Sunday, June 4, 2023
Homeಕರಾವಳಿದಕ್ಷಿಣ ಕನ್ನಡದಲ್ಲಿ ಮತ್ತೆ ಜೋರಾದ ಅರುಣ್ ಕುಮಾರ್ ಪುತ್ತಿಲ ಹವಾ; ದ. ಕ. ಲೋಕಸಭಾ ಕ್ಷೇತ್ರಕ್ಕೆ...

ದಕ್ಷಿಣ ಕನ್ನಡದಲ್ಲಿ ಮತ್ತೆ ಜೋರಾದ ಅರುಣ್ ಕುಮಾರ್ ಪುತ್ತಿಲ ಹವಾ; ದ. ಕ. ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡುವಂತೆ ಟ್ವಿಟರ್ ಅಭಿಯಾನ

ದಕ್ಷಿಣ ಕನ್ನಡ: (ನ್ಯೂಸ್ ಮಲ್ನಾಡ್ ಕರಾವಳಿ ಡೆಸ್ಕ್) ಕರಾವಳಿ ಭಾಗದಲ್ಲಿ ಅರುಣ್ ಪುತ್ತಿಲ ಹವಾ ಮತ್ತಷ್ಟು ಹೆಚ್ಚಾಗಿದೆ. ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ಇದೀಗ ಲೋಕಸಭಾ ಎಲೆಕ್ಷನ್ ಬಿಸಿ ಹೆಚ್ಚಾಗಿದೆ. ಅರುಣ್ ಪುತ್ತಿಲಗೆ ಎಂಪಿ ಟಿಕೆಟ್ ನೀಡಲು #PuthilaForLoksahba ಟ್ವಿಟರ್ ಅಭಿಯಾನ ಆರಂಭವಾಗಿದೆ.

ಇಂದು ಇಡೀ ದಿನ #puttilaforloksabha ಹ್ಯಾಶ್ ಟ್ಯಾಗ್ ನಡಿ ಟ್ವೀಟ್ ಅಭಿಯಾನ ಶುರುವಾಗಿದೆ. ನಮ್ಮ ಮುಂದಿನ ಸಂಸದರು ಅರುಣ್ ಕುಮಾರ್ ಪುತ್ತಿಲ ಎಂದು ಅಭಿಯಾನ ಆರಂಭವಾಗಿದ್ದು, ಇದೀಗ ವಿಜೆಪಿ ಹೈಕಮಾಂಡ್ ಗೆ ಮತ್ತೊಂದು ತಲೆನೋವು ಶುರುವಾಗಿದೆ.

ಇಂದು ಬೆಳಿಗ್ಗೆ 9 ಗಂಟೆಯಿಂದ ಟ್ವೀಟ್ ಅಭಿಯಾನ ನಡೆಸಲು ಕರೆ ನೀಡಿದ್ದು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯಾನಾಥ್‌ ಹಾಗೂ ಜೆಪಿ ನಡ್ಡಾ ಅವರಿಗೆ ಟ್ಯಾಗ್ ಮಾಡಲು ಮನವಿ ಮಾಡಲಾಗಿದೆ. ಪ್ರಧಾನಿ ಮೋದಿ ಸೇರಿ ರಾಷ್ಟ್ರೀಯ ನಾಯಕರಿಗೆ ಟ್ವೀಟ್ ಮೂಲಕ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅರುಣ್ ಪುತ್ತಿಲ ಪಕ್ಷೇತರನಾಗಿ ನಿಂತು 60 ಸಾವಿರ ಮತಗಳನ್ನ ಪಡೆದಿದ್ದಾರೆ. ಅರುಣ್ ಪುತ್ತಿಲ ಪುತ್ತೂರಿನಲ್ಲಿ ಬಿಜೆಪಿಯನ್ನೇ ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ. ಪುತ್ತಿಲ ಮತ ಬೇಟೆಯ ಬಗ್ಗೆ ಬಿಜೆಪಿ ಹೈಕಮಾಂಡ್‌ಗೂ ಮಾಹಿತಿ ಇದೆ. ಸದ್ಯ ಟ್ವೀಟ್ ಅಭಿಯಾನದ ಮೂಲಕ ಮತ್ತೊಮ್ಮೆ ಶಕ್ತಿ ಪ್ರದರ್ಶನಕ್ಕೆ ಪುತ್ತಿಲ ಅಭಿಮಾನಿಗಳು ಮುಂದಾಗಿದ್ದಾರೆ.

“ಅರುಣ್ ಕುಮಾರ್ ಪುತ್ತಿಲ ಅವರಿಗಿರುವ ಜನ ಬೆಂಬಲ ವಿಧಾನಸಭಾ ಚುನಾವಣೆಯಲ್ಲಿ ಸಾಭೀತಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ನಡೆಯ ಕುರಿತಂತೆ ಕರಾವಳಿ ಭಾಗದ ಹಿಂದು ಕಾರ್ಯಕರ್ತರಿಗೆ ಬೇಸರವಿದೆ. ಪುತ್ತೂರಿನಲ್ಲಿ ಹಿಂದು ಕಾರ್ಯಕರ್ತರ ಮೇಲೆ ಪೊಲೀಸರು ವಿಚಾರಣೆ ನೆಪದಲ್ಲಿ ಅಮಾನುಷವಾಗಿ ಥಳಿಸಿರುವುದರ ಹಿಂದೆ ಯಾರಿದ್ದಾರೆ ಎನ್ನುವುದು ದಕ್ಷಿಣ ಕನ್ನಡದ ಕಾರ್ಯಕರ್ತರಿಗೆ ತಿಳಿದಿದೆ. ಈ ಬಾರಿ ದಕ್ಷಿಣ ಕನ್ನಡದ ಲೋಕಸಭಾ ಟಿಕೆಟ್ ಅರುಣ್ ಕುಮಾರ್ ಪುತ್ತಿಲ ಅವರಿಗೆ ನೀಡಬೇಕು ಎಂದು ಟ್ವಿಟರ್ ಅಭಿಯಾನ ಪ್ರಾರಂಭಿಸುವುದ ಮೂಲಕ ಮೋದಿಜಿ ಸೇರಿದಂತೆ ಕೇಂದ್ರ ಬಿಜೆಪಿ ನಾಯಕರ ಗಮನ ಸೆಳೆಯುವ ಕೆಲಸ ನಡೆಯುತ್ತಿದೆ. ಮುಂದಿನ ದಿನದಲ್ಲಿ ಈ ಅಭಿಯಾನವನ್ನು ದೊಡ್ಡ ಮಟ್ಟದಲ್ಲಿ ಮಾಡಲಾಗುವುದು.” – ಸುರೇಶ್ ಕುಡ್ಲ, ಟ್ವಿಟರ್ ಅಭಿಯಾನ ತಂಡದ ಸದಸ್ಯ

ದ. ಕ ಲೋಕಸಭಾ ಟಿಕೆಟ್ ನೀಡುವಂತೆ ಒತ್ತಾಯ:

ಪುತ್ತಿಲಗೆ ದ‌.ಕ ಲೋಕಸಭಾ ಸಂಸದ ಸ್ಥಾನದ ಟಿಕೆಟ್ ನೀಡಲು ಟ್ವೀಟ್ ಅಭಿಯಾನ ನಡೆಯುತ್ತಿದೆ. ಸದ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್‌ ದ.ಕ ಲೋಕಸಭಾ ಸಂಸದರಾಗಿದ್ದಾರೆ. ಈ ಬಾರಿ ಕಟೀಲ್ ಬದಲಿಸಿ ಪುತ್ತಿಲಗೆ ಟಿಕೆಟ್ ನೀಡಲು ಟ್ವೀಟ್ಟರ್ ವಾರ್ ನಡೆಯುತ್ತಿದೆ.

ರಾಜ್ಯಾಧ್ಯಕ್ಷ ನಳೀನ್ ಕುಮಾರ್ ವಿರುದ್ಧ ಹಿಂದು ಕಾರ್ಯಕರ್ತರು ಗರಂ:

ಇನ್ನು ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬಿಜೆಪಿಗೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್, ಸದಾನಂದಗೌಡ ಹಾಗೂ ಪುತ್ತೂರು ಮಾಜಿ ಶಾಸಕ ಸಂಜೀವ್ ಮಠಂದೂರು ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಸದಾನಂದಗೌಡ ಹಾಗೂ ನಳೀನ್ ಕುಮಾರ್ ಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬ್ಯಾನರ್ ಅಳವಡಿಸಲಾಗಿತ್ತು. ಹೀಗೆ ಬ್ಯಾನರ್ ಅಳವಡಿಸಿದ್ದಕ್ಕೆ ಕಾರ್ಯಕರ್ತರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನೆಪದಲ್ಲಿ ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ನೀಡಿದ್ದರು. ಇದೀಗ ರೊಚ್ಚಿಗೆದ್ದಿರೋ ಕಾರ್ಯಕರ್ತರು ಇದನ್ನು ಮಾಡಿಸಿದ್ದು ಬಿಜೆಪಿ ನಾಯಕರೇ ಎಂದು ಆಕ್ರೋಶ ಹೊರಹಾಕಿದ್ದಾರೆ. ಆದ್ರೆ ಬಿಜೆಪಿ ಮಾತ್ರ ಈ ಆರೋಪವನ್ನು ತಳ್ಳಿಹಾಕಿದೆ.

Most Popular

Recent Comments