Sunday, June 4, 2023
Homeಮಲೆನಾಡುಚಿಕ್ಕಮಗಳೂರು2 ಸಾವಿರ ನೋಟಿನ ಆಯಸ್ಸು ಮುಗಿಯುವ ಹಂತದಲ್ಲಿದ್ದರೂ ಕಳಸದ ಈ ಯುವಕನ ಬಾಳಲ್ಲಿ ಅದು ಎವರ್...

2 ಸಾವಿರ ನೋಟಿನ ಆಯಸ್ಸು ಮುಗಿಯುವ ಹಂತದಲ್ಲಿದ್ದರೂ ಕಳಸದ ಈ ಯುವಕನ ಬಾಳಲ್ಲಿ ಅದು ಎವರ್ ಗ್ರೀನ್!

ಕಳಸ: (ನ್ಯೂಸ್ ಮಲ್ನಾಡ್ ವರದಿ) ಆರ್.ಬಿ.ಐ. 2000 ಮುಖಬೆಲೆಯ ನೋಟುಗಳನ್ನ ಹಿಂಪಡೆಯುವಿಕೆಗೆ ದೇಶದ ಜನರಿಗೆ ಗಡುವು ನೀಡಿದೆ. ಇನ್ನೇನು ಏಳೆಂಟು ತಿಂಗಳಲ್ಲಿ 2000 ರೂಪಾಯಿ ನೋಟು ಕೇವಲ ನೆನಪಾಗಿ ಉಳಿಯಲಿದೆ.

ಆದರೆ, ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ತೇಜು ಎಂಬ ಯುವಕನ ಬದುಕಲ್ಲಿ ಎಷ್ಟೆ ವರ್ಷಗಳು ಕಳೆದರು ಆ 2000 ರೂಪಾಯಿ ಮುಖಬೆಲೆಯ ನೋಡು ಹಚ್ಚಹಸಿರಾಗೇ ಇರಲಿದೆ. ಏಕೆಂದರೆ, ಆ ಯುವಕ ಪ್ರಧಾನಿ ಮೋದಿ ಮೇಲಿನ ಅಭಿಮಾನಕ್ಕಾಗಿ ತನ್ನ ಮದುವೆಯ ಆಮಂತ್ರಣ ಪತ್ರಿಕೆಯ ಫ್ರೆಂಡ್ಸ್ ಕಾರ್ಡ್‍ನ್ನ 2000 ರೂಪಾಯಿ ನೋಟಿನ ಮಾದರಿಯಲ್ಲೇ ಮುದ್ರಣ ಹಾಕಿಸಿದ್ದ.

ಆ ಮದುವೆ ಆಮಂತ್ರಣ ಪತ್ರಿಕೆಯನ್ನ ನೋಡಿದರೆ ನಿಜವಾದ ನೋಟನ್ನು ನೋಡಿದ ಹಾಗೇಯೇ ಲುಕ್ ಬರುವಷ್ಟರ ಮಟ್ಟಿಗೆ ಡಿಸೈನ್ ಮಾಡಿಸಿದ್ದರು.

ನೋಟಿನಲ್ಲಿರುವ ನಂಬರ್, ನೋಟಿನ ಮಧ್ಯ ಭಾಗದಲ್ಲಿ ಇರುವ ಎಲ್ಲಾ ಭಾಷೆಯಲ್ಲಿ 2000 ರೂಪಾಯಿ ಎಂದು ಇರುವ ಜಾಗದಲ್ಲಿ ತನ್ನ ಹೆಸರಿನ ಜೊತೆ ಮದುವೆಯಾಗುವ ಹುಡುಗಿಯ ಹೆಸರನ್ನ ಹಾಕಿಸಿದ್ದರು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂದು ಇರುವ ಜಾಗದಲ್ಲಿ ಲವ್ ಬ್ಯಾಂಕ್ ಆಫ್ ಇಂಡಿಯಾ ಎಂದು ನಮೂದು ಮಾಡಿಸಿದ್ದರು. ನೋಟಿನ ಮಧ್ಯದಲ್ಲಿ ಮಹಾತ್ಮ ಗಾಂಧಿಜೀಯವರ ಫೋಟೋ ಇರುವ ಜಾಗದಲ್ಲಿ ವಧು-ವರರನ್ನ ಆಶೀರ್ವದಿಸುತ್ತಿರುವ ಗಣಪತಿಯ ಭಾವಚಿತ್ರವಿದೆ. ನೋಟಿನ ಮತ್ತೊಂದು ಬದಿಯಲ್ಲಿ ಸ್ಕ್ಯಾನರ್ ಕೂಡ ಇದ್ದು. ಅದನ್ನ ಸ್ಕ್ಯಾನ್ ಮಾಡಿದರೆ ಕಳಸ ತಾಲೂಕಿನ ಮದುವೆ ಮಂಟಪಕ್ಕೆ ಬರುವ ಮಾರ್ಗ ತೋರಿಸುವಂತಿತ್ತು.


ಇತ್ತೀಚಿನ ಜನಪ್ರಿಯ ಸುದ್ದಿಗಳು 


ಸುಮಾರು 1500 ಕಾರ್ಡ್ ಮಾಡಿಸಿದ್ದ ಯುವಕ ಸ್ನೇಹಿತರಿಗೆಲ್ಲಾ ಅದೇ ಕಾರ್ಡ್ ಹಂಚಿದ್ದ. ಇದೀಗ ಆರ್.ಬಿ.ಐ. 2000 ನೋಟನ್ನ ಹಿಂಪಡೆಯುತ್ತಿರುವಂತೆ ಯುವಕ ತೇಜು ಸ್ನೇಹಿತರು ಆ ನೋಟಿನ ಇನ್ವಿಟೇಷನ್ ಕಾಡ್ ಕಳಿಸಿ ನೆನಪಿಸುತ್ತಿದ್ದಾರೆ. ಉಡುಪಿಯಲ್ಲಿ ಪ್ರಿಂಟ್ ಹಾಕಿಸಿದ್ದ ಈ ಕಾರ್ಡನ್ನ ಅಚ್ಚುಕಟ್ಟಾಗಿ ಪ್ರಿಂಟ್ ಹಾಕಿಕೊಡಲು ಉಡುಪಿಯ ಆಪ್‍ಸೆಟ್ ಪ್ರಿಂಟರ್‍ನವರು ಕೂಡ ವಾರಗಟ್ಟಲೇ ಟೈಂ ತೆಗೆದುಕೊಂಡಿದ್ದರು. ಇನ್ನು ಮುಂದೆ ಅದೆಲ್ಲೆ ನೆನಪಾಗಿಯೇ ಉಳಿಯಲಿದೆ. ಮೋದಿ ಮೇಲಿನ ಅಭಿಮಾನಕ್ಕಾಗಿ ವಿಶೇಷವಾಗಿ ಮದುವೆ ಆಮಂತ್ರಣ ಕಾರ್ಡ್ ಮಾಡಿಸಬೇಕೆಂದು ಡಿಫರೆಂಟ್ ಆಗಿ ಕಾರ್ಡ್ ಮಾಡಿಸಿದ್ದ ಕಳಸ ತಾಲೂಕಿನ ಯುವಕನ ಬಾಳಲ್ಲಿ 2000 ರೂಪಾಯಿ ನೋಟು ಎಂದೆಂದೂ ಹಚ್ಚಹಸಿರಾಗಿರಲಿದೆ.

ಮೂಡಿಗೆರೆ: ಸ್ಕೂಟಿ ಹಾಗೂ ಪಿಕಪ್ ನಡುವೆ ಅಪಘಾತ; ಗಂಭೀರ ಗಾಯ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಸ್ಕೂಟಿ ಹಾಗೂ ಪಿಕಪ್ ವಾಹನ ಡಿಕ್ಕಿಯಾಗಿ ಸ್ಕೂಟಿ ಸವಾರರನಿಗೆ ಗಂಭೀರ ಗಾಯಾಗಳಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಸ್ಕೂಟಿ ಚಾಲಕ ಸಂಪತ್ (ಸಂತೋಷ್ 37) ಗಂಭೀರ ಗಾಯಾಗೊಂಡ ವ್ಯಕ್ತಿ.

 

ಮೂಡಿಗೆರೆ ತಾಲೂಕು ಬಾಳೂರು ಹೋಬಳಿ, ನಡುವಾಳೆಯ ಉರುವಿನ್ ಖಾನ್ ಅಂಬೇಡ್ಕರ್ ನಗರ ಸಮೀಪ ನಡೆದಿದೆ. ಗಂಭೀರ ಗಾಯಗೊಂಡ ಸಂಪತ್ ಅನ್ನು ನಿಡುವಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಅಂಬ್ಯುಲೆನ್ಸ್ ವಾಹನದಲ್ಲಿ ಮಂಗಳೂರಿಗೆ ದಾಖಲಿಸಲಾಗಿದೆ.

Most Popular

Recent Comments