Sunday, October 1, 2023
Homeಇತರೆಕರ್ನಾಟಕದಿಂದ ಗೋವಾಕ್ಕೆ ಪ್ರತಿನಿತ್ಯ 2000 ಕೆಜಿ ಗೋಮಾಂಸ ಮತ್ತು ಎಮ್ಮೆ ಮಾಂಸ ಸರಬರಾಜು : ...

ಕರ್ನಾಟಕದಿಂದ ಗೋವಾಕ್ಕೆ ಪ್ರತಿನಿತ್ಯ 2000 ಕೆಜಿ ಗೋಮಾಂಸ ಮತ್ತು ಎಮ್ಮೆ ಮಾಂಸ ಸರಬರಾಜು : ಗೋವಾ ಸಿಎಂ ಮಾಹಿತಿ

ಹೊಸದಿಲ್ಲಿ: ಕರ್ನಾಟಕದಿಂದ ಪ್ರತಿದಿನ ದನ ಮತ್ತು ಎಮ್ಮೆಯ ಮಾಂಸ 2,100 ಕೆಜಿಗೂ ಅಧಿಕ ಗೋವಾದಲ್ಲಿ ಬಳಕೆಯಾಗುತ್ತಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರಾಜ್ಯ ವಿಧಾನಸಭೆಗೆ ಮಂಗಳವಾರ ಮಾಹಿತಿಯನ್ನು ನೀಡಿದ್ದಾರೆ.

ಗೋವಾ ವಿಧಾನಸಭೆಯ ಎರಡು ದಿನದ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕ ಅಲೆಕ್ಸೋ ರೆಜಿನಾಲ್ಡೋ ಅವರಿಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ಲಭಿಸಿದೆ. ಕಳೆದ ಆರು ತಿಂಗಳುಗಳ ಅವಧಿಯಲ್ಲಿ ಕರ್ನಾಟಕದ ಮಾಂಸ ಮಾರಾಟಗಾರರಿಂದ ಗೋವಾ 388 ಟನ್ ದನ ಮತ್ತು ಎಮ್ಮೆಯ ಮಾಂಸವನ್ನು ಖರೀದಿಸಿದೆ ಎಂದು ಅವರು ಮಾಹಿತಿಯನ್ನು ನೀಡಿದ್ದಾರೆ.

ಕರ್ನಾಟಕದಿಂದ ಪ್ರತಿ ದಿನ ಸರಾಸರಿ 2,120 ಮಾಂಸ ಸರಬರಾಜಾಗುತ್ತಿದೆ ಎಂಬುದು ಸರ್ಕಾರ ಸಂಗ್ರಹಿಸಿದ ಮಾಂಸ ಪರಿಶೀಲನೆಯ ವೆಚ್ಚಗಳಿಂದ ತಿಳಿದು ಬರುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಕರ್ನಾಟಕದಲ್ಲಿ ಗೋಹತ್ಯೆ ತಡೆ ಮತ್ತು ಸಂರಕ್ಷಣಾ ಕಾಯಿದೆ 2020 ಜಾರಿಯಾದ ನಂತರ ಗೋವಾದಲ್ಲಿ ಹಲವು ತಿಂಗಳುಗಳ ಕಾಲ ಮಾಂಸದ ಕೊರತೆ ಎದುರಾಗಿತ್ತು. ಮಹಾರಾಷ್ಟ್ರದಲ್ಲಿಯೂ ಇಂತಹುದೇ ಕಾನೂನು ಜಾರಿಯಾದ ನಂತರ ಗೋವಾಗೆ ತಾಜಾ ಮಾಂಸವನ್ನು ಸರಬರಾಜು ಮಾಡುವ ಏಕೈಕ ರಾಜ್ಯ ಕರ್ನಾಟಕವಾಗಿದೆ. ಗೋವಾದ ಒಟ್ಟು ಜನಸಂಖ್ಯೆಯ ಪೈಕಿ ಶೇ 30ಕ್ಕೂ ಅಧಿಕ ಮಂದಿ ಗೋಮಾಂಸವನ್ನು ಸೇವಿಸುತ್ತಾರೆ. ಗೋಮಾಂಸಕ್ಕಾಗಿ ಗೋವಾದ ಜನರು ಮಹಾರಾಷ್ಟ್ರ ಮತ್ತು ಕರ್ನಾಟಕವನ್ನು ಅವಲಂಬಿಸಿದ್ದಾರೆ ಎಂದು ತಿಳಿಸಿದ್ದಾರೆ.

Most Popular

Recent Comments