Kudremukha: ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿರುವ ನೇತ್ರಾವತಿ ಪೀಕ್ ಗೆ ಆಗಮಿಸಿದ್ದ ಪ್ರವಾಸಿಗರು ನಿರಾಸೆಯಿಂದ ಹಿಂದಿರುಗಿ ಹೋಗುವಂತಾಗಿದೆ.
ಇದನ್ನೂ ಓದಿ; ಜಯಪುರ: ಡಿಶ್ ರಿಪೇರಿ ಬಶೀರನಿಗೆ ನಡು ರಸ್ತೆಯಲ್ಲಿ ಹಿಗ್ಗಾಮುಗ್ಗಾ ಹೊಡೆದ ಜನ
Kudremukha: ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿರುವ ನೇತ್ರಾವತಿ ಪೀಕ್ ಆಗಮಿಸಿದ ಪ್ರವಾಸಿಗರಿಗೆ ವಿರಾಸೆಯುಂಟಾಗಿದ್ದು ಮುಂಗಡ ಬುಕ್ಕಿಂಗ್ ಮಾಡಿದ್ದರು ಕೂಡ ಚಾರಣಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳ ಜೊತೆ ಪ್ರವಾಸಿಗರು ವಾಗ್ವಾದ ನಡೆಸಿದ್ದರು.

ಇದನ್ನೂ ಓದಿ; ಮೂಡಿಗೆರೆ: ಎಣ್ಣೆ ಏಟಿಗೆ ಡ್ರೈವರ್ ಟೈಟು; ಆಟೋ ಚಲಾಯಿಸುವಾಗ್ಲೇ ಕೆಳಗೆ ಬಿದ್ದ ಡ್ರೈವರ್,
ಅರಣ್ಯ ಇಲಾಖೆ ದಿನಕ್ಕೆ 300 ಮಂದಿಗಷ್ಟೇ ಚಾರಣಕ್ಕೆ ಅವಕಾಶ ನೀಡಿದೆ. ದಿನಕ್ಕೆ ಮುನ್ನೂರು ಜನರಿಗೆ ಮಾತ್ರ ಅವಕಾಶದ ನಿಯಮದಿಂದಾಗಿ ಚಾರಣ ಮಾಡುವವರಿಗೆ ಅವಕಾಶ ಸಿಗುತ್ತಿಲ್ಲ. ಇದರ ವಿರುದ್ಧ ಪ್ರವಾಸಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಬರೋಬ್ಬರಿ 12 ಸಾವಿರಕ್ಕೆ ಮಾರಾಟವಾಯ್ತು ಎನ್ ಆರ್ ಪುರದಲ್ಲಿ ಸಿಕ್ಕ ಈ ಮೀನು
- ಕಾಂಗ್ರೆಸ್ ವಿರುದ್ಧ ಕಾಫಿನಾಡಲ್ಲಿ ಸಂಸದೆ ಶೋಭಾ ಕರಾಂದ್ಲಾಜೆ ರೆಬಲ್
- ಕೊಪ್ಪ: ರಸ್ತೆಯಲ್ಲಿ ಸಿಕ್ಕಿದ 12,900 ರೂ. ಠಾಣೆಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿಗಳು
ಮೂಡಿಗೆರೆ: ಎಣ್ಣೆ ಏಟಿಗೆ ಡ್ರೈವರ್ ಟೈಟು; ಆಟೋ ಚಲಾಯಿಸುವಾಗ್ಲೇ ಕೆಳಗೆ ಬಿದ್ದ ಡ್ರೈವರ್,
mudigere: (ನ್ಯೂಸ್ ಮಲ್ನಾಡ್ ವರದಿ) ವ್ಯಕ್ತಿಯೊಬ್ಬ ಚಲಾಯಿಸುತ್ತಿದ್ದ ಆಟೋ, ತನ್ನ ಮಾಲಿಕನಂತೆಯೇ ತೂರಾಡುತ್ತಾ ರಸ್ತೆಯಲ್ಲಿ ಸಂಚರಿಸಿ ಕೊನೆಗೆ ತನ್ನ ಮಾಲಿಕನನ್ನು ಹೊರಗೆಸೆದು ತಾನು ಗುಂಡಿಗೆ ಬಿದ್ದ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ; ತಂತಿ ಬೇಲಿಯಲ್ಲಿ ಸಿಲುಕಿ ಚಿರತೆಯ ನರಳಾಟ;ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ದೌಡು
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚಂಡಗೋಡು ಗ್ರಾಮದಲ್ಲಿ. ಮದ್ಯ ಸೇವಿಸಿ ನಶೆಯಲ್ಲಿಯೇ ಆಟೋ ಚಾಲನೆ ಮಾಡಿದ್ದಾನೆ. ಅಷ್ಟೇ ಅಲ್ಲ ಇಡೀ ರಸ್ತೆಯೇ ತನ್ನದೆಂಬಂತೆ ಅಡ್ಡಾದಿಡ್ಡಿ ಚಾಲನೆ ಚಾಲನೆ ಮಾಡಿದ್ದಾನೆ. ಕೊನೆಗೆ ನಿಯಂತ್ರಣ ತಪ್ಪಿ ತಾನೇ ಆಟೋದಿಂದ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಆಟೋ ಹೊಂಡಕ್ಕೆ ಬಿದ್ದಿದೆ.
ಸದ್ಯ ಈ ಆಟೋದಲ್ಲಿ ಯಾವ ಪ್ರಯಾಣಿಕರು ಹಾಗೂ ಎದುರಿನಿಂದ ಯಾವುದೆ ವಾಹನ ಬರದೇ ಇದ್ದ ಕಾರಣ ಯಾವ ಅಪಾಯ ಸಂಭವಿಸಿಲ್ಲ. ಈ ದೃಶ್ಯವನ್ನು ಹಿಂದಿನಿಂದ ಬರುತ್ತಿದ್ದ ಕಾರು ಚಾಲಕ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.