ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ನೀಡಲಾಗಿರುವ ಎಲ್ಲ ರಾಷ್ಟ್ರೀಯ ಪ್ರಶಸ್ತಿಗಳನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಶಿವಸೇನೆ ಸರ್ಕಾರವನ್ನು ಒತ್ತಾಯಿಸಿದೆ.
” 1947ರಲ್ಲಿ ದೊರೆತಿದ್ದು ಸ್ವಾತಂತ್ರ್ಯವಲ್ಲ ಅದು ಕೇವಲ ಭಿಕ್ಷೆ” ಎಂದು ಹೇಳಿಕೆಯನ್ನು ನೀಡಿರುವ ಕಂಗನಾ ರಣಾವತ್ ಅವರ ಹೇಳಿಕೆಯನ್ನು ವಿರೋಧಿಸಿದ ಶಿವಸೇನೆ ಕಂಗನಾ ಅವರು ತನಗೆ ದೇಶದ ಮೇಲಿರುವ ಅಭಿಮಾನವನ್ನು ಈ ರೀತಿಯಾಗಿ ವ್ಯಕ್ತಪಡಿಸಿದ್ದಾರೆ.
ದೇಶದ ಸ್ವತಂತ್ರಕ್ಕಾಗಿ ಕೋಟ್ಯಂತರ ಭಾರತೀಯ ಜನರು ಬೆವರು, ರಕ್ತ, ಕಣ್ಣೀರನ್ನು ಸುರಿಸಿದ್ದು ಮಾತ್ರವಲ್ಲದೇ ತಮ್ಮ ದೇಹವನ್ನೇ ದೇಶಕ್ಕಾಗಿ, ದೇಶದ ಸ್ವತಂತ್ರಕ್ಕಾಗಿ ಹೋರಾಡಿ ತಮ್ಮ ಜೀವವನ್ನು ತ್ಯಾಗ ಮಾಡಿ ಸ್ವತಂತ್ರವನ್ನು ತಂದುಕೊಟ್ಟಿದ್ದಾರೆ, ನಟಿ ಈ ರೀತಿಯ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವುದು ಅವರಿಗೆ ದೇಶದ ಮೇಲಿರುವ ಪ್ರೀತಿಯನ್ನು, ಗೌರವವನ್ನು ತೋರಿಸುತ್ತದೆ.
ನಟಿ ಹೇಳಿರುವ ಹೇಳಿಕೆಯನ್ನು ಕೇಳಿ ದೇಶದ ಸ್ವತಂತ್ರಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟಿದ್ದ ಹೋರಾಟಗಾರರ ಮೂರ್ತಿಗಳು ಅಳುತ್ತಿವೆ ಎಂದು ಹೇಳಿದರು.
ಇಲ್ಲಿಯ ತನಕ ನಮ್ಮ ದೇಶಕ್ಕೆ ಸ್ವಾತಂತ್ರ ಸಿಕ್ಕಿದ ವಿಷಯದ ಬಗ್ಗೆ ಯಾರು ಅವಮಾನ ಮಾಡಿರಲಿಲ್ಲ, ಕಂಗನಾ ಅವರಿಗೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ನೀಡಿರುವಂತಹ ಎಲ್ಲಾ ಗೌರವಾನ್ವಿತ ರಾಷ್ಟೀಯ ಪ್ರಶಸ್ತಿಯನ್ನು ಹಿಂಪಡೆದುಕೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.