Tuesday, November 28, 2023
Homeಮಲೆನಾಡುಚಿಕ್ಕಮಗಳೂರುಚಿಕ್ಕಮಗಳೂರು: ಹಿಂದಿನ ಶಾಸಕರು ಹಾಗೂ ಅವರ ಬಾವನಿಂದ ಪ್ರಜಾಪ್ರಭುತ್ವದ ಕಗ್ಗೊಲೆ

ಚಿಕ್ಕಮಗಳೂರು: ಹಿಂದಿನ ಶಾಸಕರು ಹಾಗೂ ಅವರ ಬಾವನಿಂದ ಪ್ರಜಾಪ್ರಭುತ್ವದ ಕಗ್ಗೊಲೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಸದಸ್ಯನಾಗಿ ಅಧ್ಯಕ್ಷನಾಗಿ ಯಾವತ್ತು ವಿರೋಧ ಪಕ್ಷದಲ್ಲಿ ಕುತ್ತಿಲ್ಲ ಆಡಳಿತ ಪಕ್ಷದಲ್ಲೆ ಕುತ್ತಿದ್ದೀನಿ ಎಂದು ಚಿಕ್ಕಮಗಳೂರಿನಲ್ಲಿ ಹೆಚ್ ಡಿ ತಮ್ಮಯ್ಯ ಹೇಳಿದರು.

ಇದನ್ನೂ ಓದಿ; ಬಂದೂಕಿನಿಂದ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

ಇದನ್ನೂ ಓದಿ; ಕಾಫಿನಾಡಲ್ಲಿ ಹೆಚ್ಚಾದ ದಲಿತ ಸಿಎಂ ಕೂಗು

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 23 ವರ್ಷಗಳಿಂದ ನಗರ ಸಭೆ ಸದಸ್ಯನಾಗಿದ್ದೆ ಇದುವರೆಗೂ ಗುತ್ತಿಗೆ ಮಾಡಿಲ್ಲ ನಾನು ಆದಲ್ಲಿ ನಮ್ಮ ಕುಟುಂಬ ಆದಲ್ಲಿ, ಇನ್ನೂ ಮುಂದೆನು ನಾನು ಆಗಲ್ಲಿ ನಮ್ಮ ಕುಟುಂಬ ಆಗಲಿ ಗುತ್ತಿಗೆ ಅನ್ನೋದು ಮಾಡಲ್ಲ ಆದರೆ, ಗುತ್ತಿಗೆ ಮಾನಪೋಲಿ ಮಾಡಿಕೊಂಡಿದ್ದನ್ನ ನಿಲ್ಲಿಸಕ್ಕೆ ಪ್ರಯತ್ನ ಮಾಡುತ್ತೇನೆ ಎಂದರು.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಯಾರೇ ಕೆಲಸ ಮಾಡಲಿ ಅದಕ್ಕೆ ನನ್ನದೇನೂ ಇಲ್ಲ, ನಮ್ಮ ನಗರದ ಜನ, ಕ್ಷೇತ್ರದ ಜನ ಚಿಕ್ಕಮಗಳೂರು ನಗರವನ್ನ ಅಬಿವೃದ್ದಿಯನ್ನು ಬಯಸಿದ್ದಾರೆ ಅದು ಆದರೆ ಸಾಕು. ಯಾರೇ ಕಾಮಗಾರಿ ಮಾಡಲಿ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಸರಿ ಗುಣಮಟ್ಟದ ಕೆಲಸ ಮಾಡಿದರೆ ಮಾತ್ರ ಸಹಕಾರ ನೀಡುತ್ತೇನೆ ಕಳಪೆ ಕೆಲಸ ಮಾಡಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡುತ್ತೇನೆ ಎಂದರು.

ಇದನ್ನೂ ಓದಿ; ನೇತ್ರಾವತಿ ನದಿಗೆ ಬಿದ್ದು ವ್ಯಕ್ತಿ ಮೃತ್ಯು

ಇನ್ನು ಎಲ್ಲಕ್ಕಿಂತಲೂ ಹೆಚ್ಚಾಗಿ ನನ್ನ ಮೊದಲ ಆದ್ಯತೆ ಸೌಹಾರ್ದತೆ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸೌಹಾರ್ದತೆ ಮೊದಲು ಬರಬೇಕು, ಪ್ರಜಾಪ್ರಭುತ್ವದಲ್ಲಿ ಕಗ್ಗೊಲೆ ಆಗಿದೆ ಇದರಿಂದಾಗಿ ಸೌಹಾರ್ದತೆಯನ್ನು ಕ್ಷೇತ್ರದ ಜನತೆಗೆ ನೀಡಬೇಕು. ನಂತರ ಜನಸ್ನೇಹಿ ಆಡಳಿತ, ಯಾವುದೇ ಸರ್ಕಾರಿ ಕಛೇರಿಗಳಿಗೆ ಹೋದರು ಅಲ್ಲಿನ ಅಧಿಕಾರಿಗಳು ಸಾರ್ವಜನಿಕರನ್ನು ಕೂರಿಸಿ ಮಾತನಾಡಬೇಕು ಇದು ಸಾರ್ವಜನಿಕ ಆಸ್ಪತ್ರೆಯಲ್ಲಿ ಅಥವಾ ಯಾವುದೇ ಸರ್ಕಾರಿ ಕಛೇರಿಗಳಲ್ಲೂ ಅಷ್ಟೇ ಇದನ್ನು ಜಿಲ್ಲಾಡಳಿತಕ್ಕೆ ಮನವಿಯನ್ನು ಎಚ್. ಡಿ ತಮ್ಮಯ್ಯ ಮನವಿಯನ್ನು ಮಾಡಿದರು.

ನನ್ನ ಅವಧಿಯಲ್ಲಿ ಏನು ನಡೆದಿದೆ ಅದಕ್ಕಾಗಿಯೇ ಒಂದು ಸಮಿತಿ ಮಾಡಿ ತನಿಖೆ ಮಾಡುತ್ತೇವೆ. ಜಿಲ್ಲಾಧಿಕಾರಿ ಕಛೇರಿ ಮಾಡಲು ಹೊರಟಿದ್ದು, ಅಲ್ಲಿ ಕೆಲಸ. ಪ್ರಾರಂಭವಾಗಿದೆ. ಇನ್ನು ಬಸವನಹಳ್ಳಿ ಕೆರೆಯ ಬಗ್ಗೆ ನಮ್ಮ ಪಕ್ಷ ಹೋರಾಟವನ್ನ ಮಾಡಿದ್ದಾರೋ ಅದುಕ್ಕೆ ನಾನು ಬದ್ಧ ಅದರ ಕೆಲಸ ಬಗ್ಗೆ ಗುಣಮಟ್ಟದ ಕೆಲಸ ಮಾಡುವಂತ ಎಲ್ಲಾ ಕ್ರಮ ಕೈಗೊಳ್ಳುತ್ತೇವೆ ಎಂದು ಹೆಚ್ ಡಿ ತಮ್ಮಯ್ಯ ಹೇಳಿದರು.

ಇದನ್ನೂ ಓದಿ; ನಿಮ್ಮ ಜಿಲ್ಲೆಯಿಂದ ಯಾರೆಲ್ಲ ಸಚಿವ ಸಂಪುಟಕ್ಕೆ ಸಂಭಾವ್ಯರು? ಇಲ್ಲಿದೆ ಮಾಹಿತಿ

Most Popular

Recent Comments