ವಿಜಯಪುರ : ಮುಸ್ಲಿಂ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಹಿಂದೂ ಯುವಕನನ್ನು ಹತ್ಯೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಬಳಗನೂರಿನಲ್ಲಿ ಈ ಘಟನೆ ನಡೆದಿದ್ದು ಮೃತಪಟ್ಟ ಯುವಕ ರವಿ ನಿಂಬರಗಿ (34)ಎಂದು ತಿಳಿದುಬಂದಿದೆ. ರವಿ ನಿಂಬರಗಿ ಅದೇ ಗ್ರಾಮದ ಅಮ್ರಿನ್ ಎಂಬ ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ ಈ ವಿಷಯ ಯುವತಿಯ ಮನೆಯವರಿಗೆ ತಿಳಿದು ವಿರೋಧ ವ್ಯಕ್ತಪಡಿಸಿ ಎಚ್ಚರಿಕೆಯನ್ನು ನೀಡಿದ್ದರು.
ಅಕ್ಟೋಬರ್ 21 ರಂದು ಮನೆಗೆ ದಿನಸಿ ತರಲು ಹೋಗಿದ್ದ ರವಿ ಅಂದಿನಿಂದಲೇ ನಾಪತ್ತೆಯಾಗಿ ಹೋಗಿದ್ದ, ವಿಷಯ ತಿಳಿದ ಆ ಯುವಕನ ಪ್ರೇಯಸಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ರವಿಯನ್ನು ಕರೆದುಕೊಂಡು ಹೋಗಿ ಹೊಡೆಯುತ್ತಿದ್ದಾರೆ ಆತನ ಜೀವಕ್ಕೆ ಅಪಾಯವಿದೆ ಎಂದು ದೂರನ್ನು ನೀಡಿದ್ದಳು.
ಅಕ್ಟೋಬರ್ 23 ರಂದು ಯುವಕನ ಶವ ಬಾವಿಯಲ್ಲಿ ಪತ್ತೆಯಾಗಿದ್ದು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಶುರುಮಾಡಿದರು.
ಯುವತಿ ತನ್ನ ಮನೆಯವರ ಮೇಲೆ ದೂರನ್ನು ನೀಡಿದ್ದಳು, ಯುವತಿ ನೀಡಿದ ದೂರಿನನ್ವಯ ತನಿಖೆಗೆ ಇಳಿದ ಪೊಲೀಸರು ಯುವತಿಯ ಮಾವ ಮತ್ತು ಸಹೋದರನ್ನು ಬಂಧಿಸಿ ತನಿಖೆ ನಡೆಸಿದ್ದಾರೆ ಈ ವೇಳೆ ಯುವಕನನ್ನು ಅವರು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಯುವತಿಯ ಕುಟುಂಬದವರು ತಲೆಮರೆಸಿಕೊಂಡಿದ್ದು ಅವರ ಪತ್ತೆಗಾಗಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.