Saturday, December 9, 2023
Homeರಾಜ್ಯಮೂಗಿನಲ್ಲಿ ಲಿಂಬೆರಸ ಹಾಕಿಕೊಂಡಿದ್ದಕ್ಕೆ ಶಿಕ್ಷಕ ಸಾವು ಎಂಬುದು ಸುಳ್ಳು ಸುದ್ದಿ: ಇಲ್ಲಿದೆ ಫ್ಯಾಕ್ಟ್ ಚೆಕ್

ಮೂಗಿನಲ್ಲಿ ಲಿಂಬೆರಸ ಹಾಕಿಕೊಂಡಿದ್ದಕ್ಕೆ ಶಿಕ್ಷಕ ಸಾವು ಎಂಬುದು ಸುಳ್ಳು ಸುದ್ದಿ: ಇಲ್ಲಿದೆ ಫ್ಯಾಕ್ಟ್ ಚೆಕ್

ರಾಯಚೂರು: ರಾಯಚೂರಿನ ಸಿಂಧನೂರು ನಗರದ ನಟರಾಜ ಕಾಲೋನಿಯ ಸರ್ಕಾರಿ ಶಾಲೆಯ 45 ವರ್ಷದ ಶಿಕ್ಷಕರಾದ ಬಸವರಾಜ ಎಂಬುವವರು ಬುಧವಾರ ನಿಧನರಾಗಿದ್ದು ಮೂಗಿಗೆ ನಿಂಬೆ ರಸ ಹಾಕಿಕೊಂಡಿದ್ದರಿಂದ ಸಾವನ್ನಪ್ಪಿದರು ಎಂದು ಎಲ್ಲೆಡೆ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡಲಾಗಿತ್ತು, ಇತ್ತೀಚೆಗೆ ಉದ್ಯಮಿ ವಿಜಯ ಸಂಕೇಶ್ವರ ಅವರು ಮೂಗಿಗೆ ನಿಂಬೆ ರಸ ಬಿಡುವುದರಿಂದ ಕಟ್ಟಿದ ಮೂಗು ಆರಾಮ ಆಗುತ್ತದೆ ಎಂದು ಹೇಳಿದ್ದನ್ನು ಇದಕ್ಕೆ ತಳುಕು ಹಾಕಿ ಈ ಘಟನೆಗೆ ಸಂಕೇಶ್ವರ ಅವರ ಹೇಳಿಕೆಯೇ ಕಾರಣ ಎಂದು ಕಪೋಕಲ್ಪಿತ ಸುದ್ಧಿಯನ್ನು ಹರಡಲಾಗಿತ್ತು ಆದರೆ ಇದೀಗ ನೈಜ ಸುದ್ದಿ ಬೆಳಕಿಗೆ ಬಂದಿದ್ದು ಶಿಕ್ಷಕ ಬಸವರಾಜ ಅವರು ಲೋ ಬಿಪಿ ಮತ್ತು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ವಿಷಯವನ್ನು ಮೃತರ ಸಹೋದರರಾದ ಮಹಾಂತೇಶ ಅವರು ಬಹಿರಂಗಗೊಳಿಸಿದ್ದಾರೆ.

ಮೂಗಿಗೆ ನಿಂಬೆರಸ ಹಾಕಿಕೊಂಡಿದ್ದಕ್ಕೆ ಶಿಕ್ಷಕ ಒದ್ದಾಡಿ ಸಾವು ಎಂದು ವಿವಿಧೆಡೆ ಸುದ್ದಿಗಳು ಪ್ರಕಟಿಸಿರುವುದು ಸತ್ಯಕ್ಕೆ ದೂರವಾದ ವಿಷಯವಾಗಿದ್ದು. ಬುಧವಾರ ಬೆಳಗ್ಗೆ ನಮ್ಮ ಸಹೋದರನಿಗೆ ಬಿಪಿ ಲೋ ಆಗಿತ್ತು. ಆದ ಕಾರಣ ಹೃದಯಘಾತವಾಗಿತು. ಬಿಪಿ ಲೋ ಆಗುತ್ತಿದ್ದಂತೆಯೇ ಅವರನ್ನು ತಕ್ಷಣದಲ್ಲೇ ಹತ್ತಿರದ ಖಾಸಗೀ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದರೊಳಗೇ ಅವರು ಮೃತಪಟ್ಟಿರುವುದನ್ನು ಆಸ್ಪತ್ರೆಯ ವೈದ್ಯರು ಖಚಿತಪಡಿಸಿದರು ಎಂದರು.
ಈ ಕುರಿತು ಖಾಸಗಿ ಆಸ್ಪತ್ರೆ ವೈದ್ಯರಾದ ಡಾ. ಸುರೇಶ ಅವರೂ ಹೇಳಿಕೆ ನೀಡಿದ್ದು ಬಸವರಾಜ ಅವರನ್ನು ನಮ್ಮ ಆಸ್ಪತ್ರೆಯ ಒಳಗೆ ಕರೆತರುವ ಮೊದಲೇ ಅವರ ಪ್ರಾಣ ಹೋಗಿತ್ತು. ಆದರೆ ಹೇಗೆ ಪ್ರಾಣ ಹೋಯಿತು ಎಂಬ ಸಂಪೂರ್ಣ ಮಾಹಿತಿ ತಿಳಿಯಲು ಪೋಸ್ಟ್ ಮಾರ್ಟಮ್ ಮಾಡಿದ ನಂತರ ತಿಳಿಯುತ್ತದೆ ಎಂದಿದ್ದಾರೆ.

ಕುಟುಂಬಸ್ಥರು ಶಿಕ್ಷಕ ಬಸವರಾಜ ಹೃದಯಾಘಾತದಿಂದ ಮೃತರಾಗಿದ್ದರೂ ಅವರು ಮೂಗಿಗೆ ನಿಂಬೆ ರಸ ಹಾಕಿಕೊಂಡಿದ್ದರಿಂದ ಒದ್ದಾಡಿ ಸಾವನ್ನಪ್ಪಿದ್ದಾರೆ ಎಂಬ ವದಂತಿಯು ಕೆಲವು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

Most Popular

Recent Comments