ಚಿಕ್ಕಮಗಳೂರು; (ನ್ಯೂಸ್ ಮಲ್ನಾಡ್ ವರದಿ) ವನಮಾಲಾ ದೇವರಾಜ್ ಎಂಬವರ ಮಾಲೀಕತ್ವದ ನ್ಯಾಯಬೆಲೆ ಅಂಗಡಿಯಲ್ಲಿ ಬಡ ಪಡಿತರ ಚೀಟಿದಾರರಿಗೆ ಪಡಿತರ ವಿತರಣೆ ಮಾಡುವ ಸಂದರ್ಭದಲ್ಲಿ ತೂಕದಲ್ಲಿ ಮೋಸ ಮಾಡುತ್ತಿರುವ ಘಟನೆ ವರದಿಯಾಗಿದ್ದು, ಬಡ ಕುಟುಂಬಗಳ ಪಡಿತರಕ್ಕೆ ಕನ್ನ ಹಾಕುತ್ತಿರುವ ಈ ನ್ಯಾಯಬೆಲೆ ಅಂಗಡಿಯ ಪರವಾನಿಗೆ ರದ್ದು ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ; ಭೀಕರ ರಸ್ತೆ ಅಪಘಾತ; ತಲೆ ಮೇಲೆ ಟಿಪ್ಪರ್ ಹರಿದು ಬಾಲಕಿ ಸಾವು
ಇದನ್ನೂ ಓದಿ; ಈಜುಕೊಳದಲ್ಲಿ ಆಟವಾಡಲು ಹೋಗಿ 12 ವರ್ಷದ ಬಾಲಕಿ ಸಾವು
ಕಡೂರು ತಾಲೂಕಿನ ಚೌಳಹಿರಿಯೂರು ಗ್ರಾಮದಲ್ಲಿ ಬಿಜೆಪಿಯ ಜಿಲ್ಲಾ ಮಟ್ಟದ ನಾಯಕಿ ವನಮಾಲಾ ದೇವರಾಜ್ ಎಂಬವರು ನ್ಯಾಯಬೆಲೆ ಅಂಗಡಿಯನ್ನು ಹೊಂದಿದ್ದು, ನ್ಯಾಯಬೆಲೆ ಅಂಗಡಿ ಸಂಖ್ಯೆ-130 ಆಗಿದೆ. ಈ ನ್ಯಾಯಬೆಲೆ ಅಂಗಡಿಯಲ್ಲಿ ಸರಕಾರ ಬಡವರಿಗೆ ನೀಡುವ ಅಕ್ಕಿಗೆ ಕನ್ನ ಹಾಕುವ ಮೂಲಕ ಬಡವರಿಗೆ ನೀಡುವ ಅಕ್ಕಿಯಲ್ಲಿ ಪ್ರತೀ ಪಡಿತರ ಚೀಟಿದಾರರಿಂದ ತಲಾ 1ಕೆ.ಜಿ. ಅಕ್ಕಿಯನ್ನು ಲೂಟಿ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಹಾಲಿ ಶಾಸಕನಿಗೆ ಬಹಿರಂಗ ಪತ್ರ ಬರೆದ ಮಾಜಿ ಶಾಸಕ
- ಮಾಜಿ ಶಾಸಕರ ಮನೆ ದರೋಡೆ ಪ್ರಕರಣ; ಮತ್ತೆ ನಾಲ್ವರು ಅರೆಸ್ಟ್
- ಕೆರೆ ಪಾಲಾದ ಇಬ್ಬರು ಬಾಲಕರು
ಈ ಸಂಬಂಧ ಸ್ಥಳೀಯರು ನ್ಯಾಯಬೆಲೆ ಅಂಗಡಿಯಲ್ಲಿ ಬಡ ಪಡಿತರ ಚೀಟಿದಾರರ ಎದುರೇ ತೂಕದ ಯಂತ್ರದ ಮೇಲೆ 1ಕೆ.ಜಿ. ತೂಕದ ಕಲ್ಲನ್ನಿಟ್ಟು ಅಕ್ಕಿಯನ್ನು ತೂಕ ಮಾಡಿ ಮೋಸ ಮಾಡುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ವೈರಲ್ ಮಾಡಿದ್ದಾರೆ.
ಗ್ರಾಹಕರಿಗೆ ತೂಕದಲ್ಲಿ ಮಾಡುತ್ತಿರುವ ಮೋಸದ ಬಗ್ಗೆ ಪ್ರಶ್ನೆ ಮಾಡುವವರಿಗೆ ಸಬೂಬು ಹೇಳಿ ಸರಿಯಾಗಿ ತೂಕ ಮಾಡಿ ಪಡಿತರ ನೀಡುತ್ತಾರೆ. ಮೋಸವನ್ನು ಪ್ರಶ್ನಿಸದ ಅಮಾಯಕರ ಆಯ್ಕೆಯನ್ನು ಅವರ ಕಣ್ಣೆದುರೇ ಲೂಟಿ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ; ಟ್ರಕ್ಕಿಂಗ್ ತೆರಳಿದ್ದ ವ್ಯಕ್ತಿ ನಾಪತ್ತೆಯಾಗಿದ್ದ ಪ್ರಕರಣ; ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಪತ್ತೆ
ಈ ಗ್ರಾಮದಲ್ಲಿ ಬಹುತೇಕ ಪಡಿತರ ಚೀಟಿದಾರರು ಅಮಾಯಕರಾಗಿದ್ದು, ನ್ಯಾಯಬೆಲೆ ಅಂಗಡಿ ಮಾಲೀಕರು ತೂಕದಲ್ಲಿ ಮೋಸ ಮಾಡಿ ಪ್ರತೀ ಪಡಿತರ ಚೀಟಿದಾರರಿಂದ ತಲಾ 1 ಕೆ.ಜಿ.ಯಂತೆ ಅಕ್ಕಿಗೆ ಕನ್ನ ಹಾಕುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಸದ್ಯ ತೂಕದಲ್ಲಿ ಮೋಸ ಮಾಡುತ್ತಿರುವ ವೀಡಿಯೊ ವೈರಲ್ ಆಗಿದ್ದು, ಇನ್ನಾದರೂ ಅಧಿಕಾರಿಗಳು ಪರಿಶೀಲಿಸಿ ನ್ಯಾಯಬೆಲೆ ಅಂಗಡಿಯ ಪರವಾನಿಗೆ ರದ್ದು ಮಾಡಿ ಬಡಜನರ ಅಕ್ಕಿಯ ಲೂಟಿಯನ್ನು ತಪ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಚಿಕ್ಕಮಗಳೂರು: ಅನುದಾನಕ್ಕೆ ಬ್ರೇಕ್, ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಿರುವ ವರದಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ; ಪೆಟ್ರೋಲ್ ತುಂಬಿಸುವಾಗಲೇ ಬ್ಯಾಟರಿ ಸ್ಪೋಟ
ಅನುದಾನಕ್ಕೆ ಬ್ರೇಕ್ ಹಾಕಿರುವ ಕಾರಣದಿಂದಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ವಿರುದ್ಧ ಧಿಕ್ಕಾರ ಕೂಗಿದ್ದಾರೆ.
ಇದನ್ನೂ ಓದಿ; ಬೈಕ್ ಅಪಘಾತದಲ್ಲಿ ಯೋಧನ ಸಾವು; ಪೊಲೀಸರ ಬಳಿ ಹೆತ್ತವರು ಕೇಳಿದ್ದು ಏನು?
ಸಮುದಾಯ ಭವನ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ತಡೆ ಹಿಡಿದ ರಾಜ್ಯ ಸರ್ಕಾರದ ವಿರುದ್ಧ ಚಿಕ್ಕಮಗಳೂರು ತಾಲ್ಲೂಕು ಕಛೇರಿಯಿಂದ ಆಜಾದ್ ಪಾರ್ಕ್ ವೃತ್ತದವರೆಗೂ ನೂರಾರು ಬಿಜೆಪಿ ಕಾರ್ಯಕರ್ತರು ಸೇರಿ ಪ್ರತಿಭಟನಾ ಮೆರವಣಿಗೆ ಮಾಡಿದ್ದು, ಕೂಡಲೇ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.