Friday, June 9, 2023
Homeಸುದ್ದಿಗಳುದೇಶಮಥುರಾದಲ್ಲಿ ಮಾಂಸ ಮತ್ತು ಮದ್ಯ ಮಾರಾಟಕ್ಕೆ ನಿಷೇಧ - ಯೋಗಿ ಆದಿತ್ಯನಾಥ್

ಮಥುರಾದಲ್ಲಿ ಮಾಂಸ ಮತ್ತು ಮದ್ಯ ಮಾರಾಟಕ್ಕೆ ನಿಷೇಧ – ಯೋಗಿ ಆದಿತ್ಯನಾಥ್

ಮಥುರಾ: ಕೃಷ್ಣನ ಜನ್ಮಸ್ಥಳವಾಗಿರುವಂತಹ ಮಥುರಾ ದಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರು ಆದೇಶವನ್ನು ಹೊರಡಿಸಿದ್ದಾರೆ.

ಮಾಂಸ ಮತ್ತು ಮದ್ಯ ಮಾರಾಟವನ್ನು ನಿಯಂತ್ರಿಸಲು ಹಾಗೂ ಅದರ ನಿಷೇಧಕ್ಕೆ ಬೇಕಾಗಿರುವಂತಹ ಯೋಜನೆಗಳನ್ನು ಶೀಘ್ರವಾಗಿ ರೂಪಿಸಲು ಮತ್ತು ಮಾರಾಟಮಾಡುತ್ತಿರುವಂತಹ ಜನರನ್ನು ತಿಳಿದುಕೊಳ್ಳಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

ಮಥುರಾದಲ್ಲಿ ಕೃಷ್ಣೋತ್ಸವ 2021 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ” ಮದ್ಯ ಮತ್ತು ಮಾಂಸ ವ್ಯಾಪಾರದಲ್ಲಿ ತೊಡಗಿರುವಂತಹ ಜನರು ಹಸುವಿನ ಹಾಲನ್ನು ಮಾರಾಟ ಮಾಡಬಹುದು” ಎಂದು ಜನರಿಗೆ ಸಲಹೆಯನ್ನು ನೀಡಿದ್ದಾರೆ.

Most Popular

Recent Comments