ಮಂಗಳೂರು: ಆರ್ ಟಿಪಿಸಿಆರ್ ನೆಗೆಟಿವ್ ವರದಿ ಇಲ್ಲದ ನೂರಾರು ಕೇರಳ ಪ್ರಯಾಣಿಕರನ್ನು ಕರ್ನಾಟಕದ ಗಡಿ ತಲಪಾಡಿಯಿಂದ ಪೊಲೀಸರು ಸೋಮವಾರ ವಾಪಸ್ ಕಳುಹಿಸಿದ್ದಾರೆ.
ಕೇರಳದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ನಿರ್ಬಂಧಗಳನ್ನು ಬಿಗಿಗೊಳಿಸಿದ್ದು ಮತ್ತು ರಾಜ್ಯಕ್ಕೆ ಪ್ರವೇಶಿಸುವ ಪ್ರತಿಯೊಬ್ಬ ವ್ಯಕ್ತಿಯನ್ನು ತಪಾಸಣೆ ಮಾಡುತ್ತಿರುವುದರಿಂದ ಅಂತಾರಾಜ್ಯ ಗಡಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಳವಾಗಿದೆ.
ಕೇರಳದಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳನ್ನು ತಡೆಗಟ್ಟಲು ಕರ್ನಾಟಕ ಸರ್ಕಾರ ಶನಿವಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಅಂತರಾಜ್ಯ ಗಡಿಯಲ್ಲಿ ನಿಯಮವನ್ನು ಜಾರಿಗೊಳಿಸಿದ ಪರಿಣಾಮವಾಗಿ ಕೇರಳಿಗರಿಂದ ತೀವ್ರ ಪ್ರತಿರೋಧವು ಉಂಟಾಯಿತು ಹಾಗೂ ತಲಪಾಡಿ ಬಳಿಯ ಹೆದ್ದಾರಿಯಲ್ಲಿ ಸುಮಾರು 15 ನಿಮಿಷಗಳ ಕಾಲ ರಸ್ತೆ ತಡೆ ನಡೆಸಿದರು.
ಕರ್ನಾಟಕ ಸರ್ಕಾರದ ‘ಹಠಾತ್ ನಿರ್ಧಾರ’ ದಿಂದ ಕೆಲಸ, ವೈದ್ಯಕೀಯ, ಶಿಕ್ಷಣ ಮತ್ತು ಇತರ ಉದ್ದೇಶಗಳಿಗಾಗಿ ಮಂಗಳೂರಿನ ಮೇಲೆ ಅವಲಂಬಿತವಾಗಿರುವoತಹ ಕಾಸರಗೋಡಿನ ಜನರ ಮೇಲೆ ಪರಿಣಾಮ ಬೀರಿದೆ ಎಂದು ಪ್ರತಿಭಟನಾಕಾರರು ಹೇಳಿದರು. ಅವರು ಗಡಿಯಲ್ಲಿ ಕೋವಿಡ್ ಪರೀಕ್ಷಾ ವ್ಯವಸ್ಥೆಯನ್ನು ಮರಳಿ ತರಲು ಮತ್ತು ಜನರನ್ನು ಒಳಗೆ ಅನುಮತಿಸಲು ಒತ್ತಾಯಿಸಿದರು. ಹೆದ್ದಾರಿಯನ್ನು ತಡೆದಂತಹ ವ್ಯಕ್ತಿಗಳ ವಿರುದ್ಧ ಪ್ರಕರಣವನ್ನು ದಾಖಲಿಸುವುದಾಗಿ ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ ತನಕ ದಕ್ಷಿಣ ಕನ್ನಡ ಜಿಲ್ಲಾಡಳಿತ ಗಡಿಯಲ್ಲಿ ಪರೀಕ್ಷೆಗಳನ್ನು ನಡೆಸುತ್ತಿತ್ತು. ರೋಗಲಕ್ಷಣಗಳನ್ನು ಹೊಂದಿರುವoತಹ ಜನರನ್ನು ಆರ್ ಎ ಟಿ ಒಳಪಡಿಸಲಾಗುತ್ತದೆ ಮತ್ತು ಪಾಸಿಟಿವ್ ಕಂಡುಬoದಲ್ಲಿ ವಾಪಸ್ ಕಳುಹಿಸಲಾಗುತ್ತದೆ. ಹಾಗೂ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಯಿತು ನೆಗೆಟಿವ್ ಫಲಿತಾಂಶ ಕಂಡುಬoದಲ್ಲಿ ಸಂಬoಧಪಟ್ಟ ಸ್ಥಳೀಯ ಪ್ರಾಧಿಕಾರಕ್ಕೆ ಮಾಹಿತಿಯನ್ನು ನೀಡಲಾಯಿತು.
ಆರ್‌ಟಿಪಿಸಿಆರ್ ವರದಿಯಿಲ್ಲದೆ ಯಾವುದೇ ವ್ಯಕ್ತಿಯನ್ನು ತಲಪಾಡಿ ದಾಟಲು ಬಿಡುವುದಿಲ್ಲ ಮತ್ತು ನಿಯಮವನ್ನು ಜಾರಿಗೊಳಿಸಲು ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಕೆವಿ ರಾಜೇಂದ್ರರವರು ಹೇಳಿದರು.
ಸೋಮವಾರದಿಂದ ಆರಂಭವಾಗಿರುವ ಮಂಗಳೂರು ವಿಶ್ವವಿದ್ಯಾನಿಲಯದ ಸೆಮಿಸ್ಟರ್ ಪರೀಕ್ಷೆಗಳಿಗೆ ಹಾಜರಾಗಲು ಗಡಿಯಲ್ಲಿ ಬಂದ ಅನೇಕ ಮಂದಿ ಕೇರಳ ವಿದ್ಯಾರ್ಥಿಗಳು ಹಾಲ್ ಟಿಕೆಟ್ ಮತ್ತು ಕಾಲೇಜು ಗುರುತಿನ ಚೀಟಿಯನ್ನು ಒದಗಿಸಿದ ನಂತರ ಹೋಗಲು ಅನುಮತಿ ನೀಡಲಾಯಿತು.