Friday, June 9, 2023
Homeಸುದ್ದಿಗಳುದೇಶಕೆಜಿಎಫ್ ಬಾಬು 5000 ಕೋಟಿ ಒಡೆಯನಾಗಿದ್ದು ಹೇಗೆ ಗೊತ್ತ? ಇಲ್ಲಿದೆ ಬಾಬು ರೋಚಕ ಜರ್ನಿ

ಕೆಜಿಎಫ್ ಬಾಬು 5000 ಕೋಟಿ ಒಡೆಯನಾಗಿದ್ದು ಹೇಗೆ ಗೊತ್ತ? ಇಲ್ಲಿದೆ ಬಾಬು ರೋಚಕ ಜರ್ನಿ

ಬಡ ಕುಟುಂಬದಲ್ಲಿ ಜನಿಸಿದ ಸಾಮಾನ್ಯ ವ್ಯಕ್ತಿಯೊಬ್ಬ ಸಾವಿರಾರು ಕೋಟಿ ಆಸ್ತಿಗೆ ಒಡೆಯನಾಗಿರುವ ನಿದರ್ಶನವೊಂದು ಕರ್ನಾಟಕದಲ್ಲಿ ನಡೆದಿದೆ.

ಗುಜರಿ ಆಯುವ ವ್ಯಕ್ತಿಯಾಗಿದ್ದ ಯುಸೆಫ್ ಜರಿ ವಸ್ತುಗಳನ್ನು ಸಂಗ್ರಹಿಸುವ ಸಂದರ್ಭದಲ್ಲಿ ಸಿಕ್ಕ ಒಂದು ವಸ್ತುವಿನಿಂದ ಇಂದು ಸಾವಿರಾರು ಕೋಟಿ ಆಸ್ತಿಗೆ ಒಡೆಯರಾಗಿದ್ದಾರೆ. ಆ ವ್ಯಕ್ತಿಯ ಹೆಸರು ಯುಸೆಫ್ ಶರೀಫ್, ಇವರು ಮೂಲತಃ ಕೋಲಾರದವರೇ ಆಗಿದ್ದು ಇವರನ್ನು ಗುಜರಿಬಾಬು, ಕೆಜಿಎಫ್ ಬಾಬು ಎಂದು ಕರೆಯುತ್ತಾರೆ.

ಯುಸೆಫ್ ಶರೀಫ್ ರವರ ತಂದೆತಾಯಿಗೆ ಒಟ್ಟು 14 ಜನ ಮಕ್ಕಳು ಅದರಲ್ಲಿ ಇವರೇ ಮೊದಲನೇ ಮಗ, ಇವರದ್ದು ಬಡ ಕುಟುಂಬ ಆಗಿದ್ದರಿಂದ ಅವರ ಪೋಷಕರು ಒಂದು ಪುಟ್ಟ ಬೇಕರಿಯನ್ನು ಇಟ್ಟುಕೊಂಡು ಅದರಲ್ಲಿ ಬರುವ ಅಲ್ಪಸ್ವಲ್ಪ ಹಣದಲ್ಲಿಯೇ ಜೀವನವನ್ನು ನಡೆಸುತ್ತಿದ್ದರು. ಆದರೆ ಆ ಹಣದಲ್ಲಿ ಜೀವನವನ್ನು ನಡೆಸಲು ಸಾಲದೇ ಇರುವುದರಿಂದ ಯುಸೆಫ್ ಅವರ ತಂದೆ ಆಟೋವನ್ನು ಓಡಿಸುತ್ತಿದ್ದರು ಜೊತೆಗೆ ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿದ್ದರು ಆದ್ದರಿಂದ ಇದೆಲ್ಲವನ್ನು ತಿಳಿದುಕೊಂಡ ಯುಸೆಫ್ 4 ನೇ ತರಗತಿಯಲ್ಲಿಯೇ ವಿದ್ಯಾಭ್ಯಾಸವನ್ನು ನಿಲ್ಲಿಸಿ ಕೋಲಾರದ ಬೀದಿಗಳಲ್ಲಿ ಗುಜರಿ ಆಯುವ ಕೆಲಸವನ್ನು ಮಾಡುತ್ತಿದ್ದರು. ಕೆಜಿಎಫ್ ಗಣಿಯಲ್ಲಿ ಕಸಗುಡಿಸುವ ಸ್ಕ್ರಾಪ್ ಗಳನ್ನು ಕಲೆಹಾಕುವ ಕೆಲಸವನ್ನು ಮಾಡುತ್ತಿದ್ದರು ಜೊತೆಗೆ ತಂದೆಗೆ ಸಹಾಯವಾಗಲೆಂದು ಚಿಕ್ಕ ವಯಸ್ಸಿನಲ್ಲಿಯೇ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದರು.

ಜೀವನ ಬದಲಿಸಿದ ಆ ಒಂದು ಘಟನೆ.

ಒಮ್ಮೆ ಕೋಲಾರದ ಕೆಜಿಎಫ್ ನಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿದ್ದರಿಂದ ಬ್ರಿಟಿಷರ ಕಾಲದ ಟ್ಯಾಂಕರ್ ಗಳನ್ನು, ಸ್ಕ್ರಾಫ್ಟ್ ಪೋಸ್ಟ್ ಗಳನ್ನು ಹೈಕೋರ್ಟ್ ವಶಪಡಿಸಿಕೊಂಡ ಪರಿಣಾಮವಾಗಿ ಅವುಗಳನ್ನು ಸಾರ್ವಜನಿಕವಾಗಿ ಹರಾಜು ಹಾಕಲಾಗಿತ್ತು, ಹರಾಜಿಗೂ ಮುನ್ನ ಅದನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಟ್ಯಾಂಕ್ ನಲ್ಲಿ ಅಂಗೈ ಅಗಲದ ಕಪ್ಪು ಬಣ್ಣದ ಕಲ್ಲು ದೊರೆಯುತ್ತದೆ, ಅವರು ಅದನ್ನು ನೀರಿನಿಂದ ತೊಳೆದಾಗ ಅದು ಕಪ್ಪು ಬಣ್ಣದಿಂದ ಹಳದಿ ಬಣ್ಣಕ್ಕೆ ತಿರುಗುತ್ತದೆ. ಅವರು ಕೆಜಿಎಫ್ ನಲ್ಲಿಯೇ ಹುಟ್ಟಿ ಬೆಳೆದು ಅಲ್ಲಿಯ ಬಗ್ಗೆ ತಿಳಿದಿದ್ದರಿಂದ ಅದು ಬರೀ ಕಲಲ್ಲ ಅಪರಂಜಿ ಎಂದು ತಿಳಿದು ಸಂತಸಗೊಳ್ಳುತ್ತಾರೆ, ನಂತರ ಅಲ್ಲಿದ್ದಂತಹ ಉಳಿದ 20 ಟ್ಯಾಂಕರ್ ನನ್ನು ಸಹ ನೋಡಿದಾಗ ಅದರಲ್ಲಿಯೂ ಅಪರಂಜಿ ತುಣುಕುಗಳು ಸಿಗುತ್ತದೆ ಅವರಿಗೆ ಆ ಟ್ಯಾಂಕರ್ ಗಳಿಂದ 13 ಕೆಜಿ ಶುದ್ಧ ಅಪರಂಜಿ ದೊರೆಯುತ್ತದೆ, ಅಂದಿನಿಂದ ಅವರ ಜೀವನದ ದಾರಿಯೇ ಬದಲಾಗುತ್ತದೆ, ಅಪರಂಜಿ ದೊರೆತ ಸಂತಸದ ಜೊತೆಗೆ ಅವರಿಗೆ ಹೆಣ್ಣು ಮಗುವೂ ಜನಿಸಿರುವುದು ತಿಳಿದು ಅವರ ಸಂತೋಷಕ್ಕೆ ಕೊನೆಯೇ ಇಲ್ಲದಂತೆ ಹೊಸ ಜೀವನವನ್ನು ಆರಂಭಿಸುತ್ತಾರೆ.

ಅನಂತರ ಅವರು 2002 ರಿಂದ ಹೈಕೋರ್ಟ್ ಹರಾಜಿಡುವ ಮುಖ್ಯವಾದ ವಸ್ತುಗಳನ್ನು ಖರೀದಿಸಿ ಅವುಗಳಿಗೆ ಬಂಡವಾಳವನ್ನು ಹಾಕಿ ಅದರಿಂದ ದುಪ್ಪಟ್ಟು ಆದಾಯವನ್ನು ಪಡೆದು ಶ್ರೀಮಂತರ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ. ಅವರು ಕೋಲಾರದಲ್ಲಿಯೇ ಜಾವ ಫ್ಯಾಕ್ಟರಿಯನ್ನು ಖರೀದಿಸಿ ವರ್ಷದ ಒಳಗೆ 3 ಕೋಟಿ ವರಮಾನವನ್ನು ಗಳಿಸಿದ್ದಾರೆ.

ಇಂದು ಇವರು ಕೈನಲ್ಲಿ ಕಟ್ಟಿಕೊಳ್ಳುವ ವಾಚಿನ ಬೆಲೆ 1 ಕೋಟಿಗೂ ಅಧಿಕ ಬೆಲೆಯನ್ನು ಹೊಂದಿದೆ, ಇವರ ಬಳಿ ಕೋಟ್ಯಂತರ ಮೌಲ್ಯದ ಕಾರುಗಳಿವೆ, ಬೆಂಗಳೂರಿನಲ್ಲಿ 30 ರಿಂದ 40 ಕೋಟಿ ಮೌಲ್ಯದ ಭವ್ಯ ಬಂಗಲೆಯನ್ನು ನಿರ್ಮಿಸಿದ್ದಾರೆ. ಯುಸೆಫ್ ಶರೀಫ್ ರವರು ಅನೇಕ ಬಡವರಿಗೆ ಸಹಾಯವನ್ನು ಮಾಡುವ ಮೂಲಕ ಕೋಲಾರದ ಮನೆ ಮನೆಯ ಮಾತಾಗಿದ್ದಾರೆ ಅವರೆಲ್ಲರೂ ಪ್ರೀತಿಯಿಂದ ಬಂಗಾರದ ಮನುಷ್ಯ ಎಂದು ಯುಸೆಫ್ ಅವರನ್ನು ಕರೆಯುತ್ತಾರೆ.
ಇವರು ಸಮಾಜ ಸೇವೆಯನ್ನು ಮಾಡುವುದರ ಜೊತೆಗೆ ತಾನು ಬಡತನದಲ್ಲಿ ಕಷ್ಟ ಪಟ್ಟ ಹಾಗೆ ಇನ್ನಾರು ಪಡಬಾರದು ಎಂಬ ಉದ್ದೇಶದಿಂದ 20.000 ಕ್ಕೂ ಅಧಿಕ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದಾರೆ.

ಯುಸೆಫ್ ಶರೀಫ್ ನವರು 10 ಸಾವಿರ ಹಣವನ್ನು ದುಡಿಯಲು ಒಂದು ತಿಂಗಳು ಬೇಕು, 1 ಲಕ್ಷ ಹಣವನ್ನು ದುಡಿಯಲು ಒಂದು ವರ್ಷ ಬೇಕು, ಆದರೆ ಅದೃಷ್ಟವಿದ್ದರೆ 1 ಕೋಟಿ ಹಣವನ್ನು ಪಡೆಯಲು ಒಂದು ನಿಮಿಷ ಸಾಕು ಎಂದು ತಮ್ಮ ಅನುಭವದ ಮಾತನ್ನು ಹೇಳಿದ್ದಾರೆ. ಈ ರೀತಿಯ ಘಟನೆಗಳು ಜೀವನದ ಶೈಲಿಯನ್ನೇ ಬದಲಾಯಿಸಿ, ಜೀವನವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ.

Most Popular

Recent Comments