ಕೆ.ಆರ್.ಎಸ್.ಅಣೇಕಟ್ಟು ಬಿರುಕು ಬಿಟ್ಟಿದೆ ಎನ್ನುವ ಹೇಳಿಕೆಯು ಸಮಂಜಸವಲ್ಲ, ಇದರಿಂದಾಗಿ ಮೈಸೂರು ಮಂಡ್ಯದ ಪ್ರವಾಸೋದ್ಯಮಕ್ಕೆ ಧಕ್ಕೆಯಾಗಲಿದೆ. ಈ ಹೇಳಿಕೆಯನ್ನು ಹಿಂಪಡೆಯಬೇಕೆಂದು ಎಫ್ಕೆಸಿಸಿಐ ನ ಮಾಜಿ ಅಧ್ಯಕ್ಷರು ಹಾಗೂ ಮೈಸೂರಿನ ಖ್ಯಾತ ಉದ್ಯಮಿಗಳಾದ ಸುಧಾಕರ್ ಎಸ್ ಶೆಟ್ಟಿ ಅವರು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು ಹೆಚ್ಚಾಗಿ ಮೈಸೂರು ಮತ್ತು ಮಂಡ್ಯ ದ ಜನರು ಪ್ರವಾಸೋದ್ಯಮವನ್ನು ಅವಲಂಬಿಸಿದ್ದಾರೆ, ಈ ರೀತಿಯ ಹೇಳಿಕೆಗಳು ಈಗಷ್ಟೇ ಕೊರೋನ ಲಾಕ್ ಡೌನ್ ಅವಧಿ ಇಂದ ಚೇತರಿಸಿಕೊಂಡು ಮತ್ತೆ ಮರಳುತ್ತಿರುವ ವ್ಯಾಪಾರಿಗಳಿಗೆ ತೊಂದರೆ ಆಗುತ್ತದೆ. ಈ ಹೇಳಿಕೆ ಇಂದ ಪ್ರವಾಸೋದ್ಯಮಕ್ಕೆ ನಷ್ಟವಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರ ಕಂಡ ಅತ್ಯುತ್ತಮ ಇಂಜಿನಿಯರ್ ಇರುವಂತಹ ಜಿಲ್ಲೆ ಮೈಸೂರು. ಅಣೆಕಟ್ಟಿನ ಆಡಳಿತ ಮಂಡಳಿ ತುಂಬಾ ಜವಾಬ್ದಾರಿಯುತವಾಗಿ ಯಾವುದೇ ಅಪಾಯಗಳು ಉಂಟಾಗದಂತೆ ನೋಡಿಕೊಂಡು ಬರುತ್ತಿದೆ, ಹೀಗಿರುವಾಗ ಸಂಸದರ ಈ ಹೇಳಿಕೆ ಸಮಂಜಸವಲ್ಲ, ಅಪಪ್ರಚಾರವನ್ನು ನಿಲ್ಲಿಸಬೇಕೆಂದು ಸುಧಾಕರ್ ಎಸ್. ಶೆಟ್ಟಿ ಅವರು ಆಗ್ರಹಿಸಿದ್ದಾರೆ.
ಕೆ.ಆರ್.ಎಸ್. ಅಣೇಕಟ್ಟು ಭೌಗೋಳಿಕವಾಗಿ ಮಂಡ್ಯ ಜಿಲ್ಲೆಗೆ ಸೇರಿದೆ ಆದರೆ ಮೈಸೂರಿನ ಪ್ರವಾಸಿಗರಿಂದ ಕೆ. ಆರ್.ಎಸ್. ಗೆ ಹೆಚ್ಚಿನ ಆದಾಯ ಬರುತ್ತದೆ. ಕೆ.ಆರ್.ಎಸ್. ರೈತರ ಪಾಲಿಗಷ್ಟೇ ಜೀವನಾಡಿ ಮಾತ್ರವಲ್ಲ ಮೈಸೂರು ಜಿಲ್ಲೆಯ ಆದಾಯಕ್ಕೆ ಜೀವನಾಡಿ ಆಗಿದೆ, ಹೀಗಿರುವಾಗ ರಾಜಕೀಯಕ್ಕಾಗಿ ಈ ರೀತಿಯ ಹೇಳಿಕೆ ನೀಡಬಾರದು ಮತ್ತು ಈ ಕೂಡಲೇ ಹೇಳಿಕೆಯನ್ನು ಮಂಡ್ಯ ದ ಸಂಸದರು ಹಿಂಪಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ.