ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿರುವ ಪ್ರಶಮನೀ ಆಸ್ಪತ್ರೆಯು ಅತ್ಯಾಧುನಿಕ ತಂತ್ರಜ್ಞಾನ, ವೈದ್ಯಕೀಯ ಉಪಕರಣಗಳು ಹಾಗೂ ಅನುಭವೀವೈದ್ಯರನ್ನು ಹೊಂದಿದೆ. ಸದಾ ರೋಗಿಗಳ ಶುಶ್ರೂಷೆ ಆರೈಕೆಯಲ್ಲಿರುವ ಆಸ್ಪತ್ರೆಯು ಇದೀಗ ಅತ್ಯಾಧುನಿಕ ಉಪಕರಣಗಳನ್ನು ಹಾಗೂ ನವೀಕೃತ ತಂತ್ರಜ್ಞಾನಗಳನ್ನು ಹೊಂದಿದೆ.
ಆಸ್ಪತ್ರೆಯ ವಿಶೇಷತೆಗಳು:
ಆಸ್ಪತ್ರೆಯು ಅತ್ಯಾಧುನಿಕ ತಂತ್ರಜ್ಞಾನದ ಜೊತೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಅನುಭವವುಳ್ಳ ಉತ್ತಮ ವೈದ್ಯರ ತಂಡವನ್ನು ಹೊಂದಿದ್ದು ಆಂಬುಲೆನ್ಸ್ ಸರ್ವೀಸ್, ಆಸ್ಪತ್ರೆಯಲ್ಲಿನ ಎಲ್ಲಾ ಕೊಠಡಿಗಳಿಗೆ ಆಕ್ಸಿಜನ್ ವ್ಯವಸ್ಥೆ, ವೆಂಟಿಲೇಟರ್ ವ್ಯವಸ್ಥೆ, ಐದು ಹಾಸಿಗೆಗಳ ಐಸಿಯು, ತುರ್ತು ಪರಿಸ್ಥಿತಿಯಲ್ಲಿ ಸಮಯವನ್ನೂ ಲೆಕ್ಕಿಸದೇ ಕಾರ್ಯನಿರ್ವಹಿಸುವ ವೈದ್ಯರ ತಂಡವನ್ನು ಹೊಂದಿದೆ.
24 ಗಂಟೆಯೂ ಲಭ್ಯವಿರುವ ಲ್ಯಾಬೋರೇಟರಿ:
ಪ್ರಶಮನೀ ಆಸ್ಪತ್ರೆಯಲ್ಲಿರುವ ಲ್ಯಾಬೋರೇಟರಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು ರೋಗಿಗಳು ಆರೋಗ್ಯಕ್ಕೆ ಸಂಬಂಧಿಸಿದ ಪರೀಕ್ಷೆಯನ್ನು, ಆಸ್ಪತ್ರೆಯ ಉತ್ತಮ ಗುಣಮಟ್ಟದ ಲ್ಯಾಬ್ ನಿಂದ ಪಡೆಯಬಹುದು.
ವಿಟಮಿನ್ ಡಿ3 ಪರೀಕ್ಷೆಯೂ ಲಭ್ಯ:
ವಯಸ್ಸಾದವರಲ್ಲಿ ಕಾಣಿಸುವ ಮೂಳೆ ಸಾಂದ್ರತೆ, ಸೊಂಟ ನೋವು, ಮೂಳೆಗೆ ಸಂಬಂಧಿಸಿದ ಇತರೆ ಸಮಸ್ಯೆಗಳನ್ನು ಪತ್ತೆ ಮಾಡುವ ವಿಟಮಿನ್ D3 ಪರೀಕ್ಷೆ ಸಹ ಲಭ್ಯವಿದೆ.
ಥೈರಾಯ್ಡ್ ಪರೀಕ್ಷೆ:
ಮಹಿಳೆಯರಲ್ಲಿ ಗಂಭೀರವಾಗಿ ಕಾಣಿಸುವ ಸಮಸ್ಯೆಯನ್ನುಂಟು ಮಾಡುವ ಥೈರಾಯ್ಡ್ ಟ್ರಯೋಡೋಥೈರೋನೈನ್ (T3) ಮತ್ತು ಥೈರಾಕ್ಸಿನ್ (T4), TSH ಪರೀಕ್ಷೆ ಸಹ ಲಭ್ಯವಿದೆ.
ಇಕೋ ಸ್ಕ್ಯಾನ್:
ಹೃದಯ ಸಂಬಂಧಿತ ತೊಂದರೆಗಳನ್ನು ಕಂಡುಹಿಡಿಯಲು, echo ಸ್ಕ್ಯಾನಿಂಗ್ ವ್ಯವಸ್ಥೆ ಸಹ ಲಭ್ಯವಿದ್ದು ಅಲ್ಟ್ರಾ ಸೌಂಡ್ ನೊಂದಿಗೆ ಸ್ಕ್ಯಾನಿಂಗ್ ನಡೆಯುತ್ತದೆ.ಅತ್ಯಾಧುನಿಕವಾದ 3D ಇಮೇಜಿಂಗ್ ಸಹ ಲಭ್ಯವಿದೆ.
ಫಿಜಿಯೋ ಥೆರಪಿ:
ಆಟಗಾರರು ಆಟವಾಡುವಾಗ ಬಿದ್ದು ತೊಂದರೆಗೊಳಗಾದಾಗ ನಡೆಸುವ ಲೇಸರ್ ಲೈಟ್ ಥೆರಪಿ, ಟ್ರಾಕ್ಷನ್, ಐ.ಎಫ್.ಡಿ, ಐ.ಆರ್, ಮಾಯಿಸ್ಟ್ ಹೀಟೆಡ್ ಥೆರಪಿ ಮುಂತಾದ ಸೌಲಭ್ಯಗಳು ಫಿಜಿಯೋ ಥೆರಪಿ ವಿಭಾಗದಲ್ಲಿ ಲಭ್ಯವಿದೆ.
ಎಲ್ಲಾ ಇನ್ಸೂರೆನ್ಸ್ ಗಳು ಆಸ್ಪತ್ರೆಯಲ್ಲಿ ಲಭ್ಯ:
ಇದಲ್ಲದೇ ಕೋವಿಡ್ ಟೆಸ್ಟ್ ಔಟ್ ಸೋರ್ಸ್, ಶಸ್ತ್ರ ಚಿಕಿತ್ಸೆಗೆ ನೆರವಾಗುವ ಲ್ಯಾಮಿನಾರ್ ಓಟಿ ಉಪಕರಣ, ಹಾಗೂ ರೋಗಿಗಳಿಗೆ ಚಿಕಿತ್ಸೆ ಪಡೆಯುವಲ್ಲಿ ನೆರವಾಗುವ ರಾಷ್ಟ್ರೀಕೃತ ಇನ್ಸೂರೆನ್ಸ್ ಕಂಪನಿಗಳ ಸಹಕಾರ ಹಾಗೂ ಸೌಲಭ್ಯವನ್ನು ಹೊಂದಿದೆ. ಮ್ಯಾಮ್ಕೋಸ್ ವತಿಯಿಂದ ದೊರೆಯುವ ಮ್ಯಾಮ್ಕೋಸ್ ಮೆಡಿಅಸಿಸ್ಟ್ ಇನ್ಸೂರೆನ್ಸ್ ಸಹ ಆಸ್ಪತ್ರೆಯಲ್ಲಿ ಲಭ್ಯವಿದೆ.
ಈಗಾಗಲೇ ಮ್ಯಾಮ್ಕೋಸ್ ಮೆಡಿಅಸಿಸ್ಟ್ ಇನ್ಸೂರೆನ್ಸ್ ನ ಮೂಲಕ ಕಿಡ್ನಿ ಸ್ಟೋನ್ ಸೇರಿದಂತೆ ಇನ್ನೂ ಅನೇಕ ಖಾಯಿಲೆಗಳನ್ನು ಗುಣಪಡಿಸುವ ಸಲುವಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂಬುದಾಗಿ ಆಸ್ಪತ್ರೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತುರ್ತು ಸಂದರ್ಭಗಳಲ್ಲಿ ಅಥವಾ ಇನ್ನಿತರೆ ಅವಶ್ಯಕ ಸಂದರ್ಭದಲ್ಲಿ ದೂರದ ಆಸ್ಪತ್ರೆಗಳಿಗೆ ಪ್ರಯಾಣ ನಡೆಸುವ ಬದಲು, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಯಂತ್ರಗಳನ್ನು ಹಾಗೂ ಉತ್ತಮ ವೈದ್ಯಕೀಯ ತಂಡವನ್ನು ಹೊಂದಿರುವ ಕೊಪ್ಪದ ಪ್ರಶಮನೀ ಆಸ್ಪತ್ರೆಯಲ್ಲಿ ದೊರೆಯುವ ಆರೋಗ್ಯ ಸೇವೆಯನ್ನು ಪಡೆಯಬಹುದು.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಬಾಳಗಡಿ ರಸ್ತೆಯಲ್ಲಿ ಪ್ರಶಮನೀ ಆಸ್ಪತ್ರೆಯಿದ್ದು ಹೆಚ್ಚಿನ ಮಾಹಿತಿಗಾಗಿ 9380929325 ನಂಬರ್ ನ್ನು ಸಂಪರ್ಕಿಸಬಹುದಾಗಿದೆ.