Sunday, October 1, 2023
Homeಇತರೆಎಲ್ ಪಿ ಜಿ ಸಿಲಿಂಡರ್ ಬೆಲೆ ಏರಿಕೆ: ಸಾಮಾನ್ಯ ಜನರಿಗೆ ತಲೆನೋವನ್ನು ತಂದಿಟ್ಟ ಎಲ್ ಪಿ...

ಎಲ್ ಪಿ ಜಿ ಸಿಲಿಂಡರ್ ಬೆಲೆ ಏರಿಕೆ: ಸಾಮಾನ್ಯ ಜನರಿಗೆ ತಲೆನೋವನ್ನು ತಂದಿಟ್ಟ ಎಲ್ ಪಿ ಜಿ ಬೆಲೆ,

ನವದೆಹಲಿ: ಅನೇಕ ವಸ್ತುಗಳ ಬೆಲೆ ಏರಿಕೆಯ ಬಿಸಿ ಸದ್ಯಕ್ಕೆ ಸಾಮಾನ್ಯ ಜನರ ತಲೆನೋವಿಗೆ ಕಾರಣವಾಗಿದೆ. ಒಂದಾದ ಮೇಲೆ ಒಂದರoತೆ ವಸ್ತುಗಳ ಬೆಲೆಗಳು ಏರಿಕೆಯಾಗುತ್ತಿದ್ದು ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಗೆ ಬ್ರೇಕ್ ಬೀಳುತ್ತಿಲ್ಲ.

ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 25 ರೂ. ಏರಿಕೆಯಾಗಿದ್ದು ಸಬ್ಸಿಡಿ ರಹಿತ 14.2ಕೆಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 884 ರೂ.ಗೆ ಏರಿಕೆಯಾಗಿದೆ.
ಹಾಗೂ ವಾಣಿಜ್ಯ ಬಳಕೆಯ 19ಕೆಜಿ ಸಿಲಿಂಡರ್ ಬೆಲೆಯೂ 75 ರೂ. ಹೆಚ್ಚಳವಾಗಿದ್ದು ದೆಹಲಿಯಲ್ಲಿ ಸಿಲಿಂಡರ್ ಬೆಲೆ 1,693ರೂ.ಗೆ ಏರಿಕೆಯಾಗಿದೆ.

ಬೆಲೆ ಏರಿಕೆಯಿಂದ ಬೆಂಗಳೂರಿನಲ್ಲಿ ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ಬೆಲೆ 887.50 ರೂ. ಹಾಗೂ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ 1760.50 ರೂ.ಗೆ ಏರಿಕೆಯಾಗಿದೆ. ದೇಶದಲ್ಲಿ ಸಿಲಿಂಡರ್ ಬೆಲೆ ಪದೇ ಪದೇ ಏರಿಕೆಯಾಗುತ್ತಿದೆ.

ಮಾರ್ಚ್1, 2014ಕ್ಕೆ ಹೋಲಿಸಿಕೊಂಡರೇ ಎಲ್‌ಪಿಜಿ ಯ ಬೆಲೆ ಹೆಚ್ಚಾಗಿ ಏರಿಕೆಯಾಗಿದೆ. 2014 ರಲ್ಲಿ ಗೃಹ ಬಳಕೆಯ ಸಿಲಿಂಡರ್ ಬೆಲೆ 410.50. ಇತ್ತು ಆದರೆ ಇಂದು 887.50 ರೂಪಾಯಿಗೆ ಏರಿಕೆಯಾಗಿದೆ.

ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ 25ರೂ. ಏರಿಕೆ ಮಾಡಲಾಗಿತ್ತು. ಇದಕ್ಕೂ ಮೊದಲು ಫೆಬ್ರವರಿ ಆರಂಭದಲ್ಲಿ 25ರೂ., ಫೆಬ್ರವರಿ 15 ರಂದು 50 ರೂ., ಫೆಬ್ರವರಿ 25 ರಂದು 25 ರೂ., ಮಾರ್ಚ್ ಆರಂಭದಲ್ಲಿ 25 ರೂಪಾಯಿ ಏರಿಕೆಯಾಗಿತ್ತು.ಅಗಸ್ಟ್ ನಲ್ಲಿ ದೇಶದಾದ್ಯಂತ ಎಲ್‌ಪಿಜಿ ಬೆಲೆ ಏರಿಕೆಗೆ ತೀವ್ರ ವಿರೋಧವು ವ್ಯಕ್ತವಾದ ನಂತರ 10 ರೂ. ಬೆಲೆ ಇಳಿಕೆ ಮಾಡಲಾಗಿತ್ತು ಆದರೆ ಇಂದು ಪುನಃ ಬೆಲೆಯಲ್ಲಿ ತೀವ್ರ ಏರಿಕೆಯನ್ನು ಕಂಡಿದೆ.

Most Popular

Recent Comments