Wednesday, November 29, 2023
Homeಆಧ್ಯಾತ್ಮರಾಜ್ಯದ ಅನಧಿಕೃತ ದಾರ್ಮಿಕ ಕಟ್ಟಡಗಳ ಪಟ್ಟಿಯಲ್ಲಿ ದ.ಕ ಜಿಲ್ಲೆ ಅಗ್ರಸ್ಥಾನ.

ರಾಜ್ಯದ ಅನಧಿಕೃತ ದಾರ್ಮಿಕ ಕಟ್ಟಡಗಳ ಪಟ್ಟಿಯಲ್ಲಿ ದ.ಕ ಜಿಲ್ಲೆ ಅಗ್ರಸ್ಥಾನ.

ಮಂಗಳೂರು: ರಾಜ್ಯದಲ್ಲಿ ಅಕ್ರಮ ಧಾರ್ಮಿಕ ಮಂದಿರಗಳನ್ನು ತೆರವುಗೊಳಿಸುವ ಕಾರ್ಯ ತೀವ್ರ ವಿವಾದದ ಸ್ವರೂಪವನ್ನು ಪಡೆದಿದೆ. ಮೈಸೂರಿನಲ್ಲಿ ಪುರಾತನ ಹಿಂದೂ ದೇವಲಾಯಗಳನ್ನು ಕೆಡವಿರುವ ಪ್ರಕರಣ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ದೇವಲಾಯ, ಮಸೀದಿ, ಚರ್ಚ್ ಹಾಗೂ ಇನ್ನಿತರ ಧಾರ್ಮಿಕ ಕೇಂದ್ರಗಳು ಸೇರಿದಂತೆ ಒಟ್ಟು 2989ಧಾರ್ಮಿಕ ಕಟ್ಟಡಗಳು ತೆರವಿಗೆ ಬಾಕಿ ಇವೆ ಎಂದು ಗುರುತಿಸಲಾಗಿದೆ . ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತ್ಯಧಿಕ  920  ಅನಧಿಕೃತ ಕಟ್ಟಡಗಳು ತೆರವಿಗೆ ಬಾಕಿ ಇದೆ ಎಂದು ಆದೇಶವನ್ನು ಹೊರಡಿಸಲಾಗಿದೆ.

2009ರಲ್ಲಿ ಸುಪ್ರೀಕೋರ್ಟ್ ಆದೇಶ ನೀಡಿದಾಗ ರಾಜ್ಯದಲ್ಲಿ 5,668 ಅನಧಿಕೃತ ಧಾರ್ಮಿಕ ಕಟ್ಟಡಗಳಿದವು. 2009ರಲ್ಲಿ ಸುಪ್ರೀಂ ಕೋರ್ಟ್ ಎಲ್ಲಾ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಂತೆ   .ಆದೇಶ . ನೀಡಿತ್ತು. ಈ ಹಿನ್ನೆಲೆಯಲ್ಲಿ ಈವರೆಗೆ 12 ವರ್ಷದಲ್ಲಿ 2,887 ದೇವಾಲಯ, ಮಸೀದಿ ಹಾಗೂ ಚರ್ಚ್‌ಗಳನ್ನು ತೆರವುಗೊಳಿಸಲಾಗಿದೆ. ಆದರೆ, ಇದೇ ಅವಧಿಯಲ್ಲಿ (2009 ಬಳಿಕ) 1 242 ಅನಧಿಕೃತ ಕಟ್ಟಡಗಳು ಮತ್ತೆ ತಲೆಯನ್ನು ಎತ್ತಿವೆ. ಈ ಪೈಕಿ 1,054 ಕಟ್ಟಡಗಳನ್ನು ತೆರವುಗೊಳಿಸಲಾಗಿದ್ದು, ಒಟ್ಟಾರೆ 2,989 ಅನಧಿಕೃತ ಕಟ್ಟಡಗಳು ತೆರವಿಗೆ ಬಾಕಿ ಇವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಇರುವ 920 ಧಾರ್ಮಿಕ ಕೇಂದ್ರಗಳು ಅನಧಿಕೃತ ಪಟ್ಟಿಯಲ್ಲಿದ್ದೂ ಈ ಪೈಕಿ  667 ದೇವಸ್ಥಾನಗಳು, 56 ಚರ್ಚ್, 186 ಮಸೀದಿ ಮತ್ತು 11 ಇತರ ಧಾರ್ಮಿಕ ಕೇಂದ್ರಗಳಾಗಿವೆ. ಈ ಮೊದಲು 1579 ಧಾರ್ಮಿಕ ಕೇಂದ್ರಗಳನ್ನು ಅನಧಿಕೃತ ಎಂದು ಗುರುತಿಸಲಾಗಿತ್ತು. ಇದರಲ್ಲಿ 1202 ದೇವಸ್ಥಾನ, 79 ಚರ್ಚ್ , 281 ಮಸೀದಿ ಮತ್ತು 17 ಇತರ ಧಾರ್ಮಿಕ ಕೇಂದ್ರಗಳಿದ್ದವು. ಈಗಾಗಲೇ 356 ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ಕೆಡವಲಾಗಿದೆ ಅದರಲ್ಲಿ 267 ದೇವಸ್ಥಾನ, 13 ಚರ್ಚ್ , 71 ಮಸೀದಿ ಮತ್ತು 5 ಇತರ ಧಾರ್ಮಿಕ ಕೇಂದ್ರಗಳಾಗಿವೆ. ಅನಧಿಕೃತ ಎಂದು ಗುರುತಿಸಲಾದ ಧಾರ್ಮಿಕ ಕೇಂದ್ರಗಳಲ್ಲಿ 152 ಕ್ರಮಬದ್ದ ಮಾಡಲಾಗಿದೆ. ಅದರಲ್ಲಿ 124 ದೇವಸ್ಥಾನ, 7 ಚರ್ಚ್ , 20 ಮಸೀದಿ ಮತ್ತು 1 ಇತರ ಧಾರ್ಮಿಕ ಕೇಂದ್ರವಾಗಿದೆ.

ಅನಧಿಕೃತ ಎಂದು ಗುರುತಿಸಲಾದ ಧಾರ್ಮಿಕ ಕೇಂದ್ರಗಳಲ್ಲಿ 151ನ್ನು ಕೈಬಿಡಲಾಗಿದ್ದು, ಅದರಲ್ಲಿ 108 ದೇವಸ್ಥಾನ, 19 ಚರ್ಚ್, 23 ಮಸೀದಿ ಮತ್ತು 1 ಇತರ ಧಾರ್ಮಿಕ ಕೇಂದ್ರಗಳಾಗಿದೆ.  920  ಧಾರ್ಮಿಕ ಕೇಂದ್ರಗಳನ್ನು ಕೆಡವಲು ಸಂಬoಧಿಸಿದoತೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ

Most Popular

Recent Comments