ಕಲಬುರಗಿ: ಜಿಲ್ಲಾಧಿಕಾರಿಗಳು ಮಸೀದಿಗಳಲ್ಲಿ ಅಳವಡಿಸಿರುವ ಮೈಕ್ ಗಳನ್ನು ತೆರವುಗೊಳಿಸದಿದ್ದರೆ ನಾವೇ ಮಸೀದಿಗಳಲ್ಲಿರುವ ಮೈಕ್ ನನ್ನು ಕಿತ್ತುಹಾಕುತ್ತೇವೆ ಎಂದು ರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಕಲಬುರಗಿಯಲ್ಲಿ ಮಾತನಾಡಿದ ಮುತಾಲಿಕ್, ಈಗಾಗಲೇ ಮಸೀದಿಗಳ ಮೇಲಿರುವ ಮೈಕ್ ನನ್ನು ನಿಷೇಧ ಮಾಡಿ ಹಲವು ದಿನಗಳೇ ಕಳೆದಿದೆ. ಆದರೇ ಇಲ್ಲಿಯವರೆಗೂ ಸುಪ್ರೀಂ ಕೋರ್ಟ್ ಹೊರಡಿಸಿದ್ದ ಆದೇಶ ಪಾಲನೆಯಾಗುತ್ತಿಲ್ಲ, ದಿನದ 5 ಬಾರಿಯೂ ಮಸೀದಿಗಳಲ್ಲಿ ಮಾಡುವ ಪ್ರಾರ್ಥನೆ ಶಬ್ದ ತಲೆನೋವು ತರಿಸುತ್ತದೆ ಎಂದರು.
ನಾವು ಮುಸ್ಲಿಮರಿಗೆ ಪ್ರಾರ್ಥನೆ ಮಾಡುವುದನ್ನು ನಿಲ್ಲಿಸಲು ಹೇಳುವುದಿಲ್ಲ, ಅವರು ಬೆಳ್ಳಂಬೆಳಗ್ಗೆ ಮಸೀದಿಗಳಲ್ಲಿ ಜೋರಾಗಿ ಮೈಕ್ ನಲ್ಲಿ ಪ್ರಾರ್ಥನೆ ನಡೆಸುವುದರಿಂದ ಕಿರಿಕಿರಿ ಆಗುತ್ತದೆ ಇದರಿಂದ ನ್ಯಾಯಾಲಯ ಹೋರಡಿಸಿರುವ ಆದೇಶ ಉಲ್ಲಂಘನೆಯಾಗುತ್ತಿದೆ.
ಅನೇಕ ದೇಶಗಳಲ್ಲಿ ಮಸೀದಿಗಳ ಮೇಲೆ ಅಳವಡಿಸಿರುವ ಮೈಕ್ ನನ್ನು ತೆಗೆಯಲಾಗಿದೆ ಆದರೆ ನಮ್ಮ ದೇಶದಲ್ಲಿ ಕಾನೂನು ಪಾಲನೆಯಗುತ್ತಿಲ್ಲ. ಒಂದು ವೇಳೆ ಜಿಲ್ಲಾಧಿಕಾರಿಗಳು ಮೈಕ್ ನನ್ನು ತೆರೆಯಲು ಆದೇಶ ಹೊರಡಿಸದಿದ್ದರೆ ನಾವೇ ಮೈಕ್ ನನ್ನು ಕಿತ್ತು ಬಿಸಾಡುತ್ತೇವೆ ಎಂದು ಹೇಳಿದರು.