ಕಲಬುರಗಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ನೆಹರು ಹುಕ್ಕಾಬಾರ್ ಹೇಳಿಕೆಯ ಬೆನ್ನಲ್ಲೇ ಕೆಪಿಸಿಸಿ ವಕ್ತಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕುಡಿಯುತ್ತಿದ್ದರಂತೆ ಹಾಗಂತ ಎಲ್ಲಾ ಬಾರ್ ಗಳಿಗೂ ವಾಜಪೇಯಿ ಹೆಸರಡ್ತೀರಾ? ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಹಪೇಯಿ ತುಂಬಾ ಕುಡಿಯುತ್ತಿದ್ದರಂತೆ. ಹಾಗಾಂತ ಎಲ್ಲ ಬಾರ್ ಗಳಿಗೂ ವಾಜಪೇಯಿ ಹೆಸರಿಡ್ತೀರಾ? ಸಂಜೆ ಹೊತ್ತು ವಾಜಪೇಯಿ ಅವರಿಗೆ ವಿಸ್ಕಿ ಬೇಕಿತ್ತಂತೆ. ಹಾಗೂ ವಾಜಪೇಯಿ ಯವರು ಮಾಂಸ ಪ್ರಿಯರಾಗಿದ್ದರಂತೆ ಹಾಗಂತ ಎಲ್ಲ ಕಸಾಯಿಖಾನೆಗಳಿಗೂ ವಾಜಪೇಯಿಯ ಹೆಸರನ್ನು ಇಡುತ್ತೀರಾ? ಎಂದು ಹೇಳಿದ್ದಾರೆ.
ನೆಹರು ಅವರ ವೈಯಕ್ತಿಕ ಜೀವನದ ಬಗ್ಗೆ ಸಿ.ಟಿ. ರವಿ ಅವರು ತೇಜೋವಧೆ ಮಾಡುತ್ತಿರುವುದು ಸರಿಯಲ್ಲ. ಕುಡಿಯುವುದು. ಸಿಗರೇಟ್ ಸೇದೋದು ಅಕ್ರಮ ಅಲ್ಲ. ಬಿಜೆಪಿಯಲ್ಲಿರುವ ಎಲ್ಲರೂ ಸಾಚಾಗಳಲ್ಲ. ಅವರೂ ಕುಡಿಯುತ್ತಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದಾರೆ.
ಮೋದಿ ಸರ್ಕಾರ ಬಂದು ೭ ವರ್ಷ ಆಗಿದೆ. ಯಾವುದೇ ಅಭಿವೃದ್ಧಿ ಆಗಿಲ್ಲ. ಹೀಗಾಗಿ ಬಿಜೆಪಿ ನಾಯಕರು ಜನರ ಗಮನವನ್ನು ಬೇರೆಡೆ ಸೆಳೆಯಲು ಇಂದಿರಾ ಕ್ಯಾಂಟೀನ್, ಹಾಗೂ ನೆಹರು ಹೆಸರುಗಳನ್ನು ಹೇಳುತ್ತಿದ್ದಾರೆ ಎಂದು ಬಿಜೆಪಿಯ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದಾರೆ.