Wednesday, November 29, 2023
Homeಇತರೆಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಗಳಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ಐಐಟಿ ಪದವೀಧರ ಅರೆಸ್ಟ್.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಗಳಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ಐಐಟಿ ಪದವೀಧರ ಅರೆಸ್ಟ್.

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ದಂಪತಿಯ ಮಗಳಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಹೈದರಾಬಾದ್ ನಲ್ಲಿ ಬಂಧಿಸಿದ್ದಾರೆ.

ಆರೋಪಿ ರಾಮನಾಗೇಶ್ ಶ್ರೀನಿವಾಸ್ ಅಕುಬಾತಿನಿ(23) ಐಐಟಿ ಯಲ್ಲಿ ಪದವೀಧರ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಟಿ20 ವಿಶ್ವ ಪಾಕಿಸ್ತಾನದ ಎದುರು ಹೀನಾಯವಾಗಿ ಸೋಲನ್ನು ಕಂಡಿತ್ತು. ಮೈದಾನದಲ್ಲಿ ಟೀಂ ಇಂಡಿಯಾ ಸೋಲನ್ನು ಅನುಭವಿಸಿದಾಗ ಅಭಿಮಾನಿಗಳು ಆಕ್ರೋಶಗೊಂಡು ಆಟಗಾರರನ್ನು ಟ್ರೊಲ್ ಮಾಡಲು ಶುರುಮಾಡಿದರು ಅನೇಕ ಆಟಗಾರರು ಟ್ರೋಲಿಂಗ್‌ಗೆ ಬಲಿಯಾದರು.

ನಂತರ ಟೀಂ ಇಂಡಿಯಾ ಹೀನಾಯವಾಗಿ ಸೋಲನ್ನು ಕಂಡಿದ್ದರಿಂದ ನಿರಾಶೆ, ಹಾಗೂ ಆಕ್ರೋಶಗೊಂಡ ಅಭಿಮಾನಿಗಳು ಎಲ್ಲಾ ನಾಯಕರಿಗೂ ಟ್ರೊಲ್ ಮಾಡಿದ ಹಾಗೆ ವಿರಾಟ್ ಕೊಹ್ಲಿ ಅವರನ್ನು ಟ್ರೊಲ್ ಮಾಡಿದ್ದು ಮಾತ್ರವಲ್ಲದೆ ಅವರ ಒಂಬತ್ತು ತಿಂಗಳ ಮಗಳಿಗೆ ಅತ್ಯಾಚಾರದ ಬೆದರಿಕೆಯನ್ನು ಹಾಕಿದರು.

ಅಭಿಮಾನಿಯ ಈ ನೀಚ ಕೃತ್ಯಕ್ಕೆ ಎಲ್ಲೆಡೆ ಖಂಡನೆ ವ್ಯಕ್ತವಾಯಿತು. ವಿರಾಟ್ ಕೊಹ್ಲಿ ಅನುಷ್ಕಾ ದಂಪತಿಯ ಮಗಳಿಗೆ ಬೆದರಿಕೆ ಹಾಕಿದ ನಂತರ ದೆಹಲಿ ಮಹಿಳಾ ಆಯೋಗವು ಈ ಕೃತ್ಯದ ಬಗ್ಗೆ ನೋಟಿಸ್ ಜಾರಿ ಮಾಡಿತು ಮತ್ತು ವಿರಾಟ್ ಕೊಹ್ಲಿಯ ಮ್ಯಾನೇಜರ್ ಕೂಡ ಎಫ್‌ಐಆರ್ ದಾಖಲಿಸಿದರು ಅನಂತರ ತನಿಖೆಯನ್ನು ಶುರು ಮಾಡಿದ ಮುಂಬೈ ಪೊಲೀಸ ಸೈಬರ್ ಸೆಲ್ ತಂಡ ಅತ್ಯಾಚಾರ ಬೆದರಿಕೆ ಹಾಕಿದ ವ್ಯಕ್ತಿಗಾಗಿ ಹುಡುಕಾಟ ಆರಂಭಿಸಿದರು.

ತೀವ್ರ ತನಿಖೆಯನ್ನು ನಡೆಸಿದ ಪೊಲೀಸರು ಬುಧವಾರ ಆರೋಪಿ ರಾಮನಾಗೇಶ್ ಶ್ರೀನಿವಾಸ್ ಅಕುಬಾತಿನಿಯನ್ನು ಹೈದರಾಬಾದ್‌ ನಲ್ಲಿ ಬಂಧಿಸಿ ಮುಂಬೈ ಗೆ ಕರೆತರಲಾಗಿದೆ.

Most Popular

Recent Comments