Sunday, September 24, 2023
Homeರಾಜಕೀಯಶೃಂಗೇರಿ ಮಠಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ; ವಿಶೇಷ ಯಾಗದಲ್ಲಿ ಭಾಗಿ

ಶೃಂಗೇರಿ ಮಠಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ; ವಿಶೇಷ ಯಾಗದಲ್ಲಿ ಭಾಗಿ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಪೀಠಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದ ಬಳಿಕ ಹೆಲಿಕಾಪ್ಟರ್ ಮೂಲಕ ಅವರು ಶೃಂಗೇರಿಗೆ ಕುಟುಂಬ ಸಮೇತರಾಗಿ ಆಗಮಿಸಿದರು. ಇಂದು ಶೃಂಗೇರಿಯಲ್ಲೇ ವಾಸ್ತವ್ಯ ಹೂಡಲಿರುವ ಡಿ ಕೆ ಶಿವಕುಮಾರ್ ನಾಳೆ ನಡೆಯಲಿರುವ ವಿಶೇಷ ಯಾಗದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಕುರಿತು ಮಾತನಾಡಿದ ಡಿ ಕೆ ಶಿವಕುಮಾರ್, ಶೃಂಗೇರಿ ಪವಿತ್ರ ಭೂಮಿ ಇಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನನ್ನ ಚುನಾವಣಾ ಪ್ರಚಾರವನ್ನು ಈ ಕ್ಷೇತ್ರದಿಂದ ಪ್ರಾರಂಭಿಸಲಿದ್ದೇನೆ. ಯಾವ ಯಾಗ, ಯಾವ ಪೂಜೆ ಎಂಬುದು ದೇವರಿಗೆ ಹಾಗೂ ಭಕ್ತಿನಿಗೆ ಬಿಟ್ಟ ವಿಚಾರ. ಅದು ಬೇರೆ ಯಾರಿಗೂ ಸಂಬಂಧಪಡುವುದಿಲ್ಲ. ಇಲ್ಲಿ ಯಾವ ಕಲ್ಮಶವೂ ಇಲ್ಲ.. ಯಾರು ಏನು ಬೇಕಾದರೂ ಪ್ರಾರ್ಥನೆ ಮಾಡಿಕೊಳ್ಳಬಹುದು. ರಾಜೀವ್ ಗಾಂಧಿ ಕಾಲದಿಂದಲೂ ಇಲ್ಲಿ ನಡೆದಿರುವುದು ಗೊತ್ತಿದೆ. ನಮಗೂ ಈ ಕ್ಷೇತ್ರಕ್ಕೂ ಭಾವನಾತ್ಮಕ ಸಂಬಂಧವಿದೆ ಎಂದು ಹೇಳಿದ್ದಾರೆ.

ತಮ್ಮಯ್ಯಗೆ ಕೈ ಟಿಕೆಟ್ ನೀಡಿದ್ದಕ್ಕೆ ಜಿಲ್ಲಾ ಉಪಾಧ್ಯಕ್ಷ ರಾಜೀನಾಮೆ

ಚಿಕ್ಕಮಗಳೂರು; ಎಚ್.ಡಿ.ತಮ್ಮಯ್ಯ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹುದ್ದೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವ ತೊರೆಯುವುದಾಗಿ ಬೀರೂರು ಕೆ.ಎಂ.ವಿನಾಯಕ ತಿಳಿಸಿದರು.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ಅಭ್ಯರ್ಥಿ ಆಯ್ಕೆ ಕುರಿತು ಸಾಮಾಜಿಕ ನ್ಯಾಯದಡಿ ತರೀಕೆರೆಯಲ್ಲಿ ಲಿಂಗಾಯತರಿಗೆ ಟಿಕೆಟ್ ನೀಡಿದರೆ. ಕಡೂರಿನಲ್ಲಿ ಕುರುಬರಿಗೆ, ಕಡೂರಿನಲ್ಲಿ ಲಿಂಗಾಯತರಿಗೆ ನೀಡಿದರೆ ತರೀಕೆರೆಯಲ್ಲಿ ಕುರುಬರಿಗೆ ಎಂಬ ನೀತಿಯನ್ನು ಬದಿಗೊತ್ತಿ ಎರಡೂ ಕ್ಷೇತ್ರಗಳಲ್ಲಿ ಕುರುಬ ಸಮುದಾಯಕ್ಕೆ ಮಣೆ ಹಾಕಲಾಗಿದೆ ಎಂದರು.

ಏಳು ಮಂದಿಯನ್ನು ಕಡೆಗಣಿಸಿ ಲಿಂಗಾಯತ ಎಂಬ ಕಾರಣಕ್ಕೆ ತಮ್ಮಯ್ಯ ಅವರಿಗೆ ಟಿಕೆಟ್ ಘೋಷಿಸಿರುವುದು ಪಕ್ಷ ನಿಷ್ಠರಿಗೆ ಅಸಮಾಧಾನ ಉಂಟು ಮಾಡಿರುವ ಕಾರಣ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು.

ಚುನಾವಣೆಗೆ ನಿಲ್ಲಲು ಹರಸಾಹಸ ಪಟ್ಟರು ವರಿಷ್ಠರು ಟಿಕೆಟ್ ನೀಡಿರಲಿಲ್ಲ:

ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಗಿಂತಲೂ ಅಧಿಕ ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತಾ ಬಂದಿದೇನೆ. ಕಳೆದ ಬಾರಿ ನಾನು ವಿಧಾನಸಭಾ ಚುನಾವಣೆಗೆ ನಿಲ್ಲಲು ಹರಸಾಹಸ ಪಟ್ಟರು ವರಿಷ್ಠರು ಟಿಕೆಟ್ ನೀಡಿರಲಿಲ್ಲ ಎಂದಿದ್ದಾರೆ.

ಇನ್ನೆರಡು ದಿನಗಳ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ:

ಪಕ್ಷ ನನ್ನ ಕಾರ್ಯ ನೋಡಿ ಈ ಬಾರಿಯಾದರೂ ಟಿಕೆಟ್ ನೀಡುವ ನಿರೀಕ್ಷೆ ಇತ್ತು ಆದರೆ ಅದು ಹುಸಿಯಾಯಿತು. ಈಗಾಗಲೇ ಕೆಲವು ಪಕ್ಷದ ನಾಯಕರು ಭೇಟಿ ಮಾಡಿ ಪಕ್ಷ ಸೇರುವಂತೆ ಮನವಿ ಮಾಡಿದ್ದಾರೆ. ನಾನು ಒಪ್ಪಿಲ್ಲ. ನನ್ನ ಅಭಿಮಾನಿಗಳು ಮತ್ತು ಕಾರ್ಯಕರ್ತರ ಸಭೆ ಕರೆದು ಇನ್ನೆರಡು ದಿನಗಳ ಬಳಿಕ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.

Most Popular

Recent Comments