆ ಕರೆದು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಟಿಕೆಟ್ ಕೈತಪ್ಪಿರೋ ಹಿನ್ನಲೆ ಅವರು ದೂರೋದು ಸ್ವಾಭಾವಿಕ; ಶಾಸಕ ಸಿ. ಟಿ ರವಿ
ಈ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ ರವಿ ನನಿಗೆ ಪಕ್ಷದಲ್ಲಿ ಜವಾಬ್ದಾರಿ ಇರುವುದಕ್ಕಾಗಿ ಹಾಗೇ ಭಾವಿಸಿರುತ್ತಾರೆ. ಇದರ ಬಗ್ಗೆ ನಾನು ಏನು ಕಾಮೆಂಟ್ಸ್ ಮಾಡಕ್ಕೆ ಬಯಸಲ್ಲ.
ಇದನ್ನೂ ಓದಿ; ಪ್ರಪಾತಕ್ಕೆ ಬಿದ್ದ ಬೈಕ್ ; ಚಿಕ್ಕಮಗಳೂರು ಮೂಲದ ಯುವಕ ಸಾವು
ಒಂದು ವಾರದ ಹಿಂದೆ ಮನೆಗೆ ಬಂದಿದ್ರು ಅವಾಗ ಕೂಡ ಸ್ಪಷ್ಟವಾಗಿ ಹೇಳಿದ್ದೆ. ನಿನ್ನೆ ಕೂಡ ಬೆಂಗಳೂರು ಮನೆಗೆ ಬಂದಿದ್ರು ಅವಾಗ 18 ಜನರ ಹೆಸರು ಪಟ್ಟಿಯಲ್ಲಿ ನಿಮ್ದು ಕೂಡ ಇದೆ. ನಿಮ್ಮ ಸರಿ ತಪ್ಪುಗಳನ್ನು ಸಾರ್ವಜನಿಕವಾಗಿ ವಿಶ್ಲೇಷಣೆ ಮಾಡಲ್ಲ ಅವರಿಗೆ ಗೊತ್ತಿದ್ದೇ ಹಾಗಾಗಿ ವಿಶ್ಲೇಷಣೆ ಮಾಡಲ್ಲ. ಟಿಕೆಟ್ ಕೈತಪ್ಪಿದ ಹಿನ್ನಲೆ ಅವರು ದೂರೋದು ಸ್ವಾಭಾವಿಕ ಅದುನ್ನ ತಪ್ಪಾಗಿಯೂ ಭಾವಿಸಲ್ಲ. ಆದರೆ
ಐದು ಬಾರಿ ಟಿಕೆಟ್ ಕೊಟ್ಟಿದ್ದು ಭಾರತೀಯ ಜನತಾ ಪಾರ್ಟಿ, ಮೂರು ಬಾರಿ ಶಾಸಕರಾಗುವುದಕ್ಕೆ ಅವಕಾಶ ಕೊಟ್ಟಿದ್ದು ಭಾರತೀಯ ಜನತಾ ಪಾರ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾಗಕ್ಕೂ ಅವಕಾಶ ಕೊಟ್ಟಿದ್ದು ಭಾರತೀಯ ಜನತಾ ಪಾರ್ಟಿ ಅಷ್ಟೆ ಹೇಳಕ್ಕೆ ಭಾವಿಸುತ್ತೇನೆ ಎಂದರು.
ಇದನ್ನು ಓದಿ: ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ರೆವಿನ್ಯೂ ಇನ್ ಸ್ಪೆಕ್ಟರ್
ಅವರು ಈಗ ಪಕ್ಷ ಬಿಡೋ ತೀರ್ಮಾನದಿಂದ ಹೀಗೆಲ್ಲಾ ಮಾತನಡುತ್ತಾರೆ. ಅದಕ್ಕಾಗಿ ಏನು ಕಾಮೆಂಟ್ಸ್ ಮಾಡಲ್ಲ. ಈ ಹಿಂದೆಯೂ ಬಿಜೆಪಿನೆ ಗೆಲ್ಲಿಸಿದ್ದು ಮುಂದೆ ಕೂಡ ಬಿಜೆಪಿನೆ ಗೆಲ್ಲಿಸದ್ದು ಎಂದು ಪ್ರತಿಕ್ರಿಯಿಸಿದರು.
ಅವರನ್ನ ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡ್ತೀನಿ: ಸಿ. ಎಂ ಬೊಮ್ಮಾಯಿ
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಸಿ. ಎಂ ಬೊಮ್ಮಾಯಿ ಇದರ ಬಗ್ಗೆ ಈಗಾಗಲೇ ಬಹಳಷ್ಟು ಚರ್ಚೆ ಮಾಡಿ ಎಮ್ ಪಿ ಕುಮಾರಸ್ವಾಮಿ ಟಿಕೆಟ್ ಕ್ಯಾನ್ಸಲ್ ಮಾಡಿದ್ದು ಹಾಗೇ ಸರ್ವೆ ರಿಪೋರ್ಟ್ ಯಿಂದ ಹೀಗೆ ಆಗಿದ್ದು ಅವರ ಹತ್ತಿರ ಇನ್ನು ಮಾತನಾಡಿಲ್ಲ ಇನ್ನು ಮಾತನಾಡಬೇಕು ಅವರನ್ನ ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡ್ತೀನಿ ಯಾಕೆಂದರೆ ಮೂರು ಬಾರಿ ನಮ್ಮ ಪಕ್ಷದಿಂದ ಗೆದ್ದಿದ್ದಾರೆ ಹೀಗಾಗಿ ಕೆಲ ಸಂದರ್ಭದಲ್ಲಿ ಎದುರಿಸಬೇಕಾಗುತ್ತದೆ ಎಂದು ಬೊಮ್ಮಾಯಿ ಹೇಳಿದರು.