Thursday, June 8, 2023
Homeಇತರೆಸೆಲೆಬ್ರಿಟಿ ಎನ್ನುವ ಕಾರಣಕ್ಕೆ ನನ್ನ ಹೆಸರನ್ನು ಬಳಸಿಕೊಂಡಿದ್ದಾರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ :...

ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ನನ್ನ ಹೆಸರನ್ನು ಬಳಸಿಕೊಂಡಿದ್ದಾರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ : ನಟ ಕೋಮಲ್

ಬೆಂಗಳೂರು: ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ನನ್ನ ಹೆಸರನ್ನು ವಿನಾಕಾರಣ ಬಳಸಿಕೊಂಡು ಮಸಿಯನ್ನು ಬಳೆಯುವ ಪ್ರಯತ್ನ ಮಾಡಲಾಗುತ್ತಿದ್ದು, ಅಂತಹವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆಂದು ನಟ ಕೋಮಲ್ ಅವರು ಎಚ್ಚರಿಸಿದ್ದಾರೆ.

ತಮ್ಮ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪಕ್ಕೆ ಪ್ರತಿಕ್ರಿಯೆಯನ್ನು ನೀಡಿರುವ ಕೋಮಲ್, ನನ್ನ ಮೇಲೆ ಏನೇನು ಆರೋಪ ಬಂದಿದೆಯೋ ಅದನ್ನು ವಿಚಾರಣೆ ಮಾಡಲಿ. ನಾನು ತಪ್ಪಿತಸ್ಥ ಎಂದು ಸಾಬೀತಾದರೆ ಬೇಕಾದ್ದನ್ನು ಮಾಡಲಿ. ಸುಮ್ಮನೆ ನನ್ನ ಹೆಸರು ಬಳಸಿದರೆ ಅಂತಹವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸುತ್ತೇನೆಂದು ಹೇಳಿದ್ದಾರೆ.

ನಾನು ಯಾವ ಟೆಂಡರ್ ನನ್ನು ತೆಗೆದುಕೊಂಡಿಲ್ಲ . ನನಗೂ ಅದಕ್ಕೂ ಸಂಬoಧವಿಲ್ಲ. ನಾನು ಯಾವ ಸ್ವೆಟರ್ ವ್ಯವಹಾರವನ್ನೂ ಮಾಡಿಲ್ಲ. ಸೆಲೆಬ್ರಿಟಿ ಹೆಸರು ಹೇಳಿಕೊಂಡು ಪ್ರಚಾರ ಆಗುತ್ತೆ ಎಂದು ನಮ್ಮ ಹೆಸರನ್ನು ಬೇಕಾಬಿಟ್ಟಿ ಬಳಸಲಾಗುತ್ತಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿ ಪ್ರತಿವರ್ಷ ತನ್ನ ಪಾಲಿಕೆ ವ್ಯಾಪ್ತಿಯ ಮಕ್ಕಳಿಗೆ ಸ್ವೇಟರ್ ಅನ್ನು ವಿತರಿಸುತ್ತದೆ. ಈ ಸ್ವೆಟರ್ ವಿತರಣೆಗೆ ಟೆಂಡರ್ ಕರೆಯಲಾಗುತ್ತದೆ. ಈ ಟೆಂಡರ್ ನನ್ನು ನಟ ಕೋಮಲ್ ಪಡೆದಿದ್ದಾರೆ. ಕಳೆದ ವರ್ಷ ಈ ಸ್ವೇಟರ್ ಟೆಂಡರ್ ನನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೇ, ಇದಕ್ಕೆ ಸಂಬoಧಿಸಿದoತೆ ಹಣವನ್ನು ಕೂಡ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ವಿಪರ್ಯಾಸ ಎಂದರೆ, ಕಳೆದ ವರ್ಷ ಶಾಲೆಗಳೇ ನಡೆದಿಲ್ಲ. ಆದರೂ ಕೂಡ ಸ್ವೇಟರ್ ವಿತರಣೆ ಮಾಡಿದ್ದೇವೆ ಎಂದು ಹಣವನ್ನು ಬಿಡುಗಡೆ ಮಾಡಿಸಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.

ಈ ವಿಷಯದ ಸಂಬoಧ ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿಯ ಮುಂದೆ ಸ್ವೇಟರ್ ಗಳನ್ನು ಹರಾಜು ಹಾಕುವ ಮೂಲಕ ಪ್ರತಿಭಟನೆಯನ್ನು ನಡೆಸಿತು. ಕಮಿಷನರ್ ಕಚೇರಿಯ ಮುಂಭಾಗ ನೂರಾರು ಸ್ವೆಟರ್ ಗಳನ್ನು ಸುರಿದು ಒಂದು ಸ್ವೆಟರ್ ರೂ.50 ಬೆಲೆ ನಿಗದಿ ಮಾಡಿ ಹರಾಜು ಮಾಡಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆಯನ್ನು ನಡೆಸಿದರು.

Most Popular

Recent Comments