ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಡಿಶ್ ರಿಪೇರಿ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ರಸ್ತೆ ಮಧ್ಯದಲ್ಲಿಯೇ ಸ್ಥಳೀಯರು ಅಟ್ಟಾಡಿಸಿ ಹೊಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಜಯಪುರ ಸಮೀಪದ ಕಟ್ಟೆಮನೆ ಎಂಬಲ್ಲಿ ನಡೆದಿದೆ.
ಚನ್ನಾಗಿ ಒದೆ ತಿಂದಿರುವ ಕಾಮುಕನ ಹೆಸರು ಬಶೀರ್. ಕಟ್ಟೆಮನೆಯಲ್ಲಿ ಈತ ಡಿಶ್ ರಿಪೇರಿ ಮಾಡುತ್ತಿದ್ದ. ತನ್ನ ಅಂಗಡಿಗೆ ಬರುತ್ತಿದ್ದ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಅನೇಕ ದಿನಗಳಿಂದ ಮಹಿಳೆಯರಿಗೆ ತನ್ನ ನಂಬರ್ ಕೊಟ್ಟು ಕಾಲ್ ಮಾಡುವಂತೆ ಪೀಡಿಸುತ್ತಿದ್ದ. ಕಳೆದ ಅನೇಕ ದಿನಗಳಿಂದ ರಮೇಶ್ ಎಂಬುವವರ ಪತ್ನಿಗೆ ಕಾಲ್ ಮಾಡುವಂತೆ ಟಾರ್ಚರ್ ನೀಡುತ್ತಿದ್ದ. ಇದರಿಂದ ರೊಚ್ಚಿಗೆದ್ದ ರಮೇಶ್ ಡಿಶ್ ರಿಪೇರಿ ಮಾಡುತ್ತಿದ್ದ ಬಶೀರನನ್ನು ಚನ್ನಾಗಿ ರಿಪೇರಿ ಮಾಡಿದ್ದಾರೆ. ಈ ಘಟನೆ 5 ದಿನದ ಹಿಂದೆ ನಡೆದಿದ್ದು ಎನ್ನಲಾಗಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ.
ಬಶೀರನಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ pic.twitter.com/M6uoEZv6hT
— News Malnad (@NewsMalnadMedia) July 16, 2023
ಮೂಡಿಗೆರೆ: ಎಣ್ಣೆ ಏಟಲ್ಲಿ ಆಟೋದಿಂದಲೇ ಡ್ರೈವರ್ ಪಲ್ಟಿ
ಚಿಕ್ಕಮಗಳೂರು: ವ್ಯಕ್ತಿಯೊಬ್ಬ ಚಲಾಯಿಸುತ್ತಿದ್ದ ಆಟೋ, ತನ್ನ ಮಾಲಿಕನಂತೆಯೇ ತೂರಾಡುತ್ತಾ ರಸ್ತೆಯಲ್ಲಿ ಸಂಚರಿಸಿ ಕೊನೆಗೆ ತನ್ನ ಮಾಲಿಕನನ್ನು ಹೊರಗೆಸೆದು ತಾನು ಗುಂಡಿಗೆ ಬಿದ್ದ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚಂಡಗೋಡು ಗ್ರಾಮದಲ್ಲಿ. ಮದ್ಯ ಸೇವಿಸಿ ನಶೆಯಲ್ಲಿಯೇ ಆಟೋ ಚಾಲನೆ ಮಾಡಿದ್ದಾನೆ. ಅಷ್ಟೇ ಅಲ್ಲ ಇಡೀ ರಸ್ತೆಯೇ ತನ್ನದೆಂಬಂತೆ ಅಡ್ಡಾದಿಡ್ಡಿ ಚಾಲನೆ ಮಾಡುತ್ತ ಸೀದಾ ತೆಗೆದುಕೊಂಡು ಹೋಗಿ ಕಂದಕಕ್ಕೆ ಹಾಕಿದ್ದಾನೆ.
ಸದ್ಯ ಈ ಆಟೋದಲ್ಲಿ ಯಾವ ಪ್ರಯಾಣಿಕರು ಹಾಗೂ ಎದುರಿನಿಂದ ಯಾವುದೆ ವಾಹನ ಬರದೇ ಇದ್ದ ಕಾರಣ ಯಾವ ಅಪಾಯ ಸಂಭವಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.