Friday, June 9, 2023
Homeಇತರೆಬ್ರಾಹ್ಮಣ ಯುವಕನನ್ನು ವರಿಸಿದ ಮಲ್ಲಿಕಾರ್ಜುನ್ ಖರ್ಗೆ ಮೊಮ್ಮಗಳು! ದಲಿತ-ಬ್ರಾಹ್ಮಣ ವಿವಾಹಕ್ಕೆ ಸಾಕ್ಷಿಯಾದ ರಾಜಕಾರಣಿಗಳು

ಬ್ರಾಹ್ಮಣ ಯುವಕನನ್ನು ವರಿಸಿದ ಮಲ್ಲಿಕಾರ್ಜುನ್ ಖರ್ಗೆ ಮೊಮ್ಮಗಳು! ದಲಿತ-ಬ್ರಾಹ್ಮಣ ವಿವಾಹಕ್ಕೆ ಸಾಕ್ಷಿಯಾದ ರಾಜಕಾರಣಿಗಳು

ಬೆಂಗಳೂರು : ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯ ಮೊಮ್ಮಗಳ ವಿವಾಹ ಬಂಟ್ವಾಳ ಮೂಲದ ಯುವಕನ ಜೊತೆ ಅರಮನೆ ಮೈದಾನದಲ್ಲಿ ನಡೆಯಿತು.

ದಲಿತ ಸಮುದಾಯದವರಾದ ಖರ್ಗೆಯವರು ತಮ್ಮ ಮೊಮ್ಮಗಳ ವಿವಾಹವನ್ನು ಹವ್ಯಕ ಬ್ರಾಹ್ಮಣ ಯುವಕನ ಜೊತೆ ನಡೆಸಿದರು ಈ ಮುಖಾಂತರ ಕಾಂಗ್ರೆಸ್ ಪಕ್ಷದ ಲೋಕಸಭೆಯ ಪ್ರತಿಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಹವ್ಯಕ ಬ್ರಾಹ್ಮಣರ ಜೊತೆ ಸಂಬಂಧವನ್ನು ಬೆಳೆಸಿದರು.

ಮಲ್ಲಿಕಾರ್ಜುನ ಖರ್ಗೆಯವರ ಸುಪುತ್ರಿ ಜಯಶ್ರೀ ಮತ್ತು ರಾಧಾಕೃಷ್ಣ ದಂಪತಿಯ ಮಗಳಾಗಿರುವ ಪ್ರಾರ್ಥನಾರನ್ನು ಬಂಟ್ವಾಳ ತಾಲೂಕಿನ ವಿರಾಕುಂಭ ಗ್ರಾಮದ ಗಿಲ್ಕಿಂಜಿ ಮನೆಯ ಎ.ಟಿ ಹರಿಶಂಕರ ಮತ್ತು ವಿಜಯಲಕ್ಷ್ಮಿ ದಂಪತಿಯ ಪುತ್ರ ಪಾಣಿನಿ ಭಟ್ ವರಿಸಿದರು.

ಪ್ರಾರ್ಥನಾ ಮತ್ತು ಪಾಣಿನಿ ಭಟ್ ಒಂದೇ ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಿದ್ದು ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಹಾಗೂ ತಮ್ಮ ಪ್ರೀತಿಯ ವಿಷಯವನ್ನು ಕುಟುಂಬಗಳಿಗೆ ತಿಳಿಸಿ ಮದುವೆಗೆ ಒಪ್ಪಿಸಿ ಎರಡೂ ಕುಟುಂಬಗಳ ಸಮ್ಮತಿಯಿಂದ ಅದ್ದೂರಿಯಾಗಿ ಮದುವೆಯಾಗಿದ್ದಾರೆ.

ಈ ಮದುವೆ ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡರಾದ ವೀರಪ್ಪ ಮೊಯ್ಲಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸಚಿವ ರಣಧೀಪ್ ಸುರ್ಜಿವಾಲ, ಮಾಜಿ ಸಿಎಂ ಬಿ,ಎಸ್ ಯಡಿಯೂರಪ್ಪ, ಮಾಜಿ ಸಚಿವ ರಮಾನಾಥ ರೈ ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಿದ್ದರು.

Most Popular

Recent Comments