Friday, June 9, 2023
Homeಸುದ್ದಿಗಳುದೇಶನನ್ನ ತಂದೆ ಹಿರಿಯ ವ್ಯಕ್ತಿ, ಮೃಗಾಲಯದಲ್ಲಿರುವ ಪ್ರಾಣಿಯಲ್ಲ : ಅರೋಗ್ಯ ಸಚಿವರ ವಿರುದ್ಧ ಮನಮೋಹನ್ ಸಿಂಗ್...

ನನ್ನ ತಂದೆ ಹಿರಿಯ ವ್ಯಕ್ತಿ, ಮೃಗಾಲಯದಲ್ಲಿರುವ ಪ್ರಾಣಿಯಲ್ಲ : ಅರೋಗ್ಯ ಸಚಿವರ ವಿರುದ್ಧ ಮನಮೋಹನ್ ಸಿಂಗ್ ಪುತ್ರಿ ಅಸಮಾಧಾನ

ಹೊಸದಿಲ್ಲಿ: ಅನಾರೋಗ್ಯದಿಂದಾಗಿ ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರ ಅರೋಗ್ಯವಿಚರಿಸಲು ಸಚಿವ ತನ್ನ ಜೊತೆ ಒಬ್ಬ ಛಾಯಾಗ್ರಾಹಕರನ್ನು ಕರೆದುಕೊಂಡು ಹೋದ ಸಚಿವರ ನಡವಳಿಕೆಗೆ ಮನಮೋಹನ್ ಸಿಂಗ್ ಅವರ ಮಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಲೆಂದು ತೆರಳಿದ್ದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ತಮ್ಮೊಂದಿಗೆ ಛಾಯಾಗ್ರಾಹಕರೊಬ್ಬರನ್ನೂ ಕರೆದೊಯ್ದಿರುವುದು ಬಹಳಷ್ಟು ಮಂದಿಯ ಆಕ್ರೋಶಕ್ಕೆ ಕಾರಣವಾಗಿದೆ.

ಸಚಿವರು ತಮ್ಮೊಂದಿಗೆ ಫೋಟೋಗ್ರಾಫರ್ ನನ್ನು ಕರೆದೋಯ್ದು ಮನಮೋಹನ್ ಸಿಂಗ್ ರವರ ಮನೆಯವರು ಒಪ್ಪಿಗೆ ನೀಡದಿದ್ದರೂ ಅವರ ಜೊತೆ ಫೋಟೋ ತೆಗೆಸಿಕೊಂಡಿರುವುದು ಅವರು ಆಕ್ರೋಶಗೊಳ್ಳಲು ಮೂಲ ಕಾರಣವಾಗಿದೆ.

“ಆರೋಗ್ಯ ಸಚಿವರು ಆಸ್ಪತ್ರೆಗೆ ಬಂದು ತಂದೆಯ ಆರೋಗ್ಯ ವಿಚಾರಿಸಿದ್ದಾರೆ. ಆದರೆ ಆ ಸಂದರ್ಭ ಛಾಯಾಚಿತ್ರ ತೆಗೆಸಿಕೊಳ್ಳಲು ಕುಟುಂಬದ ಯಾವುದೇ ಸದಸ್ಯರಿಗೆ ಇಷ್ಟವಿರಲಿಲ್ಲ. ಛಾಯಾಗ್ರಾಹಕರು ಕೊಠಡಿಯಿಂದ ತೆರಳಬೇಕೆಂದು ಹಾಗೂ ಸೋಂಕಿನ ಅಪಾಯವಿದೆಯೆಂದು ನನ್ನ ತಾಯಿ ಕೇಳಿಕೊಂಡರೂ ಅದನ್ನು ನಿರ್ಲಕ್ಷ್ಯಿಸಲಾಯಿತು,” ಅವರು ಫೋಟೊಗ್ರಾಫರ್‌ ನನ್ನು ಹೊರಗಡೆ ಕಳುಹಿಸಿ ಎಂದು ಹೇಳಿದರೂ ಅವರ ಮಾತಿಗೆ ಯಾರೂ ಕಿವಿಗೊಡಲಿಲ್ಲ ನನ್ನ ತಂದೆ ಹಿರಿಯ ವ್ಯಕ್ತಿಗಳು, ಮೃಗಾಲಯದಲ್ಲಿರುವ ಪ್ರಾಣಿಗಳಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

Most Popular

Recent Comments