Tuesday, November 28, 2023
Homeಕ್ರೈಂ ನ್ಯೂಸ್ಹಾಸನ: ರಾಮ ನವಮಿ ವೇಳೆ ಚಾಕು ಇರಿತ: ಇಬ್ಬರಿಗೆ ಗಾಯ

ಹಾಸನ: ರಾಮ ನವಮಿ ವೇಳೆ ಚಾಕು ಇರಿತ: ಇಬ್ಬರಿಗೆ ಗಾಯ

ಹಾಸನ: (ನ್ಯೂಸ್ ಮಲ್ನಾಡ್ ವರದಿ) ರಾಮ ನವಮಿ ವೇಳೆ ನಡೆದ ಘರ್ಷಣೆಯಲ್ಲಿ ಇಬ್ಬರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಗುರುವಾರ ರಾತ್ರಿ ನಡೆದಿದೆ. ಮುರುಳಿ, ಹರ್ಷ ಹಲ್ಲೆಗೊಳಗಾದ ಯುವಕರು.

ಚನ್ನರಾಯಪಟ್ಟಣ ನಗರದ ಮೇಗಲಕೇರಿ ಕಾಡು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಮೋತ್ಸವ ಮತ್ತು ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ದೇಗುಲದಿಂದ ಬಾಗೂರು ರಸ್ತೆಯ ದೊಡ್ಡ ಮಸೀದಿ ಸಮೀಪ ದೇವರ ಉತ್ಸವ ಬರುತ್ತಿದ್ದಂತೆಯೆ ಕೆಲವು ಯುವಕರು ಗಲಾಟೆ ಆರಂಭಿಸಿದ್ದಾರೆ. ಈ ಗಲಾಟೆ ವಿಕೋಪಕ್ಕೆ ತಿರುಗಿ ಮುರಳಿ ಎಂಬುವವರ ಕುತ್ತಿಗೆ ಹಾಗೂ ಹರ್ಷ ಎಂಬುವರಿಗೆ ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಇರಿಯಲಾಗಿದೆ.

ಸ್ಥಳೀಯರು ಕೂಡಲೇ ಗಾಯಗೊಂಡ ಯುವಕರನ್ನು ಆಸ್ಪತ್ರೆಗೆ ದಾಖಲಿಸಿದರು, ಪ್ರಾಣಾಪಾಯದಿಂದ ಪಾರಾಗಿದ್ದು, ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಸ್ಥಳೀಯ ಪೊಲೀಸರೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಡಿವೈಎಸ್ಪಿ ರವಿಪ್ರಸಾದ್ ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸ ಪಟ್ಟರು. ರಸ್ತೆಯ ಅಲ್ಲಲ್ಲಿ ನಾಕಾಬಂದಿ ಹಾಕಿದ್ದು, ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ. ಈ ಘಟನೆ ಕುರಿತು ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Most Popular

Recent Comments