ಮಂಗಳೂರು: ಕಾಲೇಜಿನ ಬಳಿ ನಿಂತಿದ್ದ ಯುವಜೋಡಿಯನ್ನು ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿ ಅನೈತಿಕ ಪೊಲೀಸ್ ಗಿರಿ ನಡೆಸಿದ ಇಬ್ಬರು ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಬುಧವಾರ ಸಂಜೆಯ ವೇಳೆ ಕದ್ರಿ ಠಾಣೆ ವ್ಯಾಪ್ತಿಯ ಖಾಸಗಿ ಕಾಲೇಜೊಂದರ ಸಮೀಪದಲ್ಲಿ ಯುವ ಜೋಡಿಯೊಂದು ನಿಂತಿದ್ದ ಸಮಯದಲ್ಲಿ ಕೆಲ ಸಂಘಪರಿವಾರದ ಕಾರ್ಯಕರ್ತರು ಅವರನ್ನು ಥಳಿಸಿದ್ದಾರೆ.
ಜೋಡಿಯನ್ನು ಥಳಿಸಿ ಅವರನ್ನು ಪೊಲೀಸ್ ಠಾಣೆಗೆ ಕರೆದೋಯ್ದಿದ್ದಾರೆ, ಇದರಿಂದ ಆಕ್ರೋಶಗೊಂಡ ಜೋಡಿಗಳು ಅನವಶ್ಯಕವಾಗಿ ಥಳಿಸಿ ಅನೈತಿಕ ಪೊಲೀಸ್ ಗಿರಿ ನಡೆಸಿದ ಕಾರ್ಯಕರ್ತರ ವಿರುದ್ಧ ದೂರನ್ನು ನೀಡಿದ್ದಾರೆ.
ಜೋಡಿಗಳು ನೀಡಿದ ದೂರಿನ ಮೇಲೆ ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾರ್ಯಕರ್ತರನ್ನು ಬಂಧಿಸಿದ್ದಾರೆ.