ವಿಜಯನಗರ: ಕೇವಲ ಆಸ್ತಿ ವಿಚಾರಕ್ಕೆ ಹೆತ್ತ ತಂದೆ ತಾಯಿಯನ್ನೇ ಬೀದಿಗೆ ತಂದು ನಿಲ್ಲಿಸಿದ ಅಮಾನವೀಯ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಳ್ಳಿ ಗ್ರಾಮದಲ್ಲಿ ನಡೆದಿದೆ.
ವೃದ್ಧ ದಂಪತಿಗಳು ಬಣಕಾರ ಕೊಟ್ರಪ್ಪ ಹಾಗೂ ಅನ್ನಪೂರ್ಣಮ್ಮ ಎಂಬ ಮಾಹಿತಿ ಲಭಿಸಿದೆ.
ದಂಪತಿಗಳಿಗೆ ನಾಲ್ಕು ಜನ ಗಂಡು ಮಕ್ಕಳು ಮತ್ತು ನಾಲ್ಕು ಜನ ಹೆಣ್ಣು ಮಕ್ಕಳು ದಂಪತಿಗಳು ತಮ್ಮ. 8 ಜನ ಮಕ್ಕಳಿಗೆ ಆಸ್ತಿಯನ್ನು ಸಮಪಾಲಾಗಿ ಹಂಚಿರುವುದು ಹಾಗೂ ಹೆಣ್ಣುಮಕ್ಕಳಿಗೆ ಆಸ್ತಿಯನ್ನು ನೀಡಿರುವುದು ಈ ಘಟನೆಗೆ ಮೂಲ ಕಾರಣವಾಗಿದೆ ಕೇವಲ ಆಸ್ತಿಯ ವಿಚಾರಕ್ಕೆ ಅವರ ನಾಲ್ವರು ಪುತ್ರರು ವೃದ್ಧ ದಂಪತಿಯನ್ನು ರಸ್ತೆಗೆ ಎಳೆದುತಂದು ಎಳೆದಾಡಿದ್ದಾರೆ.
ಆ ವೃದ್ಧ ದಂಪತಿಗಳು ತಮ್ಮ ಎಲ್ಲಾ ಜಮೀನನ್ನು ಆಸ್ತಿಯನ್ನು ಅವರ ಪುತ್ರ ಮತ್ತು ಪುತ್ರಿಯರಿಗೆ ಹಂಚಿದ್ದಾರೆ. ಆದರೆ ಕುಪಿತಗೊಂಡ ಪುತ್ರರು ತಂದೆ ತಾಯಿಯ ಮೇಲೆ ಹಲ್ಲೆಯನ್ನು ನಡೆಸಿ ಬೀದಿಗೆ ತಳ್ಳಿ ಅಲ್ಲಿಯೇ ಎಳೆದಾಡಿದ್ದಾರೆ. ಇದರಿಂದ ಬೇಸತ್ತ ದಂಪತಿಗಳು ತಮ್ಮ ಹೆಣ್ಣುಮಕ್ಕಳ ಮನೇಗೆ ತೆರಳಿದ್ದಾರೆ ತಮಗೆ ಅಂದರೆ ಎಲ್ಲಾ ಗಂಡು ಮಕ್ಕಳಿಗೆ ಮಾತ್ರ ಆಸ್ತಿಯನ್ನು. ಹಂಚಬೇಕು ಎಂದು ಆಕ್ರೋಶಗೊಂಡು ತಂದೆ ತಾಯಿಯರು ಸಹೋದರಿಯರ ಮೆನೆಯಲ್ಲಿ ಇರುವ ವಿಷಯವನ್ನು ತಿಳಿದು ಅಲ್ಲಿಗೂ ಹೋದ ಪುತ್ರರು ತಂದೆ ತಾಯಿ, ಸಹೋದರಿಯರು ಮತ್ತು ಅವರ ಮಕ್ಕಳ ಮೇಲೂ ಸಹ ಹಲ್ಲೆಯನ್ನು ನಡೆಸಿದ್ದಾರೆ.
ಇಂದು ವೃದ್ಧ ದಂಪತಿಗಳು ನಮಗೇ ನ್ಯಾಯ ಒದಗಿಸಿ ಎಂದು ಎಸ್ ಪಿ ಕಚೇರಿ ಎದುರು ಧರಣಿಯನ್ನು ನಡೆಸುತ್ತಿದ್ದಾರೆ.