ಬೆಂಗಳೂರು: ಇಂದಿನಿಂದ ಸರ್ಕಾರಿ ಬಸ್ ನಲ್ಲಿ ಪ್ರಯಾಣ ಮಾಡುವ ವೇಳೆ ಹಾಡು, ಸಿನಿಮಾ ಮುಂತಾದವುಗಳನ್ನು ಜೋರಾಗಿ ಹಾಕುವಂತಿಲ್ಲ ಎಂದು ಹೈಕೋರ್ಟ್ ಆದೇಶವನ್ನು ಹೊರಡಿಸಿದೆ.
ಬಸ್ಸಿನಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಜೋರಾಗಿ ಹಾಡನ್ನು ಹಾಕುವುದರಿಂದ ಸಹ ಪ್ರಯಾಣಿಕರಿಗೆ ಕಿರಿ ಕಿರಿ ಉಂಟಾಗುತ್ತದೆ ಆದ್ದರಿಂದ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಮೊಬೈಲ್ ಬಳಕೆಯನ್ನು ಮಿತಿಗೊಳಿಸಲು ಹಾಗೂ ಸಹ ಪ್ರಯಾಣಿಕರಿಗೆ ತೊಂದರೆ ಆಗಬಾರದೆಂದು ಈ ರೀತಿಯ ನಿರ್ಣಯವನ್ನು ಕೈಗೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಈ ವಿಷಯದ ಕುರಿತು ನಿರ್ಬಂಧವನ್ನು ಹೇರುವಂತೆ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ನಂತರ ಹೈಕೋರ್ಟ್ ಶಬ್ದ ಮಾಲಿನ್ಯವನ್ನು ನಿಯಂತ್ರಿಸುವ ಸಲುವಾಗಿ ಹಾಗೂ ಸಾರ್ವಜನಿಕ ಹಿತಾಸಕ್ತಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುವ ವ್ಯಕ್ತಿಗಳು ಬಸ್ಸಿನಲ್ಲಿ ಪ್ರಯಾಣಿಸುವ ವೇಳೆ ಮೊಬೈಲ್ ನಿಂದ ಜೋರಾಗಿ ಹಾಡನ್ನು ಹಾಕುವುದು, ಜೋರಾಗಿ ಮೊಬೈಲ್ ನಲ್ಲಿ ಮಾತನಾಡುವುದು, ವಾರ್ತೆ, ಸಿನಿಮಾ ನೋಡುವುದು ಮುಂತಾದ ಶಬ್ದ ಮಾಲಿನ್ಯ ಉಂಟುಮಾಡುವ ಮೊಬೈಲ್ ಬಳಕೆಯನ್ನು ನಿಷೇಧಿಸಿದೆ ಎಂದು KSRTC MD ಶಿವಯೋಗಿ ಕಳಸದ್ ಸುತ್ತೋಲೆ ಹೊರಡಿಸಿದ್ದಾರೆ.
ಈ ವಿಷಯವನ್ನು ಬಸ್ಸಿನಲ್ಲಿ ಕರ್ತವ್ಯದಲ್ಲಿರುವ ಚಾಲನ ಸಿಬ್ಬಂದಿಗಳು ಪ್ರಯಾಣಿಕರಿಗೆ ತಿಳಿಸಿ ಸಹ ಪ್ರಯಾಣಿಕರಿಗೆ ತೊಂದರೆಯಾಗದಂತೆ ಮೊಬೈಲ್ ಬಳಸಲು ತಿಳಿಸಬೇಕು, ನಿಯಮ ಉಲ್ಲಂಘನೆ ಮಾಡಿದರೆ ಅವರನ್ನು ತಕ್ಷಣ ಬಸ್ಸಿನಿಂದ ಇಳಿಸಬೇಕು. ಆ ಪ್ರಯಾಣಿಕರು ಇಳಿಯುವ ತನಕ ವಾಹನವನ್ನು ನಿಲ್ಲಿಸುವುದು ಮಾಡಬಾರದು ಮತ್ತು ಅವರು ಎಲ್ಲಿಗೋ ಹೋಗುವವರು ಆಗಿದ್ದು ಅವರನ್ನು ಮದ್ಯದಲ್ಲಿಯೇ ಇಳಿಸಿದರೆ ಅವರಿಗೆ ಹಣವನ್ನು ಸಹ ಹಿಂದುರುಗಿಸಬಾರದು ಎಂದು ಆದೇಶವನ್ನು ಹೊರಡಿಸಿದೆ.