ಮದುವೆಮನೆಯಲ್ಲಿ ಸಂಗೀತ ಹಾಕಿದ ಕಾರಣಕ್ಕೆ ಮನಸ್ಸಿಗೆ ಬಂದಂತೆ ಗುಂಡು ಹಾರಿಸಿ 13 ಜನರನ್ನು ಸಾಯಿಸಿದ ಘಟನೆ ಆಫ್ಘಾನಿಸ್ತಾನದಲ್ಲಿ ನಡೆದಿದೆ.
ಆಫ್ಘಾನಿಸ್ತಾನದ ನೆಂಗರ್ ಹಾರ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು ಮದುವೆ ಮನೆಯಲ್ಲಿದ್ದ ಅನೇಕ ಜನರಲ್ಲಿ 13 ಜನರು ಅನ್ಯಾಯವಾಗಿ ತಾಲಿಬಾನ್ ಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.
ಮದುವೆ ಸಮಾರಂಭದಲ್ಲಿ ಸಂಗೀತವನ್ನು. ಹಾಕಲಾಗಿತ್ತು, ಆದರೆ ಈ ವೇಳೆ ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಬಂದ ತಾಲಿಬಾನ್ ವ್ಯಕ್ತಿ ಏಕಾಏಕಿ ಗುಂಡನ್ನು ಹಾರಿಸಿದ ಪರಿಣಾಮ ಸ್ಥಳದಲ್ಲಿದ್ದ 13 ಜನರು ಸಾವಿಗೀಡಾಗಿದ್ದಾರೆ.
ಆದರೆ ಘಟನೆಯಲ್ಲಿ 3 ಜನ ಮಾತ್ರ ಮರಣ ಹೊಂದಿದ್ದು ಹಾಗೂ ಗುಂಡು ಹಾರಿಸಿದವರನ್ನು ಬಂಧಿಸಿದ್ದೇವೆ ಎಂದು ತಾಲಿಬಾನ್ ಸಮಜಾಯಿಷಿ ನೀಡಿದೆ ಎಂದು ಆಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮೃಲ್ಲಾ ಸಲೇಹ್ ಆರೋಪ ಮಾಡಿದ್ದಾರೆ.
ತಾಲಿಬಾನ್ ನಾಯಕರಿಗೆ ಸಂಗೀತ ಆಗದ ಕಾರಣ ಈ ಕೃತ್ಯವನ್ನು ನಡೆಸಿದ್ದಾರೆ, ಸಂಗೀತ ಹಾಕಿದ ಕಾರಣಕ್ಕೆ ಅನೇಕ ಬಾರಿ ಆಫ್ಘನ್ ನಲ್ಲಿ ದಾಳಿ ನಡೆಸಿರುವುದು ವರದಿಯಾಗಿತ್ತು, ಆದರೆ ಇದೇ ಮೊದಲಬಾರಿಗೆ 13 ಜನ ಮರಣಹೊಂದಿದ್ದು ಆಫ್ಘಾನಿಸ್ತಾನದ ಪ್ರಜೆಗಳು ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.