ಜೈಪುರ : ವಿವಾಹಿತ ಮಹಿಳೆ ತನ್ನನ್ನು ಪ್ರೀತಿಸಲು ನಿರಾಕರಿಸಿದಳು ಎಂದು ಆಕೆಯನ್ನು ಮನಬಂದಂತೆ ಕೊಚ್ಚಿ ಹತ್ಯೆ ಮಾಡಿ ಮೃತದೇಹವನ್ನು ತಬ್ಬಿಕೊಂಡು ಮಲಗಿದ್ದ ಭೀಕರ ಘಟನೆ ರಾಜಸ್ಥಾನದ ಅಹೋರ್ ನಲ್ಲಿ ನಡೆದಿದೆ.
ಶಾಂತಿ ದೇವಿ ಎಂಬ ವಿವಾಹಿತ ಮಹಿಳೆಯೊಬ್ಬರನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಅದೇ ಊರಿನ ಗಣೇಶ್ ಎಂಬ ಯುವಕನೋರ್ವ ಆಕೆ ಪ್ರೀತಿಸಲು ನಿರಾಕರಿಸಿದಳೆಂದು ಆಕೆಯನ್ನು ಮನಬಂದಂತೆ ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ.
ಆ ಮಹಿಳೆಗೆ ಈಗಾಗಲೇ ಮದುವೆ ಆಗಿ ಇಬ್ಬರು ಗಂಡು ಮಕ್ಕಳಿದ್ದು, ಪತಿ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಪತಿಯಿಲ್ಲದ ಸಮಯದಲ್ಲಿ ಮನೆಗೆ ನುಗ್ಗಿದ ಆರೋಪಿ ತನ್ನನ್ನು ಪ್ರೀತಿಸುವಂತೆ ಕೇಳಿಕೊಂಡಿದ್ದಾನೆ, ಇದರಿಂದ ಕುಪಿತಗೊಂಡ ಮಹಿಳೆ ತನಗೆ ಈಗಾಗಲೇ ಮದುವೆ ಆಗಿ ಇಬ್ಬರು ಮಕ್ಕಳು ಇರುವುದನ್ನು ಹೇಳಿದರೂ ಹಿಡಿದ ಪಟ್ಟು ಬಿಡದ ಆರೋಪಿ ಅಲ್ಲೇ ಇದ್ದ ಕೊಡಲಿಯಿಂದ ಮಹಿಳೆಯನ್ನು ಬರ್ಬರವಾಗಿ ಕೊಚ್ಚಿ ನಂತರ ಆಕೆಯ ಮೃತದೇಹವನ್ನು ತಬ್ಬಿಕೊಂಡು ಮಲಗಿದ್ದಾನೆ.
ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದು ಆರೋಪಿಯನ್ನು ಬಂಧಿಸಲಾಗಿದೆ.