ಶ್ರೀನಗರ : ಲಷ್ಕರ್-ಎ-ತೊಯ್ಬಾದ ಸಹ ಸಂಘಟನೆ, ಭಯೋತ್ಪಾದಕರ ಗುಂಪು ಯುನೈಟೆಡ್ ಲಿಬರೇಷನ್ ಫ್ರಂಟ್ ಕಾಶ್ಮೀರದಲ್ಲಿ ಇಬ್ಬರು ಬಿಹಾರಿ ಕಾರ್ಮಿಕರ ಭೀಕರ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದೆ.
ವಲಸಿಗರ ಮೇಲೆ ನಡೆಸಿದ ಇತ್ತೀಚಿನ ದಾಳಿಗಳ ನಡುವೆ, ಭಯೋತ್ಪಾದಕ ಸಂಘಟನೆ ವಲಸೆ ಕಾರ್ಮಿಕರಿಗೆ ಕಾಶ್ಮೀರದ ಕಣಿವೆಯನ್ನು ತೊರೆಯುವಂತೆ ಎಚ್ಚರಿಕೆಯನ್ನು ನೀಡಿದ ಮಾಹಿತಿ ಲಭಿಸಿದೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ್ ನಲ್ಲಿ ಭಾನುವಾರ ಒಂದು ಮನೆಗೆ ನುಗ್ಗಿದ ಭಯೋತ್ಪಾದಕರು ಬಿಹಾರದ ಇಬ್ಬರು ಕಾರ್ಮಿಕರನ್ನು ಗುಂಡಿಕ್ಕಿ ಕೊಂದಿದ್ದಲ್ಲದೆ ಇನ್ನೊಬ್ಬ ವ್ಯಕ್ತಿಯನ್ನು ಗಾಯಗೊಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯರಲ್ಲದವರ ಮೇಲೆ ನಡೆದ ಸರಣಿ ದಾಳಿ ಇದಾಗಿದೆ.
ಈ ತಿಂಗಳು, ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರ ಮೇಲೆ ನಡೆದ ಉದ್ದೇಶಿತ ದಾಳಿಯಲ್ಲಿ ೧೧ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.