Monday, December 11, 2023
Homeಮಲೆನಾಡುಚಿಕ್ಕಮಗಳೂರುಕೊಪ್ಪ: ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆ

ಕೊಪ್ಪ: ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆ

ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಳಿಂಗ ಸರ್ಪ ಮತ್ತು ಇತರೆ ಹಾವುಗಳು ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಅದೇ ರೀತಿ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಮಲೆನಾಡಿನಲ್ಲಿ ಕಾಣಿಸಿಕೊಂಡಿದ್ದು, ಅದನ್ನು ಸೆರೆ ಹಿಡಿಯುವಲ್ಲಿ ಉರಗ ತಜ್ಞ ಹರಿಂದ್ರ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ; ಗಮನಿಸಿ: ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಹೀಗಿದೆ 07-07-2023

ಇದನ್ನೂ ಓದಿ; ಚಿಕ್ಕಮಗಳೂರು: ಪತಿಯ ಪ್ರಿಯತಮೆಯಿಂದಲೇ ನಡೀತಾ ಪತ್ನಿಯ ಭೀಕರ ಕೂಲೆ?

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪ ಕುಣಿಮಕ್ಕಿ ಗ್ರಾಮದ ಸಂತೋಷ್ ಎಂಬುವವರ ಅಡಿಕೆ ತೋಟದಲ್ಲಿ ಕಾಣಿಸಿಕೊಂಡಿದ್ದ ಬರೋಬ್ಬರಿ 13 ಅಡಿ ಉದ್ದದ ಕಾಳಿಂಗವನ್ನು ಸೆರೆ ಹಿಡಿಯಾಲಾಗಿದೆ.

ಮಳೆ ಆರಂಭ ಆದ ಹಿನ್ನಲೆಯಲ್ಲಿ ರೈತರು ತೋಟದ ಕೆಲಸದಲ್ಲಿ ನಿರತರಾಗಿರುತ್ತಾರೆ ಈ ನಡುವೆ ಅಡಿಕೆ ತೋಟದಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡ ಹಿನ್ನಲೆಯಲ್ಲಿ ರೈತರು ಭಯಭೀತರಾಗಿದ್ದಾರೆ. ಇನ್ನು ಕಾಳಿಂಗ ಸರ್ಪವನ್ನು ಉರಗ ತಜ್ಞ ಹರಿಂದ್ರ ಸೆರೆ ಹಿಡಿದು ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ. ಇನ್ನು ಉರಗ ತಜ್ಞ ಹರಿಂದ್ರ ಹಿಡಿದ 302 ನೇ ಕಾಳಿಂಗ ಸರ್ಪ ಇದಾಗಿದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು

ಮೂಡಿಗೆರೆ: ಸರ್ಕಾರಿ ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ; ಇಬ್ಬರು ಡ್ರೈವರ್ ಗಳ ಕಾಲಿಗೆ ತೀವ್ರ ಗಾಯ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಸರ್ಕಾರಿ ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ.

ಸರ್ಕಾರಿ ಬಸ್ಸುಗಳ ನಡೆವೆ ಮುಖಾಮುಖಿ ಡಿಕ್ಕಿಯಾಗಿ ಎರಡೂ ಬಸ್ ಗಳ ಡ್ರೈವರ್ ಗಳ ಕಾಲಿಗೆ ತೀವ್ರ ಗಾಯಗಳಾಗಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 2 ಬಸ್ಸುಗಳಲ್ಲಿ 80ಕ್ಕೂ ಹೆಚ್ಚು ಜನ ಪ್ರಯಾಣಿಕರು ಇದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇನ್ನು ಈ ಅಪಘಾತಕ್ಕೆ ರಸ್ತೆ ಕಾಮಾಗಾರಿಯೇ ಕಾರಣ ಎಂದು ಹೇಳಲಾಗಿದೆ. 2019 ರಲ್ಲಿ ಕುಸಿದಿದ್ದ ಕಾಮಗಾರಿ ಇನ್ನೂ ಮುಗಿಯದೇ ಇರದ ಕಾರಣ ಈ ಅಪಘಾತ ಸಂಭವಿಸಿದ್ದು, ಚಾರ್ಮಾಡಿಯಲ್ಲಿ ರಸ್ತೆ ಕಾಮಗಾರಿಯನ್ನ ಕೂಡಲೇ ಮುಗಿಸುವಂತೆ ಆಗ್ರಹಿಸಲಾಗಿದೆ. ಹಾಗೂ ಚಾರ್ಮಾಡಿ ಘಾಟಿಯ ಮಂಜು ಕೂಡ ಕಾರಣ ಎನ್ನಲಾಗಿದೆ. ಚಾರ್ಮಾಡಿಯಲ್ಲಿ ಕವಿದಿರೋ ಭಾರೀ ಪ್ರಮಾಣದ ಮಂಜು ಅಡಿ ದೂರದಲ್ಲಿ ಇರುವವರು ಕಾಣದಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಅಪಘಾತದಿಂದ ಕಿ.ಮೀ.ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದ್ದು, ಘಾಟಿಯಲ್ಲಿ ಸಿಲುಕಿ ವಾಹನ ಸವಾರರ ಪರದಾಡುವಂತೆ ಆಗಿದೆ. ಇನ್ನು ಕೆಲ ಪ್ರಯಾಣಿಕರು 10 ಕಿ.ಮೀ. ನಡೆದು ಕೊಟ್ಟಿಗೆಹಾರ ತಲುಪಿದ್ದಾರೆ.

Most Popular

Recent Comments