Wednesday, November 29, 2023
Homeಆಧ್ಯಾತ್ಮಮುಸ್ಲಿಂ ಯುವಕ ಮತ್ತು ಹಿಂದೂ ಯುವತಿ ಮದುವೆ ತಡೆಯಲು ಮನೆಗೆ ತೆರಳಿ ಕುಟುಂಬದವರ ಮನವೊಲಿಕೆಗೆ ಯತ್ನ

ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿ ಮದುವೆ ತಡೆಯಲು ಮನೆಗೆ ತೆರಳಿ ಕುಟುಂಬದವರ ಮನವೊಲಿಕೆಗೆ ಯತ್ನ

ಮಂಗಳೂರು: ಮುಸ್ಲಿಂ ಧರ್ಮದ ವೈದ್ಯನನ್ನು ವಿವಾಹ ವಾಗಲು ಹೊರಟಿರುವ ಹಿಂದೂ ಯುವತಿಯ ಮನೆಗೆ ಭೇಟಿ ನೀಡಿ ಮನ ಪರಿವರ್ತನೆ ಮಾಡಲು ವಜ್ರದೇಹಿ ರಾಜಶೇಖರ ನಂದ ಸ್ವಾಮೀಜಿ ತೆರಳಿದ್ದರು.

ಮಂಗಳೂರು ಮೂಲದ ಹಿಂದೂ ಯುವತಿ ಹಾಗೂ ಕೇರಳದ ಕಣ್ಣೂರಿನ ಮೂಲದ ಮುಸ್ಲಿಂ ಯುವಕ ಪರಸ್ಪರ ಒಬ್ಬರನೊಬ್ಬರು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಹಿಂದೂ ಯುವತಿ MBBS ಪದವೀಧರೆ ಹಾಗೂ ಆ ಯುವಕ ಯುವತಿ ಓದುತ್ತಿರುವ ವೈದ್ಯಕೀಯ ಕಾಲೇಜಿನ ವೈದ್ಯ ಡಾ. ಜಾಫರ್ ಇವರಿಬ್ಬರು ಕುಟುಂಬದವರ ಒಪ್ಪಿಗೆ ಹಾಗೂ ಅನುಮತಿಯ ಮೇರೆಗೆ ನವೆಂಬರ್ 29 ರಂದು ವಿವಾಹವಾಗಲು ನಿರ್ಧರಿಸಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕನ ವಿವಾಹದ ಆಮಂತ್ರಣ ಪತ್ರಿಕೆ ವೈರಲ್ ಆಗಿದ್ದು. ಇದು ಲವ್ ಜಿಹಾದ್ ಪ್ರಕರಣಕ್ಕೆ ಸೇರ್ಪಡುವುದರಿಂದ ಮದುವೆಯನ್ನು ತಡೆಯಲು ಕರಾವಳಿ ಭಾಗದ ವಜ್ರದೇಹಿ ರಾಜಶೇಖರಾ ನಂದ ಸ್ವಾಮೀಜಿ ಹಾಗೂ ಬಜರಂಗದಳದ ಪ್ರಮುಖರು ಯುವತಿಯ ಮನೆಗೆ ತೆರಳಿ ಮನವೊಲಿಕೆಯ ಯತ್ನವನ್ನು ನಡೆಸಿದರು.

ಮೊದಲಿಗೆ ಯುವತಿಯ ಮನೆಗೆ ತೆರಳಿ ಯುವತಿಯೊಡನೆ ಮಾತುಕತೆಯನ್ನು ನಡೆಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಯುವತಿಯ ಮನವೊಲಿಸಲು ಪ್ರಯತ್ನಿಸಿದರು ಆದರೆ ಯುವತಿ ಮತ್ತು ಆಕೆಯ ಮನೆಯವರು ಯುವಕ ಮತ್ತು ಆತನ ಮನೆಯವರು ತುಂಬಾ ಒಳ್ಳೆಯವರು ಮದುವೆಯಾದ ನಂತರ ಧರ್ಮದ ಆಚರಣೆಗೆ ಯಾವುದೇ ಅಡ್ಡಿಯನ್ನು ಮಾಡುವುದಿಲ್ಲ ಎಂದಿದ್ದಾರೆ ಎಂದು ಸಮಾಜಾಯಿಷಿ ನೀಡಿದ್ದರು.

ಮುಖಂಡರು ನಡೆಸಿದ ಮಾತುಕತೆಗೆ ಯುವತಿ ಮತ್ತು ಆಕೆಯ ಕುಟುಂಬದವರು ಒಪ್ಪದ ಹಿನ್ನೆಲೆ ಕರಾವಳಿಯ ಗುರು ಪಿ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಯವರು ಯುವತಿಯ ಮನೆಗೆ ತೆರಳಿ ಈ ಹಿಂದೆ ಅನ್ಯಧರ್ಮದ ಯುವಕರನ್ನು ಮದುವೆಯಾಗಿ ಅನುಭವಿಸುತ್ತಿರುವ ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿ ಹೇಳಿ ಮದುವೆ ಮುಂದೂಡಿ ನಂತರ ಯೋಚನೆ ಮಾಡಿ ಎಂದು ಒತ್ತಾಯಿಸಿದ್ದಾರೆ.

Most Popular

Recent Comments