ಬೆಂಗಳೂರು: ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಎಸ್ ವಿದ್ಯಾಶಂಕರ್‌ರವರ ವಿರುದ್ಧ ಅಧಿಕೃತವಾಗಿ ದೂರು ದಾಖಲಾಗಿದೆ.
ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ದೂರುದಾರರಿಗೆ ಸೂಕ್ತ ಕ್ರಮವನ್ನು ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.
ದೂರುದಾರರಾಗಿರುವಂತಹ ಮಾಜಿ ಉಪಕುಲಪತಿ ಎನ್ ಎಸ್ ರಾಮೇ ಗೌಡ ಮತ್ತು ನಿವೃತ್ತ ಡೀನ್ ಡಾ ಚಂಬಿ ಪುರಾಣಿಕ್-ಶಿಕ್ಷಕರ ದಿನಾಚರಣೆಯಂದು ಕುಲಪತಿಗಳನ್ನು ಭೇಟಿ ಮಾಡಿ, ಕರ್ನಾಟಕ ಮುಕ್ತ ವಿವಿ ಉಪಕುಲಪತಿ ಡಾ. ವಿದ್ಯಾಶಂಕರ್‌ರವರ ವಿರುದ್ಧ ಗಂಭೀರ ಆರೋಪಗಳನ್ನು ಪಟ್ಟಿ ಮಾಡಿ 33 ಪುಟಗಳಲ್ಲಿ ದೂರನ್ನು ದಾಖಲಿಸಿದ್ದಾರೆ.
ರಾಜ್ಯಪಾಲರನ್ನು ಭೇಟಿ ಮಾಡಿದ ನಂತರ ಮಾತನಾಡಿದ ರಾಮೇಗೌಡ ಮತ್ತು ಪುರಾಣಿಕ್, ವಿವಿಯಲ್ಲಿ ಅನಗತ್ಯವಾಗಿರುವಂತಹ ನಿರ್ಮಾಣಗಳನ್ನು ಕೈಗೊಳ್ಳುವ ಮೂಲಕ ವಿದ್ಯಾಸಾಗರ್ ವಿಶ್ವ ವಿದ್ಯಾನಿಲಯಕ್ಕೆ 400 ಕೋಟಿ ರೂ ಹಣವನ್ನು ಹೊರೆಯಾಗಿಸುತ್ತಿದ್ದಾರೆ ಎಂದು ಆರೋಪವನ್ನು ಮಾಡಿದ್ದಾರೆ.
ಈ ವಿಶ್ವ ವಿದ್ಯಾನಿಲಯವು ಅನೇಕ ವ್ಯಕ್ತಿಗಳಿಂದ ಮೆಚ್ಚುಗೆಯನ್ನು ಪಡೆದಿದೆ. ಆದರೆ ಇಂದು ಇವರಿಂದ ಹಾಗೂ ಇಂತಹ ವ್ಯಕ್ತಿಯಿಂದ ವಿಶ್ವ ವಿದ್ಯಾಲಯವು ಪಡೆದುಕೊಂಡಿರುವ ಪ್ರಶಂಸೆಯು ನಾಶವಾಗುತ್ತಿದೆ ಇಂತಹ ಘಟನೆ ಇದೇ ರೀತಿಯಲ್ಲಿ ಮುಂದುವರಿದರೆ ಶೀಘ್ರದಲ್ಲಿ ವಿವಿಗೇ ಮರಣೋತ್ತರ ಪರೀಕ್ಷೆಯನ್ನು ಮಾಡಬೇಕಾಗುತ್ತದೆ ಎಂದು ರಾಜ್ಯಪಾಲರಿಗೆ ತಿಳಿಸಿರುವುದಾಗಿ ಮಾಹಿತಿಯನ್ನು ನೀಡಿದ್ದಾರೆ.